ಬೇಸಿಗೆಯಲ್ಲಿ ದಿನಕ್ಕೆ ಒಂದು ಚಮಚ ತುಪ್ಪ ಸೇವಿಸಿ! ಊಹೆಗೂ ನಿಲುಕದ ಬದಲಾವಣೆ ಕಾಣುವಿರಿ

Benefits of Ghee in summer : ತುಪ್ಪ ತಿಂದರೆ ದಪ್ಪ ಆಗ್ತಾರೆ ಅನ್ನೋದು ತಪ್ಪು ಕಲ್ಪನೆ. ಬೇಸಿಗೆಯಲ್ಲಿ ದೇಸಿ ತುಪ್ಪ ತಿಂದರೆ ತುಂಬಾ ಒಳ್ಳೆಯದು . ನೀವು ದಿವಸಕ್ಕೆ ಒಂದು ಚಮಚ ತುಪ್ಪ ತಿಂದರೆ ಸಾಕು. ದೇಹಾರೋಗ್ಯದಲ್ಲಾಗುವ ಬದಲಾವಣೆಯನ್ನು ನೀವೇ ನೋಡಿ. 

Written by - Ranjitha R K | Last Updated : May 3, 2023, 02:33 PM IST
  • ತುಪ್ಪ ತಿಂದರೆ ದಪ್ಪ ಆಗ್ತಾರೆ ಅನ್ನೋದು ತಪ್ಪು ಕಲ್ಪನೆ.
  • ಬೇಸಿಗೆಯಲ್ಲಿ ದೇಸಿ ತುಪ್ಪ ತಿಂದರೆ ತುಂಬಾ ಒಳ್ಳೆಯದು.
  • ದಿನಕ್ಕೊಂದು ಚಮಚ ತುಪ್ಪ ತಿನ್ನಿ, ಬದಲಾವಣೆ ನೋಡಿ.
ಬೇಸಿಗೆಯಲ್ಲಿ ದಿನಕ್ಕೆ ಒಂದು ಚಮಚ ತುಪ್ಪ ಸೇವಿಸಿ! ಊಹೆಗೂ ನಿಲುಕದ ಬದಲಾವಣೆ ಕಾಣುವಿರಿ  title=

ಬೆಂಗಳೂರು :  ಬೇಸಿಗೆಯಲ್ಲಿ ದೇಸಿ ತುಪ್ಪ ತಿಂದರೆ ತುಂಬಾ ಒಳ್ಳೆಯದು. ತುಪ್ಪದಲ್ಲಿ ವಿಟಮಿನ್ ಎ, ವಿಟಮಿನ್ ಇ, ವಿಟಮಿನ್ ಕೆ2, ಕ್ಯಾಲ್ಸಿಯಂ, ಒಮೆಗಾ ತ್ರೀ ಫ್ಯಾಟೀ ಆಸಿಡ್, ವಿಟಮಿನ್ ಸಿ ಸಾಕಷ್ಟು ಪ್ರಮಾಣದಲ್ಲಿ ಇರುತ್ತದೆ. ನೀವು ದಿನಕ್ಕೆ ಒಂದು ಚಮಚ ತುಪ್ಪ ತಿಂದರೆ ಸಾಕು. ದೇಹಾರೋಗ್ಯದಲ್ಲಾಗುವ ಬದಲಾವಣೆ  ಕೆಲವೇ ದಿನಗಳಲಿ ನಿಮ್ಮ ಗಮನಕ್ಕೆ ಬರುತ್ತದೆ. ಒಂದು ಚಮಚ ತುಪ್ಪದಿಂದಾಗುವ ಲಾಭ  ಏನೇನು..? ನೀವೇ ಓದಿ.

ತುಪ್ಪದ ಪ್ರಯೋಜನ : 
ಆರೋಗ್ಯಕ್ಕೆ ತುಪ್ಪ ಬಹಳ ಪ್ರಯೋಜನಕಾರಿ. ಶುದ್ಧ ದೇಸಿ ತುಪ್ಪದಲ್ಲಿ ಆಂಟಿಆಕ್ಸಿಡೆಂಟ್‌ಗಳು ಮತ್ತು ಆಂಟಿಬ್ಯಾಕ್ಟೀರಿಯಲ್ ಮತ್ತು ಆಂಟಿಫಂಗಲ್ ಗುಣಲಕ್ಷಣಗಳು ಸಮೃದ್ಧವಾಗಿರುವ ಕಾರಣ ಇದನ್ನು ಸೂಪರ್ ಫುಡ್ ಎಂದು ಕರೆಯಲಾಗುತ್ತದೆ. ತುಪ್ಪ ಬೊಜ್ಜು ಹೆಚ್ಚಿಸುತ್ತದೆ ಎಂಬ ಭಯಕ್ಕೆ  ಅನೇಕ ಜನರು ತುಪ್ಪವನ್ನು ತಿನ್ನುವುದಿಲ್ಲ. ಆದರೆ ಅದು ಸಂಪೂರ್ಣ ನಿಜವಲ್ಲ. ದಿನಕ್ಕೆ ಒಂದು ಚಮಚ ತುಪ್ಪ ತಿಂದರೆ ಬೊಜ್ಜು ಹೆಚ್ಚಾಗುವುದಿಲ್ಲ. ಬದಲಾಗಿ ತುಪ್ಪ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ ಎನ್ನುವುದೇ ಸತ್ಯ. 

