ನಿತ್ಯ ಮುಂಜಾನೆ ಈ ಪಾನೀಯ ಸೇವಿಸಿದರೆ ಕರಗಿ ಹೋಗುತ್ತದೆ ಬೆಲ್ಲಿ ಫ್ಯಾಟ್ !

Belly Fat Burning Tips:ತೂಕವನ್ನು ಕಳೆದುಕೊಳ್ಳುವುದು ಕಷ್ಟವೇನಲ್ಲ. ಅದಕ್ಕೆ ಮುಖ್ಯವಾಗಿ ಬೇಕಾಗಿರುವುದು ದೃಢ ಸಂಕಲ್ಪ ಬೇಕು. ಬೇಸಿಗೆ ತೂಕ ಇಳಿಸಿಕೊಳ್ಳಲು ಸರಿಯಾದ ಸಮಯ. ಏಕೆಂದರೆ ಬೇಸಿಗೆಯಲ್ಲಿ ನಾವು ಮಾಡುವ ಸಣ್ಣಪುಟ್ಟ ಕೆಲಸಗಳೂ ತೂಕ ಇಳಿಸಲು ಸಹಾಯ ಮಾಡುತ್ತದೆ.

Written by - Ranjitha R K | Last Updated : May 19, 2023, 12:27 PM IST
  • ಹಲವರು ಬೊಜ್ಜು ಹೆಚ್ಚಾಗುವುದರಿಂದ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ.
  • ಇದಕ್ಕೆ ಮುಖ್ಯ ಕಾರಣ ನಾವು ಸೇವಿಸುವ ಆಹಾರ.
  • ಕೆಲವು ಸರಳ ಮನೆಮದ್ದು ದೇಹ ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ
ನಿತ್ಯ ಮುಂಜಾನೆ ಈ ಪಾನೀಯ ಸೇವಿಸಿದರೆ ಕರಗಿ ಹೋಗುತ್ತದೆ  ಬೆಲ್ಲಿ ಫ್ಯಾಟ್ !  title=

Belly Fat Burning Tips : ನಮ್ಮಲ್ಲಿ ಹಲವರು ಬೊಜ್ಜು ಹೆಚ್ಚಾಗುವುದರಿಂದ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ಇದಕ್ಕೆ ಮುಖ್ಯ ಕಾರಣ ನಾವು ಸೇವಿಸುವ ಆಹಾರ. ಎಣ್ಣೆಯುಕ್ತ ಮತ್ತು ಸಿಹಿ ಆಹಾರಗಳ ಅತಿಯಾದ ಸೇವನೆಯು ತೂಕ ಹೆಚ್ಚಾಗಲು ಕಾರಣವಾಗುತ್ತದೆ. ಹಾಗಂತ ನಾವು ಸೇವಿಸುವ ಆಹಾರದ ಪ್ರಮಾಣವನ್ನು ಕಡಿಮೆ ಮಾಡಿ  ದೇಹ ತೂಕವನ್ನು ವೇಗವಾಗಿ ಕಳೆದುಕೊಳ್ಳಬಹುದು ಎಂದು ಕೊಂಡಿದ್ದರೆ  ಅಂಥಹ ಭಾವನೆಯೇ ತಪ್ಪು. ಆಹಾರವನ್ನು ಕಡಿಮೆ ಮಾಡುವುದರಿಂದ ದೇಹದ ತೂಕ ಕಡಿಮೆಯಾಗುವುದಿಲ್ಲ. ಇದು  ನಮ್ಮ ದೇಹದ ಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ. ಇದರ ಬದಲಿಗೆ, ಕೆಲವು ಸರಳ ಮನೆಮದ್ದುಗಳನ್ನು ಅನುಸರಿಸುವ ಮೂಲಕ ದೇಹ ತೂಕವನ್ನು ಸುಲಭವಾಗಿ ಕಳೆದುಕೊಳ್ಳಬಹುದು. ಅಂತಹ ಕೆಲವು ಸರಳವಾದ ಮನೆಮದ್ದು  ಯಾವುವು ಎನ್ನುವ ಮಾಹಿತಿ ಇಲ್ಲಿದೆ. 

ಇತ್ತೀಚಿನ ದಿನಗಳಲ್ಲಿ ಸ್ಥೂಲಕಾಯತೆಯನ್ನು ಪ್ರಮುಖ ರೋಗವೆಂದು ಪರಿಗಣಿಸಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಜಗತ್ತಿನಲ್ಲಿ ಸುಮಾರು 2 ಬಿಲಿಯನ್ ಜನರು ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಸಕಾಲದಲ್ಲಿ ಬೊಜ್ಜು ಕಡಿಮೆಯಾಗದಿದ್ದರೆ ದೇಹದಲ್ಲಿ ಹಲವು ರೋಗಗಳು ಕಂಡು ಬರುವ ಸಾಧ್ಯತೆ ಇದೆ. ಮಧುಮೇಹ ಮತ್ತು ಹೃದ್ರೋಗಗಳು ಬೊಜ್ಜಿನಿಂದ ಉಂಟಾಗುವ ಎರಡು ಪ್ರಮುಖ ಕಾಯಿಲೆಗಳಾಗಿವೆ. ಆದ್ದರಿಂದ ದೇಹದಲ್ಲಿ  ಬೊಜ್ಜು  ಬೆಳೆಯದಂತೆ ತಡೆಯುವುದು ಮತ್ತು ಬೊಜ್ಜು ಕರಗಿಸುವುದು ಬಹಳ ಮುಖ್ಯ. 

