ಇಂದು KGF Chapter 2 ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ

ಯಶ್ ಅಭಿನಯದ KGF Chapter 2 ಚಿತ್ರ ಬಿಡುಗಡೆ ದಿನಾಂಕ ಇಂದು ಘೋಷಣೆಯಾಗಲಿದೆ ಎಂದು ಚಿತ್ರದ ತಂಡ ಘೋಷಿಸಿದೆ.ತಮ್ಮ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಘೋಷಿಸಿರುವ ಪ್ರಕಾರ ಬಿಡುಗಡೆಯ ದಿನಾಂಕವನ್ನು ಅಧಿಕೃತವಾಗಿ ಇಂದು ಸಂಜೆ 6.32 ಕ್ಕೆ ಪ್ರಕಟಿಸಲಾಗುತ್ತದೆ ಎನ್ನಲಾಗಿದೆ.

Last Updated : Jan 29, 2021, 12:13 PM IST
  • ಈಗಾಗಲೇ ತನ್ನ ಟಿಸರ್ ನಿಂದಲೇ ಇಡೀ ಜಗತ್ತಿನ ಗಮನ ಸೆಳೆದಿರುವ KGF Chapter 2 ಭಾರಿ ನಿರೀಕ್ಷೆಯನ್ನು ಹುಟ್ಟುಹಾಕಿದೆ.
  • ಈ ಚಿತ್ರದ ಟೀಸರ್ ಬಿಡುಗಡೆಯಾದ ಕೇವಲ 25 ದಿನಗಳಲ್ಲಿ 16 ಕೋಟಿಗೂ ಅಧಿಕ ವಿಕ್ಷಣೆಯನ್ನು ಪಡೆದುಕೊಂಡಿದೆ.
ಇಂದು KGF Chapter 2 ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ title=
Photo Courtesy: Twitter

ಬೆಂಗಳೂರು: ಯಶ್ ಅಭಿನಯದ KGF Chapter 2 ಚಿತ್ರ ಬಿಡುಗಡೆ ದಿನಾಂಕ ಇಂದು ಘೋಷಣೆಯಾಗಲಿದೆ ಎಂದು ಚಿತ್ರದ ತಂಡ ಘೋಷಿಸಿದೆ.ತಮ್ಮ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಘೋಷಿಸಿರುವ ಪ್ರಕಾರ ಬಿಡುಗಡೆಯ ದಿನಾಂಕವನ್ನು ಅಧಿಕೃತವಾಗಿ ಇಂದು ಸಂಜೆ 6.32 ಕ್ಕೆ ಪ್ರಕಟಿಸಲಾಗುತ್ತದೆ ಎನ್ನಲಾಗಿದೆ.

ಇದನ್ನೂ ಓದಿ :Rocking Star : ರಾಕಿಭಾಯ್ ಮುಂದಿನ ಸಿನಿಮಾ ಯಾವುದು..? ಡೈರೆಕ್ಟರ್ ಯಾರು? ಬಜೆಟ್ ಎಷ್ಟು ಗೊತ್ತಾ..?

ಈಗಾಗಲೇ ತನ್ನ ಟಿಸರ್ ನಿಂದಲೇ ಇಡೀ ಜಗತ್ತಿನ ಗಮನ ಸೆಳೆದಿರುವ KGF Chapter 2 ಭಾರಿ ನಿರೀಕ್ಷೆಯನ್ನು ಹುಟ್ಟುಹಾಕಿದೆ.ಈ ಚಿತ್ರದ ಟೀಸರ್ ಬಿಡುಗಡೆಯಾದ ಕೇವಲ 25 ದಿನಗಳಲ್ಲಿ 16 ಕೋಟಿಗೂ ಅಧಿಕ ವಿಕ್ಷಣೆಯನ್ನು ಪಡೆದುಕೊಂಡಿದೆ.

ಅಷ್ಟೇ ಅಲ್ಲದೆ ಈ ಚಿತ್ರದ ಬಾಲಿವುಡ್ ರೈಟ್ಸ್ ಈಗ ಭಾರಿ ಮೊತ್ತಕ್ಕೆ ಮಾರಾಟವಾಗಿದೆ. ಒಂದು ಮೂಲಗಳ ಪ್ರಕಾರ ಎಕ್ಸೆಲ್ ಎಂಟರ್ ಟೈನ್ಮೆಂಟ್ KGF Chapter 2 ಚಿತ್ರದ ಹಿಂದಿ ಹಕ್ಕುಗಳನ್ನು ಖರೀದಿಸಿದೆ. ಒಂದು ಮೂಲಗಳ ಪ್ರಕಾರ 90 ಕೋಟಿಗೂ ಅಧಿಕ ಮೊತ್ತಕ್ಕೆ ಈ ಚಿತ್ರದ ರೈಟ್ಸ್ ಗಳು ಮಾರಾಟವಾಗಿ ಎನ್ನಲಾಗುತ್ತಿದೆ.

ಇದನ್ನೂ ಓದಿ :'KGF Chapter 2' ಟೀಸರ್ ಬಿಡುಗಡೆಯಾಗಿ 24 ಗಂಟೆಗಳಲ್ಲಿ ಹೊಸ ದಾಖಲೆ

ಈ ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ (Yash) ಜೊತೆ ಸಂಜಯ್ ದತ್ (Sanjay Dutt), ರವೀನಾ ಟಂಡನ್ (Raveena Tandon)  ಕೂಡಾ ನಟಿಸುತ್ತಿದ್ದಾರೆ. ಚಿತ್ರದ ಬಗ್ಗೆ ಅಭಿಮಾನಿಗಳಲ್ಲಿ ಅಪಾರ ಕುತೂಹಲ ಸೃಷ್ಟಿಯಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News