ಯೋಗರಾಜ ಭಟ್ಟರ ಖಾತೆಗೆ ಅಧಿಕೃತ ಮುದ್ರೆ!

ಗೀತಾ ಸಾಹಿತ್ಯ ರಚನೆಕಾರ ಯೋಗರಾಜ್ ಭಟ್ಟರು ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಇದುವರೆಗೂ ಅನ್ ಅಫಿಶಿಯಲ್ ಆಗಿದ್ದ ಯೋಗರಾಜ್ ಭಟ್ರ ಫೇಸ್ಬುಕ್ ಖಾತೆಗೆ ಈಗ ಅಧಿಕೃತ ಮುದ್ರೆ ಬಿದ್ದಿದೆ. 

Divyashree K Divyashree K | Updated: Aug 8, 2018 , 03:39 PM IST
ಯೋಗರಾಜ ಭಟ್ಟರ ಖಾತೆಗೆ ಅಧಿಕೃತ ಮುದ್ರೆ!

ಬೆಂಗಳೂರು: ಚಲನಚಿತ್ರ ನಿರ್ದೇಶಕ ಹಾಗೂ ಗೀತಾ ಸಾಹಿತ್ಯ ರಚನೆಕಾರ ಯೋಗರಾಜ್ ಭಟ್ಟರು ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಇದುವರೆಗೂ ಅನ್ ಅಫಿಶಿಯಲ್ ಆಗಿದ್ದ ಯೋಗರಾಜ್ ಭಟ್ರ ಫೇಸ್ಬುಕ್ ಖಾತೆಗೆ ಈಗ ಅಧಿಕೃತ ಮುದ್ರೆ ಬಿದ್ದಿದೆ. 

ಫೇಸ್ಬುಕ್, ಇನ್ಸ್ಟಾಗ್ರಾಂ, ಟ್ವಿಟ್ಟರ್'ಗೆ ಯೋಗರಾಜ ಭಟ್ರು ಎಂಟ್ರಿ!

ಹೌದು, ಸದಾ ತಮ್ಮ ಪಂಚಿಂಗ್ ಡೈಲಾಗ್, ಹಾಡುಗಳು, ಕವನಗಳ ಮೂಲಕ ಎಲ್ಲರ ಗಮನಸೆಳೆಯುತ್ತಿದ್ದ ಯೋಗರಾಜಭಟ್ಟರು ಏಪ್ರಿಲ್ ನಲ್ಲಿ ಫೇಸ್ಬುಕ್, ಇನ್ಸ್ಟಾಗ್ರಾಂ ಮತ್ತು ಟ್ವಿಟ್ಟರ್ ಖಾತೆಗಳನ್ನು ತೆರೆಯುವ ಮೂಲಕ ಸೋಶಿಯಲ್ ಮೀಡಿಯಾಗೆ ಎಂಟ್ರಿ ಕೊಟ್ಟಿದ್ದರು. ಅವುಗಳಲ್ಲಿ ಇದೀಗ ಫೇಸ್ಬುಕ್ ಖಾತೆ ವೆರಿಫೈಡ್ ಅಕೌಂಟ್ ಆಗಿದೆ. ಈ ಬಗ್ಗೆ ಯೋಗರಾಜ್ ಭಟ್ಟರು ಏನು ಹೇಳಿದ್ದಾರೆ ಎಂಬುದನ್ನು ನೀವೇ ಓದಿ...

ಜನಪ್ರಿಯ ಟ್ವಿಟ್ಟರ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂ'ಗಳಲ್ಲಿ ಅಕೌಂಟ್ ಕ್ರಿಯೇಟ್ ಮಾಡಿರುವ ಭಟ್ರು ತಮ್ಮ ಸಿನಿಮಾಗಳನ್ನು, ಹಾಡುಗಳನ್ನು ಪರಿಚಯಿಸುವುದಷ್ಟೇ ಅಲ್ಲದೆ, ಹಲವು ಕವನಗಳನ್ನೂ, ಫೋಟೊಗಳನ್ನೂ ಹಂಚಿಕೊಂಡಿದ್ದಾರೆ. ಯೋಗರಾಜ್ ಭಟ್ ಅವರ ಬಗ್ಗೆ ತಿಳಿಯಲು, ಅವರೊಂದಿಗೆ ಮಾತನಾಡಲು ಅಭಿಮಾನಿಗಳು ಸೋಶಿಯಲ್ ಮೀಡಿಯಾ ಅಕೌಂಟ್ಗಳಿಗೆ ಭೇಟಿ ನೀಡಿ ಸಂಪರ್ಕಿಸಬಹುದು. 
ಫೇಸ್ಬುಕ್ : https://www.facebook.com/yogarajbhatofficial
ಟ್ವಿಟರ್ : https://www.twitter.com/yogarajofficial
ಇನ್ಸ್ಟಾಗ್ರಾಮ್ : https://www.instagram.com/yogarajbhatofficial