ಇದನ್ನೂ ಓದಿ : ಬ್ರೌನ್, ವೈಟ್ ಎರಡೂ ಅಲ್ಲ ಡಯಾಬಿಟೀಸ್ ಇರುವವರು ಈ ಅಕ್ಕಿ ಸೇವಿಸಬೇಕು

ತೂಕವನ್ನು ಕಳೆದುಕೊಳ್ಳುವುದು ಕಷ್ಟವೇನಲ್ಲ. ಅದಕ್ಕೆ ಮುಖ್ಯವಾಗಿ ಬೇಕಾಗಿರುವುದು ದೃಢ ಸಂಕಲ್ಪ ಬೇಕು. ಬೇಸಿಗೆ ತೂಕ ಇಳಿಸಿಕೊಳ್ಳಲು ಸರಿಯಾದ ಸಮಯ. ಏಕೆಂದರೆ ಬೇಸಿಗೆಯಲ್ಲಿ ನಾವು ಮಾಡುವ ಸಣ್ಣಪುಟ್ಟ ಕೆಲಸಗಳೂ ತೂಕ ಇಳಿಸಲು ಸಹಾಯ ಮಾಡುತ್ತದೆ. ಬೇಸಿಗೆಯಲ್ಲಿ ತೂಕವನ್ನು ಕಳೆದುಕೊಳ್ಳಲು ಹೆಚ್ಚು ಶ್ರಮ ಪಡುವ ಅಗತ್ಯವೂ ಇಲ್ಲ. 

ಈ ಪಾನೀಯಗಳನ್ನು ಸೇವಿಸುವ ಮೂಲಕ ಯಾವುದೇ ರೀತಿಯ ಅಡ್ಡ ಪರಿಣಾಮಗಳಿಲ್ಲದೆ  ತೂಕವನ್ನು ಕಳೆದುಕೊಳ್ಳಬಹುದು :  
ಗ್ರೀನ್ ಟೀ  :
ಗ್ರೀನ್ ಟೀ  ಯಾವಾಗಲೂ ಹಾಲು ಮತ್ತು ಸಕ್ಕರೆ ಚಹಾಕ್ಕೆ ಉತ್ತಮ ಪರ್ಯಾಯವೆಂದು ಪರಿಗಣಿಸಲಾಗಿದೆ. ಆದ್ದರಿಂದ ನೀವು ಫಿಟ್ ಆಗಿರಬೇಕಾದರೆ ಪ್ರತಿ ದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಗ್ರೀನ್ ಟೀ  ಕುಡಿಯಬೇಕು. ಇದರ ರುಚಿ ನಾಲಗೆಗೆ ಅಷ್ಟಾಗಿ ಹಿಡಿಸದೇ  ಇರಬಹುದು. ಆದರೆ ಗ್ರೀನ್ ಟೀ ತೂಕ ಇಳಿಸುವಲ್ಲಿ ತುಂಬಾ ಪರಿಣಾಮಕಾರಿಯಾಗಿದೆ. 

ಇದನ್ನೂ ಓದಿ Increase Immunity: ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಲು ಈ ಆಹಾರವನ್ನು ಸೇವಿಸಿ...!

ನಿಂಬೆ-ಶುಂಠಿ :
ನಿಂಬೆ ಮತ್ತು ಶುಂಠಿಯಿಂದ ತಯಾರಿಸಿದ ನೈಸರ್ಗಿಕ ಪಾನೀಯವು  ಸ್ಥೂಲಕಾಯತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.  ಇದಕ್ಕಾಗಿ ಎರಡು ನಿಂಬೆಹಣ್ಣಿನ ರಸವನ್ನು ತೆಗೆದುಕೊಂಡು ಅದನ್ನು ಪಕ್ಕಕ್ಕೆ ಇರಿಸಿ. ರಸ ತೆಗೆದ ನಿಂಬೆಯನ್ನು ಒಂದು ಲೀಟರ್ ನೀರಿನಲ್ಲಿ ಹಾಕಿ. ಇದಕ್ಕೆ ಅರ್ಧ ಚಮಚ ಕರಿಮೆಣಸಿನ ಪುಡಿ ಮತ್ತು ಒಂದು ಇಂಚು ಶುಂಠಿ ಸೇರಿಸಿ 5 ನಿಮಿಷ ಕುದಿಸಿ. ನಂತರ ಅದನ್ನು ತಣ್ಣಗಾಗಿಸಿ ಫಿಲ್ಟರ್ ಮಾಡಿ . ಹೀಗೆ ಫಿಲ್ಟರ್ ಮಾಡಿದ ನೀರಿಗೆ ಜೇನುತುಪ್ಪ ಮತ್ತು ನಿಂಬೆ ರಸವನ್ನು ಸೇರಿಸಿ ಕುಡಿಯಿರಿ. ಈ ನೈಸರ್ಗಿಕ ಪಾನೀಯವು ದಿನವಿಡೀ ಚಯಾಪಚಯವನ್ನು ಹೆಚ್ಚಿಸುತ್ತದೆ ಮತ್ತು ಬೊಜ್ಜನ್ನು ತ್ವರಿತವಾಗಿ ಕಡಿಮೆ ಮಾಡಲು  ಸಹಾಯ ಮಾಡುತ್ತದೆ. 