ಇದನ್ನೂ ಓದಿ : Circadian Rhythm Fasting: ಸ್ಥೂಲಕಾಯ ಸಮಸ್ಯೆಯಿಂದ ತೊಂದರೆಗೀಡಾಗಿದ್ದೀರಾ, ಈ ವಿಧಾನದಿಂದ ತೂಕ ಇಳಿಕೆ ಮಾಡಿ ನೋಡಿ!

1. ಇಮ್ಯೂನಿಟಿ ಹೆಚ್ಚಿಸುತ್ತದೆ : 
ತುಪ್ಪದಲ್ಲಿ  ವಿಟಮಿನ್ ಎ ಮತ್ತು ವಿಟಮಿನ್ ಸಿ ಭರ್ಜರಿಯಾಗಿವೆ. ಇವು ಇಮ್ಯೂನಿಟಿಯನ್ನು ಹೆಚ್ಚಿಸುತ್ತದೆ. ಹಾಗಾಗಿ, ದೇಹದ ರೋಹ ನಿರೋಧಕ ಶಕ್ತಿ ಹೆಚ್ಚಿಸಲು ದಿನಕ್ಕೊಂದು ಚಮಚ ತುಪ್ಪ ತಿನ್ನಿ.

2. ಎನರ್ಜಿಗಾಗಿ : 
ಎನರ್ಜಿ ಹೆಚ್ಚಿಸಲು ತುಪ್ಪ ತಿನ್ನಲಾಗುತ್ತದೆ.  ತುಪ್ಪದಲ್ಲಿ ಫ್ಯಾಟಿ ಆಸಿಡ್ ಸೇರಿದಂತೆ ಹಲವು ಬಗೆಯ ಪೋಷಕಾಂಶಗಳು ಅಡಗಿಕೊಂಡಿವೆ. ಈ ಕಾರಣದಿಂದಾಗಿ ದಿನಕ್ಕೊಂದು ಚಮಚ ತುಪ್ಪ ತಿಂದರೆ ಎನರ್ಜಿ ಬೂಸ್ಟ್ ಆಗುತ್ತದೆ. 

ಇದನ್ನೂ ಓದಿ :  Fruit Eating Rules: ಹಣ್ಣುಗಳನ್ನು ಸೇವಿಸುವ ಈ ಮೂರು ನಿಯಮಗಳನ್ನು ತಪ್ಪದೆ ಅನುಸರಿಸಿ!

3. ಮೆದುಳಿನ ಆರೋಗ್ಯಕ್ಕೆ : 
ದಿನಕ್ಕೊಂದು ಚಮಚ ತುಪ್ಪ ತಿಂದರೆ ಮೆದುಳಿಗೂ ಹಿತಕಾರಿ.  ತುಪ್ಪದಲ್ಲಿರುವ ವಿಟಮಿನ್ ಎ, ಡಿ ಮತ್ತು ಇ ಪೋಷಕಾಂಶಗಳು ಶರೀರವನ್ನು ಆರೋಗ್ಯವಾಗಿ ಇಡುತ್ತವೆ. ಜೊತೆಗೆ ಜ್ಞಾಪಕ ಶಕ್ತಿಯನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ. 

4. ಜೀರ್ಣಕ್ರಿಯೆ ಸುಧಾರಿಸುತ್ತದೆ : 
ತುಪ್ಪದಲ್ಲಿ ಆಂಟಿ ಫಂಗಲ್ ಮತ್ತು ಆಂಟಿ ವೈರಲ್ ಗುಣವೂ ಇದೆ. ಇವು ಶರೀರವನ್ನು ರೋಗದಿಂದ ರಕ್ಷಿಸುತ್ತವೆ. ಊಟಕ್ಕಿಂತ ಮೊದಲು ಒಂದು ಚಮಚ ತುಪ್ಪ ತಿಂದರೆ ತಿಂದ ಆಹಾರ ಬಹಳ ಬೇಗನೆ ಜೀರ್ಣವಾಗುತ್ತದೆ. ಜೊತೆಗೆ ರೋಗಗಳಿಂದಲೂ ನಿಮ್ಮನ್ನು ರಕ್ಷಿಸುತ್ತದೆ.  

ಇದನ್ನೂ ಓದಿ : Summer Tips: ಬೇಸಿಗೆ ಕಾಲದಲ್ಲಿ ನಿತ್ಯ ಜಲ್ ಜೀರಾ ಸೇವನೆಯಿಂದಾಗುವ ಲಾಭಗಳು ನಿಮಗೆ ಗೊತ್ತಾ?

 

(ಸೂಚನೆ : ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News