Yash: ಮೂರಕ್ಷರ ಮಂತ್ರ ʼKGFʼನಿಂದ ಹಣೆಬರವನ್ನೇ ಬದಲಾಯಿಸಿಕೊಂಡ ರಾಕಿಬಾಯ್‌ ಆಸ್ತಿ ವಿವರ ಕೇಳಿದ್ರೆ ಶಾಕ್‌ ಆಗ್ತೀರಾ!

Rocking Star Yash: ಕೆಜಿಎಫ್ ಚಿತ್ರದ ಮೂಲಕ ವಿಶ್ವದಾದ್ಯಂತ ಖ್ಯಾತಿ ಗಳಿಸಿದ ಕನ್ನಡ ನಟ ಯಶ್ ಬಹುಕೋಟಿಯ ಒಡೆಯ.. ಸದ್ಯ ಇವರ ಆಸ್ತಿ ವಿವರದ ಕುರಿತು ಮಾಹಿತಿಯೊಂದು ಹೊರಬಿದ್ದಿದೆ..   

Written by - Savita M B | Last Updated : Nov 22, 2023, 04:54 PM IST
  • ಯಶ್ ಹುಟ್ಟಿದ್ದು ಕರ್ನಾಟಕ ರಾಜ್ಯದ ಭುವನಹಳ್ಳಿ ಎಂಬ ಗ್ರಾಮದಲ್ಲಿ.
  • ಕೆಜಿಎಫ್ ನಟ ಯಶ್ ಅವರ ವೃತ್ತಿ ಜೀವನದಲ್ಲಿ ದೊಡ್ಡ ತಿರುವು ಸಿಕ್ಕಿತು
  • ಕೆಜಿಎಫ್ ಚಿತ್ರದ ಮೂಲಕ ಖ್ಯಾತಿ ಗಳಿಸಿದ ನಟ ಯಶ್ ಅವರ ಆಸ್ತಿ ವಿವರ ಇಲ್ಲಿದೆ
Yash: ಮೂರಕ್ಷರ ಮಂತ್ರ ʼKGFʼನಿಂದ ಹಣೆಬರವನ್ನೇ ಬದಲಾಯಿಸಿಕೊಂಡ ರಾಕಿಬಾಯ್‌ ಆಸ್ತಿ ವಿವರ ಕೇಳಿದ್ರೆ ಶಾಕ್‌ ಆಗ್ತೀರಾ!  title=

Yash: ಯಶ್ ಹುಟ್ಟಿದ್ದು ಎಂಬ ಗ್ರಾಮದಲ್ಲಿ. ಇವರಿಗೆ ತಂದೆ ತಾಯಿ ಇಟ್ಟ ಹೆಸರು ನವೀನ್ ಕುಮಾರ್ ಗೌಡ. ನಂತರ ನಾಟಕಗಳಲ್ಲಿ ನಟಿಸಲು ತಮ್ಮ ಹೆಸರನ್ನು ಯಶ್ ಎಂದು ಬದಲಾಯಿಸಿಕೊಂಡರು.. ನಾಟಕ ಕಲಾವಿದನಾಗಿ ನಟಿಸುತ್ತಿದ್ದ ಯಶ್ ಗೆ ಧಾರಾವಾಹಿಗಳಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು.. ಆ ನಂತರ ಕನ್ನಡ ಧಾರಾವಾಹಿಗಳಲ್ಲಿ ನಟಿಸುತ್ತಿದ್ದ ಯಶ್ 2008ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟರು.

ಕೆಲವು ವರ್ಷಗಳ ಯಶಸ್ಸು ಮತ್ತು ವೈಫಲ್ಯದ ನಂತರ ಯಶ್ ಅವರ ಚಿತ್ರರಂಗದ ಜೀವನದಲ್ಲಿ ದೊಡ್ಡ ತಿರುವು ತಂದ ಚಿತ್ರ ಕೆಜಿಎಫ್. ಕೆಜಿಎಫ್ ಮೊದಲ ಭಾಗ 2018 ರಲ್ಲಿ ಬಿಡುಗಡೆಯಾಯಿತು. ಆರಂಭದಲ್ಲಿ ಕನ್ನಡ ಚಿತ್ರ ಎಂಬ ಕಾರಣಕ್ಕೆ ನಿರ್ಲಕ್ಷಿಸಿದ ಸಿನಿಮಾ ಅಭಿಮಾನಿಗಳು, ನಂತರ ಸಿನಿಮಾದ ಸಕಾರಾತ್ಮಕ ವಿಮರ್ಶೆಗಳನ್ನು ಕಂಡು ಸಂಭ್ರಮಿಸುವಂತಾಯಿತು.. ಈ ಚಿತ್ರವು ಭಾರತದಾದ್ಯಂತ ಮಾಸ್ ಹಿಟ್ ಆಗಿತ್ತು.

