ʼದಿಲೀಪ್‌ಕುಮಾರ್ʼ ರೆಹಮಾನ್‌ ಆಗಿದ್ದು ಹೇಗೆ..? ಖ್ಯಾತ ಸಂಗೀತ ನಿರ್ದೇಶಕನ ಮತಾಂತರದ ಹಿಂದಿದೆ ರೋಚಕ ಕಥೆ

AR Rahman real religion : ಗಾಯಕ ಮತ್ತು ಸಂಗೀತ ಸಂಯೋಜಕ ಎ.ಆರ್. ರೆಹಮಾನ್ ಅವರ ಮತಾಂತರದ ಬಗ್ಗೆ ಹೆಚ್ಚು ಚರ್ಚೆ ನಡೆಯುತ್ತಿದೆ. ಹಿಂದೂ ಕುಟುಂಬದಲ್ಲಿ ಜನಿಸಿದ ಅವರು ಧರ್ಮ ಬದಲಾವಣೆ ಮಾಡಲು ಕಾರಣವೇನು ಅಂತ ಅನೇಕರು ತಲೆಕೆಡಿಸಿಕೊಂಡಿದ್ದಾರೆ. ಈ ಕುರಿತು ಮಾಹಿತಿ ಇಲ್ಲಿದೆ 

Written by - Krishna N K | Last Updated : Jan 11, 2024, 02:42 PM IST
  • ಎ.ಆರ್.‌ ರೆಹಮಾನ್ ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ತಮ್ಮ ಸಂಗೀತದಿಂದ ಜನಪ್ರಿಯರಾಗಿದ್ದಾರೆ.
  • ರೆಹಮಾನ್ ಹಿಂದೂ ಕುಟುಂಬದಲ್ಲಿ ಹುಟ್ಟಿದ್ದು ಬಹುತೇಕ ಎಲ್ಲರಿಗೂ ಗೊತ್ತಿರುವ ವಿಚಾರ.
  • ಇದೀಗ ಅವರು ಮತಾಂತರ ಏಕಾದರೂ ಅಂತ ಗೂಗಲ್‌ನಲ್ಲಿ ಸರ್ಚ್‌ ಮಾಡುತ್ತಿದ್ದಾರೆ.
 ʼದಿಲೀಪ್‌ಕುಮಾರ್ʼ ರೆಹಮಾನ್‌ ಆಗಿದ್ದು ಹೇಗೆ..? ಖ್ಯಾತ ಸಂಗೀತ ನಿರ್ದೇಶಕನ ಮತಾಂತರದ ಹಿಂದಿದೆ ರೋಚಕ ಕಥೆ title=

AR Rahman : ಖ್ಯಾತ ಗಾಯಕ ಮತ್ತು ಸಂಗೀತ ಸಂಯೋಜಕ ರೆಹಮಾನ್ ಅವರು ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ತಮ್ಮ ಸಂಗೀತದಿಂದ ಜನಪ್ರಿಯರಾಗಿದ್ದಾರೆ. ಅವರ ಹಾಡುಗಳು ಮತ್ತು ಸಂಗೀತ ಬಹಳ ಜನಪ್ರಿಯವಾಗಿವೆ. ರೆಹಮಾನ್ ಹಿಂದೂ ಕುಟುಂಬದಲ್ಲಿ ಹುಟ್ಟಿದ್ದು ಬಹುತೇಕ ಎಲ್ಲರಿಗೂ ಗೊತ್ತಿರುವ ವಿಚಾರ. ಇದೀಗ ಅವರು ಮತಾಂತರ ಏಕಾದರೂ ಅಂತ ಗೂಗಲ್‌ನಲ್ಲಿ ಸರ್ಚ್‌ ಮಾಡುತ್ತಿದ್ದಾರೆ.

ಎ.ಆ.ರ್ ರೆಹಮಾನ್ ಹಿಂದೂ ಕುಟುಂಬದಲ್ಲಿ ಜನಿಸಿದರು. ಅವರ ನಿಜವಾದ ಹೆಸರು ದಿಲೀಪ್‌ಕುಮಾರ್. ಗಾಯಕ 1989 ರಲ್ಲಿ 23 ನೇ ವಯಸ್ಸಿನಲ್ಲಿ ಇಸ್ಲಾಂಗೆ ಮತಾಂತರಗೊಂಡರು. ನಂತರ ಅವರು ತಮ್ಮ ಹೆಸರನ್ನು ರೆಹಮಾನ್ ಎಂದು ಬದಲಾಯಿಸಿಕೊಂಡರು. ಇಸ್ಲಾಂ ಎಂದರೆ ಸರಳ ಜೀವನ ಎಂದು ಅವರು ಅನೇಕ ಬಾರಿ ಹೇಳಿದ್ದಾರೆ. ಸಧ್ಯ ಟಾಕ್ ಶೋನಲ್ಲಿ ಎಆರ್ ರೆಹಮಾನ್ ಅವರು ಇಸ್ಲಾಂಗೆ ಏಕೆ ಮತಾಂತರಗೊಂಡರು ಎಂಬುವುದರ ಬಗ್ಗೆ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಭಾರತದ ಅತ್ಯಂತ ಶ್ರೀಮಂತ ಡಾನ್ಸ್‌ ಕೊರಿಯೋಗ್ರಫರ್‌ ಯಾರು ಗೊತ್ತೆ..! 1 ಸಾಂಗ್‌ಗೆ 50 ಲಕ್ಷ ರೂ..

ಕ್ಯಾನ್ಸರ್‌ನಿಂದ ಬಳಲುತ್ತಿದ್ದ ತಮ್ಮ ತಂದೆ ತನ್ನ ಕೊನೆಯ ದಿನಗಳಲ್ಲಿ ಸೂಫಿಯಿಂದ ಗುಣಮುಖರಾದರು. ಕೆಲವು ವರ್ಷಗಳ ನಂತರ ಎ.ಆರ್‌. ರೆಹಮಾನ್ ತಮ್ಮ ಕುಟುಂಬದೊಂದಿಗೆ ಸೂಫಿಯನ್ನು ಭೇಟಿಯಾದರು ಮತ್ತು ಅವರ ಮಾತುಗಳಿಂದ ಬಹಳ ಪ್ರಭಾವಿತರಾಗಿ, ಮತಾಂತರಗೊಳ್ಳಲು ನಿರ್ಧರಿಸಿದ್ದಾಗಿ ತಿಳಿಸಿದ್ದಾರೆ.

ಎಆರ್ ರೆಹಮಾನ್ ಅವರು 6 ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು, ಎರಡು ಆಸ್ಕರ್ ಪ್ರಶಸ್ತಿಗಳು, ಎರಡು ಗ್ರ್ಯಾಮಿ ಪ್ರಶಸ್ತಿಗಳು, ಒಂದು ಗೋಲ್ಡನ್ ಗ್ಲೋಬ್ ಪ್ರಶಸ್ತಿಯನ್ನು ಪಡೆದಿದ್ದಾರೆ. ಅವರ ಪತ್ನಿ ಹೆಸರು ಸೈರಾ ಬಾನೋ, ಅವರಿ ಮೂವರು ಮಕ್ಕಳಿದ್ದು ಖತೀಜಾ, ರಹೀನಾ ಮತ್ತು ಅಮೀನ್ ಅವರ ಹೆಸರುಗಳು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News