Benefits of Black Rice: ಕಪ್ಪು ಅಕ್ಕಿಯ ಈ ಆರೋಗ್ಯಕರ ಲಾಭಗಳನ್ನು ತಿಳಿದರೆ ನೀವೂ ತಿನ್ನಲು ಆರಂಭಿಸುವಿರಿ

Benefits of Black Rice: ಕಪ್ಪು ಅಕ್ಕಿಯಲ್ಲಿ 23 ಬಗೆಯ ಆಂಟಿ ಆಕ್ಸಿಡೆಂಟ್ ಗುಣಗಳಿವೆ. ಯಾವುದೇ ರೀತಿಯ ಬೇರೆ ಅಕ್ಕಿಯಲ್ಲಿ ನಿಮಗೆ ಇಷ್ಟೊಂದು ಪ್ರಮಾಣದ ಆಂಟಿ ಆಕ್ಸಿಡೆಂಟ್ ಗುಣಗಳು ಕಂಡುಬರುವುದಿಲ್ಲ. ಇದಲ್ಲದೆ ಕಪ್ಪು ಅಕ್ಕಿ (Black Rice) ಪ್ರೋಟೀನ್, ಫೈಬರ್ ಮತ್ತು ಕಬ್ಬಿಣದ ಆಗರವಾಗಿದೆ.

Written by - Nitin Tabib | Last Updated : Oct 12, 2021, 07:18 PM IST
  • ಕಪ್ಪು ಅಕ್ಕಿಯ ಆರೋಗ್ಯಕರ ಲಾಭಗಳ ಕುರಿತು ನಿಮಗೆ ತಿಳಿದಿದೆಯೇ?
  • ಈ ಆಕ್ಕಿಯಲ್ಲಿ ಒಟ್ಟು 23 ವಿವಿಧ ಬಗೆಯ ಆಂಟಿ ಆಕ್ಸಿಡೆಂಟ್ ಗಳಿವೆ.
  • ಇದಲ್ಲದೆ ಈ ಅಕ್ಕಿ ಪ್ರೋಟೀನ್ ಹಾಗೂ ನಾರಿನಿಂದ ಸಮೃದ್ಧವಾಗಿದೆ.
Benefits of Black Rice: ಕಪ್ಪು ಅಕ್ಕಿಯ ಈ ಆರೋಗ್ಯಕರ ಲಾಭಗಳನ್ನು ತಿಳಿದರೆ ನೀವೂ ತಿನ್ನಲು ಆರಂಭಿಸುವಿರಿ title=
Benefits Of Black Rice (File Photo)

ನವದೆಹಲಿ:  Benefits of Black Rice - ಬಹುತೇಕ ಜನರಿಗೆ ಕಪ್ಪು ಅಕ್ಕಿಯ (Black Rice) ಬಗ್ಗೆ ತಿಳಿದಿಲ್ಲ ಅಥವಾ ಬಹುತೇಕ ಜನರು ಅದನ್ನು ಸೇವಿಸಿರಲಿಕ್ಕಿಲ್ಲ. ಆದರೆ ಈ ವೈವಿಧ್ಯಮಯ  ಅಕ್ಕಿ (Rice) ಸೂಪರ್‌ಫುಡ್‌ಗಿಂತ (Super Food) ಹೆಚ್ಚು ಉತ್ತಮ ಎಂದು ಪರಿಗಣಿಸಲಾಗುತ್ತದೆ. ಭಾರತದಲ್ಲಿ, ಈ ಬಗೆಯ ಅಕ್ಕಿಯನ್ನು ಹೆಚ್ಚಾಗಿ ಈಶಾನ್ಯ ರಾಜ್ಯ ಮಣಿಪುರದಲ್ಲಿ ಬೆಳೆಯಲಾಗುತ್ತದೆ. ಇಲ್ಲಿ ಇದನ್ನು ಚಕ್-ಹಾವ್ ಎಂದು ಕರೆಯಲಾಗುತ್ತದೆ. ತಜ್ಞರ ಪ್ರಕಾರ, ಕಪ್ಪು ಅಕ್ಕಿಯನ್ನು ಬೆಳೆಯುವುದು ಸ್ವಲ್ಪ ಕಷ್ಟದ ಕೆಲಸ , ಆದರೆ ಅದರ ಆರೋಗ್ಯ ಪ್ರಯೋಜನಗಳಿಂದಾಗಿ ಇದು ಸಾಕಷ್ಟು ಜನಪ್ರಿಯವಾಗಿದೆ. ಹಾಗಾದರೆ ಬನ್ನಿ ಕಪ್ಪು ಅಕ್ಕಿಯ ಆರೋಗ್ಯಕರ ಲಾಭಗಳ ಕುರಿತು ತಿಳಿದುಕೊಳ್ಳೋಣ.