ಇದನ್ನೂ ಓದಿ-ಒಮ್ಮೆ ಬಟ್ಟೆ ಬಿಚ್ಚಿ ತೋರಿಸ್ತೀರಾ..? ಬೀಚ್‌ಗೆ ಬನ್ನಿ.. ಅಂತಾರೆ..! ʼಅಪ್ಪಾಜಿʼ ನಟಿಯ ಶಾಕಿಂಗ್‌ ಹೇಳಿಕೆ

ಅದರ ನಂತರ, ಚಿತ್ರತಂಡವು ಕೆಜಿಎಫ್ ಚಿತ್ರದ ಎರಡನೇ ಭಾಗವನ್ನು ಘೋಷಿಸಿತು ಮತ್ತು ಕಳೆದ ವರ್ಷ ಚಿತ್ರವನ್ನು ಬಿಡುಗಡೆ ಮಾಡಲಾಯಿತು... ಇದು ಮೊದಲ ಭಾಗಕ್ಕಿಂತ ವಿಭಿನ್ನವಾಗಿತ್ತು... ಚಿತ್ರತಂಡದ ನಿರೀಕ್ಷೆಯಂತೆ ಸಿನಿಮಾ ರೂ.1100 ಕೋಟಿಗಳನ್ನು ಗಳಿಸಿ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿತ್ತು..

ಇದನ್ನೂ ಓದಿ-ಎಲೆಕ್ಟ್ರಿಫೈಯಿಂಗ್ Pro Kabaddi League ಗೆ ಕೌಂಟ್‌ಡೌನ್ ಶುರು

ಕೆಜಿಎಫ್ ನಟ ಯಶ್ ಅವರ ವೃತ್ತಿ ಜೀವನದಲ್ಲಿ ದೊಡ್ಡ ತಿರುವು ಸಿಕ್ಕಿತು. ಚಿತ್ರದ ಮೊದಲ ಭಾಗಕ್ಕೆ ಕೇವಲ 4 ಕೋಟಿ ಸಂಭಾವನೆ ಪಡೆದಿದ್ದರೂ ಬಿಡುಗಡೆಯಾದ ನಂತರ 15 ಕೋಟಿ ಸಂಭಾವನೆ ಪಡೆದಿದ್ದಾರೆ. ಅದೇ ರೀತಿ ಎರಡನೇ ಭಾಗಕ್ಕೆ ಸಂಭಾವನೆ ದುಪ್ಪಟ್ಟು ಮಾಡಿಕೊಂಡ ಯಶ್ 30 ಕೋಟಿ ಸಂಭಾವನೆ ಪಡೆದಿದ್ದಾರೆ. ಇನ್ನು ಮುಂದಿನ ಚಿತ್ರಗಳಿಗೆ 50 ಕೋಟಿಯವರೆಗೂ ಸಂಭಾವನೆ ಪಡೆಯಲಿದ್ದಾರೆ ಎಂಬ ಸುದ್ದಿಯೂ ಹರಿದಾಡುತ್ತಿದೆ.

ಕೆಜಿಎಫ್  ಚಿತ್ರದ ಮೂಲಕ ಖ್ಯಾತಿ ಗಳಿಸಿದ ನಟ ಯಶ್ ಅವರ ಆಸ್ತಿ 53 ಕೋಟಿ ರೂ. ಕೆಜಿಎಫ್ ಚಿತ್ರದ ಯಶಸ್ಸಿನ ನಂತರ ಅವರು ಬೆಂಗಳೂರಿನಲ್ಲಿ 4 ಕೋಟಿ ರೂಪಾಯಿಗೆ ಐಷಾರಾಮಿ ಬಂಗಲೆಯನ್ನು ಖರೀದಿಸಿದರು. ಇದಲ್ಲದೇ ಆಡಿ, ರೇಂಜ್ ರೋವರ್, ಬೆಂಜ್ ನಂತಹ ಹಲವು ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News