ಜೀರಿಗೆ - ಚಕ್ಕೆ ನೀರು : 
ಈ ಪಾನೀಯವನ್ನು ತಯಾರಿಸಲು, ಒಂದು ಲೀಟರ್ ನೀರಿನಲ್ಲಿ 3 ಚಮಚ ಜೀರಿಗೆ ಮತ್ತು 3 ಇಂಚು ದಾಲ್ಚಿನ್ನಿ ಅಥವಾ ಚಕ್ಕೆ ಸೇರಿಸಿ. ಈಗ ಈ ನೀರನ್ನು 5 ನಿಮಿಷಗಳ ಕಾಲ ಕುದಿಸಿ. ನಂತರ ತಣ್ಣಗಾಗಿಸಿ ಫಿಲ್ಟರ್ ಮಾಡಿ. ಈಗ ಇದಕ್ಕೆ ಜೇನುತುಪ್ಪ ಮತ್ತು ನಿಂಬೆ ಸೇರಿಸಿ ಮತ್ತು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ. ಇದನ್ನೂ ನಿಯಮಿತವಾಗಿ ಸೇವಿಸುತ್ತಾ ಬಂದರೆ ಕೇವಲ 10 ದಿನಗಳಲ್ಲಿ ವ್ಯತ್ಯಾಸ ತಿಳಿಯುತ್ತದೆ. 

ಇದನ್ನೂ ಓದಿ : Carrot Juice Benefits : ಒಂದು ಗ್ಲಾಸ್‌ ಕ್ಯಾರೆಟ್ ಜ್ಯೂಸ್‌ ನಲ್ಲಿದೆ ಉತ್ತಮ ಆರೋಗ್ಯದ ಗುಟ್ಟು!

 ಸೋಂಪು ನೀರು :
ಸೋಂಪನ್ನು ಹೆಚ್ಚಾಗಿ ಊಟದ ನಂತರ  ಜಗಿಸು ತಿನ್ನುವ ಅಭ್ಯಾಸ ಹಲವರಿಗೆ ಇರುತ್ತದೆ. ಏಕೆಂದರೆ ಇದನ್ನು ನೈಸರ್ಗಿಕ ಮೌತ್ ಫ್ರೆಶ್ನರ್ ಆಗಿ ಬಳಸಲಾಗುತ್ತದೆ. ಒಂದು ಲೋಟ ನೀರಿನಲ್ಲಿ ಒಂದು ಚಮಚ  ಸೋಂಪನ್ನು ಬೆರೆಸಿ ರಾತ್ರಿಯಿಡೀ ನೆನೆಸಿಡಿ. ಬೆಳಿಗ್ಗೆ ಫಿಲ್ಟರ್ ಮಾಡಿ ಆ ನೀರನ್ನು ಕುಡಿಯಿರಿ.

ಚಿಯಾ ಬೀಜಗಳು - ನಿಂಬೆ: 
ಈ ಪಾನೀಯವನ್ನು ತಯಾರಿಸಲು, 2 ಟೀ ಚಮಚ ಚಿಯಾ ಬೀಜಗಳನ್ನು ಒಂದು ಕಪ್ ನೀರಿನಲ್ಲಿ ಹಾಕಿ 10 ನಿಮಿಷಗಳ ಕಾಲ ನೆನೆಸಿಡಿ. ಅದರ ನಂತರ ಇನ್ನೂ ಎರಡು ಕಪ್ ನೀರು ಸೇರಿಸಿ . ನಂತರ ಜೇನುತುಪ್ಪ ಮತ್ತು ನಿಂಬೆ ರಸವನ್ನು ಆ ನೀರಿಗೆ ಸೇರಿಸಿ. ಈ ನೀರನ್ನು ನಿತ್ಯ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುತ್ತಾ ಬನ್ನಿ. ಚಿಯಾ-ನಿಂಬೆ ನೀರು ಕೊಬ್ಬನ್ನು  ಕರಗಿಸಲು ಇರುವ ನೈಸರ್ಗಿಕ ರಾಮಬಾಣವಾಗಿದೆ. 

ಇದನ್ನೂ ಓದಿ : ಬೆಲ್ಲ ತಿನ್ನುವುದರಿಂದಾಗುವ ಆರೋಗ್ಯ ಪ್ರಯೋಜನಗಳೇನು ಗೊತ್ತಾ..?

 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News