ಆಂಟಿ ಆಕ್ಸಿಡೆಂಟ್ ಗಳ ಆಗರ ಕಪ್ಪು ಅಕ್ಕಿ
ಕಪ್ಪು ಅಕ್ಕಿಯಲ್ಲಿ 23 ಬಗೆಯ ಆಂಟಿ ಆಕ್ಸಿಡೆಂಟ್ ಗುಣಗಳಿವೆ. ಯಾವುದೇ ರೀತಿಯ ಬೇರೆ ಅಕ್ಕಿಯಲ್ಲಿ ನಿಮಗೆ ಇಷ್ಟೊಂದು ಪ್ರಮಾಣದ ಆಂಟಿ ಆಕ್ಸಿಡೆಂಟ್ ಗುಣಗಳು ಕಂಡುಬರುವುದಿಲ್ಲ. ಇದಲ್ಲದೆ ಕಪ್ಪು ಅಕ್ಕಿ ಪ್ರೋಟೀನ್, ಫೈಬರ್ ಮತ್ತು ಕಬ್ಬಿಣದ ಆಗರವಾಗಿದೆ.

ಹೃದಯದ ಆರೋಗ್ಯಕ್ಕೆ ಉತ್ತಮ
ಕಪ್ಪು ಅಕ್ಕಿಯಲ್ಲಿ ಫ್ಲೇವೊನೈಡ್ಸ್ ಸಮೃದ್ಧವಾಗಿದೆ. ಇದು ಎಚ್‌ಡಿಎಲ್ (ಉತ್ತಮ ಕೊಲೆಸ್ಟ್ರಾಲ್) ಹೆಚ್ಚಿಸಲು  ಮತ್ತು ಎಲ್ಡಿಎಲ್ (ಕೆಟ್ಟ ಕೊಲೆಸ್ಟ್ರಾಲ್) ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಕ್ಯಾನ್ಸರ್ ವಿರೋಧಿ ಗುಣಗಳನ್ನು ಹೊಂದಿದೆ
ಕಪ್ಪು ಅಕ್ಕಿಯಲ್ಲಿ ಆಂಥೋಸಯಾನಿನ್‌ಗಳು ಸಮೃದ್ಧವಾಗಿವೆ. ಆಂಥೋಸಯಾನಿನ್ ಸಮೃದ್ಧವಾಗಿರುವ ಆಹಾರಗಳು ಕೊಲೊರೆಕ್ಟಲ್ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಹಲವು ಅಧ್ಯಯನಗಳಲ್ಲಿ ತಿಳಿದುಬಂದಿದೆ.

ಕಣ್ಣಿನ ಕಾಂತಿಗೆ ಉತ್ತಮ
ಇದರಲ್ಲಿರುವ ಲುಟೀನ್ ಹಾಗೂ ಝಿಯಾಕ್ಸಾಂಥಿನ್ ಆಂಟಿ ಆಕ್ಸಿಡೆಂಟ್ ಗಳು ಕಣ್ಣಿನ ರೆಟಿನಾವನ್ನು ಫ್ರೀ ರಾಡಿಕಲ್ ಹಾನಿಯಿಂದ ರಕ್ಷಿಸುತ್ತವೆ.

ತೂಕ ಇಳಿಕೆಗೆ ಉತ್ತಮ
ಕಪ್ಪು ಅಕ್ಕಿ ಫೈಬರ್ ಮತ್ತು ಪ್ರೋಟೀನ್‌ನ ಉತ್ತಮ ಮೂಲವಾಗಿದೆ. ಇದನ್ನು ತಿನ್ನುವುದರಿಂದ, ನಿಮಗೆ ಪದೇ ಪದೇ ಹಸಿವಾಗುವುದಿಲ್ಲ ಮತ್ತು ಇದು ತೂಕ ಇಳಿಕೆಗೂ ಕೂಡ ಸಹಾಯ ಮಾಡುತ್ತದೆ.

ಕಪ್ಪು ಅಕ್ಕಿಯನ್ನು ಹೇಗೆ ಬಳಸಬೇಕು?
ಕಪ್ಪು ಅಕ್ಕಿಯನ್ನು ಪಾಯಸದಿಂದ ಹಿಡಿದು ಚಹಾದವರೆಗೆ ಅನೇಕ ಅನೇಕ ಆಹಾರ ಪದಾರ್ಥಗಳಲ್ಲಿ ಬಳಸಲಾಗುತ್ತದೆ. ಅಷ್ಟೇ ಅಲ್ಲ ಕಪ್ಪು ಅಕ್ಕಿಯಿಂದ ನೀವು ಬಿರಿಯಾನಿ ಕೂಡ ಮಾಡಬಹುದು. ತಜ್ಞರ ಪ್ರಕಾರ, ಇದನ್ನು ತಯಾರಿಸಲು ಬಳಸುವ ನೀರನ್ನು ಅಕ್ಕಿ ಆಧಾರಿತ ಪಾನೀಯಗಳನ್ನು ತಯಾರಿಸಲು ಮರುಬಳಕೆ ಮಾಡಬಹುದು.

ಇದನ್ನೂ ಓದಿ- ಕಿಡ್ನಿ ಆರೋಗ್ಯವಾಗಿರಬೇಕಾದರೆ ಸೇವಿಸಿ ಈ ಐದು ಆಹಾರ, ಸಿಗಲಿದೆ ಪ್ರಯೋಜನ

ಕಪ್ಪು ಅಕ್ಕಿಯ ಪಾಕ ವಿಧಾನ (Black Rice Recipe)
ಒಂದು ಕಪ್ ಕಪ್ಪು ಅಕ್ಕಿಯನ್ನು ಮೂರರಿಂದ 5 ಗಂಟೆಗಳ ಕಾಲ ನೆನೆಸಿಡಿ.

ಈಗ ಬಾಣಲೆಯಲ್ಲಿ 8 ಕಪ್ ಹಾಲನ್ನು ಬಿಸಿ ಮಾಡಿ.

ಹಾಲು ಕುದಿಯುವಾಗ ಅದಕ್ಕೆ ನೆನೆಸಿದ ಕಪ್ಪು ಅಕ್ಕಿಯನ್ನು ಸೇರಿಸಿ.

ಇದನ್ನೂ ಓದಿ-ಕೇವಲ ಮೂರು ದಿನ ಹಾಲಿನೊಂದಿಗೆ ಈ ವಸ್ತುವನ್ನು ಸೇರಿಸಿ ಕುಡಿದರೆ ಸಾಕು, ದೂರವಾಗಲಿದೆ ಈ ಕಾಯಿಲೆಗಳು

ಇದನ್ನು ಕಡಿಮೆ ಉರಿಯಲ್ಲಿ ಬೇಯಿಸಿ.

ಹಾಲು ಅರ್ಧವಾಗುವವರೆಗೆ ಬೇಯಿಸಿ.

ಈಗ ಗ್ಯಾಸ್ ಆಫ್ ಮಾಡಿ ಮತ್ತು ಅದಕ್ಕೆ ಸಕ್ಕರೆ ಅಥವಾ ಬೆಲ್ಲ, ಡ್ರೈ ಫ್ರೂಟ್ಸ್ ಮತ್ತು ಏಲಕ್ಕಿ ಪುಡಿ ಸೇರಿಸಿ. ಅದನ್ನು ಚೆನ್ನಾಗಿ ಮಿಶ್ರಣ ಮಾಡಿ.

ಕಪ್ಪು ಅಕ್ಕಿಯ ಈ ಪದಾರ್ಥವನ್ನು ಸ್ವಲ್ಪ ಸಮಯದವರೆಗೆ ಫ್ರಿಜ್ ನಲ್ಲಿಡಿ ಮತ್ತು ತಂಪಾದ ಮೇಲೆ ಅದನ್ನು ಉಣಬಡಿಸಿ.

ಇದನ್ನೂ ಓದಿ-Black Hair Colour: ಬಿಳಿ ಕೂದಲಿನ ಸಮಸ್ಯೆ ನಿವಾರಿಸಲು ಮೆಹಂದಿಯೊಂದಿಗೆ ಇದನ್ನು ಮಿಕ್ಸ್ ಮಾಡಿ ಹಚ್ಚಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News