ನವದೆಹಲಿ : ಕರ್ನಾಟಕ, ತೆಲಂಗಾಣ ಹಾಗೂ ಮಹಾರಾಷ್ಟ್ರಗಳಲ್ಲಿ ಹೆಚ್ಚಾಗುತ್ತಿರುವ ಕೊರೊನಾ ಪ್ರಕರಣಗಳ ಹಿನ್ನೆಲೆ ಕೇಂದ್ರ ಆರೋಗ್ಯ ಸಚಿವಾಲಯ ಶುಕ್ರವಾರ ಅಲರ್ಟ್ ಜಾರಿಗೊಳಿಸಿದೆ. ಈ ರಾಜ್ಯಗಳಲ್ಲಿ ಹೆಚ್ಚಾಗುತ್ತಿರುವ ಕೊರೊನಾ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಸ್ಥಿತಿಯನ್ನು ನಿಯಂತ್ರಣದಲ್ಲಿಟ್ಟುಕೂಳ್ಳಲು ಕಠಿಣ ಕ್ರಮ ಜರುಗಿಸಲು ಸೂಚಿಸಲಾಗಿದೆ. ಮಹಾರಾಷ್ಟ್ರದ ಮುಂಬೈ ನಂತಹ ಜಿಲ್ಲೆಗಳಲ್ಲಿ ಅತ್ಯಧಿಕ ಪ್ರಕರಣಗಳು ಕಂಡುಬಂದಿವೆ. ಮೇ 27 ಮತ್ತು ಜೂನ್ 2 ರ ನಡುವೆ, 2330 ಹೊಸ ಕೋವಿಡ್ ಪ್ರಕರಣಗಳು ಕಂಡುಬಂದಿವೆ.
ಸುಬರ್ಬನ್, ಮುಂಬೈ, ಥಾಣೆ, ರಾಯಗಡ, ಪಾಲ್ಘರ್ ಮುಂತಾದ ಜಿಲ್ಲೆಗಳು ಸೇರಿದಂತೆ ಮಹಾರಾಷ್ಟ್ರದ ಆರು ಜಿಲ್ಲೆಗಳ ಪೈಕಿ ಐದು ಜಿಲ್ಲೆಗಳು ಕಳೆದ ವಾರದವರೆಗೆ ಎರಡು ಪಟ್ಟು ಪ್ರಕರಣಗಳು ದಾಖಲಾಗಿವೆ. ಪುಣೆಯಲ್ಲಿ, 1.27 ಪಟ್ಟು ಹೆಚ್ಚು ಪ್ರಕರಣಗಳು ಕಂಡುಬಂದಿದೆ.
ಕರ್ನಾಟಕ ಮತ್ತು ಬೆಂಗಳೂರಿನಲ್ಲಿ ಒಂದು ವಾರದಲ್ಲಿ 1063 ಪ್ರಕರಣಗಳು ಕಂಡುಬಂದಿದ್ದು, ಅಬುಗಳಲ್ಲಿ ಶೇ.1.84 ಪಾಸಿಟಿವ್ ದರ ದಾಖಲಾಗಿದೆ. ಚೆನ್ನೈ ಮತ್ತು ಚೆಂಗಲ್ಪಟ್ಟು ಮುಂತಾದ ಜಿಲ್ಲೆಗಳಲ್ಲಿ ಈ ದರವು ಶೇಕಡಾ 3 ರಷ್ಟು ಇರುವುದು ಗಮನಕ್ಕೆ ಬಂದಿದೆ.
ಕೇರಳದಲ್ಲಿ ಈ ವಾರದಲ್ಲಿ 4139 ಕೋವಿಡ್ ಪ್ರಕರಣಗಳು ಕಂಡುಬಂದಿವೆ. ಮೇ 27 ರಂದು ಈ ಪ್ರಕರಣ ಕಂಡುಬಂದಿದ್ದು, ಜೂನ್ 3 ರಂದು ಈ ಪ್ರಕರಣ 6556 ಕ್ಕೆ ಏರಿಕೆಯಾಗಿದೆ. ಅಂದರೆ ಶೇ.31ರಷ್ಟು ಹೊಸ ಪ್ರಕರಣಗಳು ಭಾರತದಲ್ಲಿ ಕಂಡುಬಂದಿವೆ. ಸಕಾರಾತ್ಮಕತೆಯ ದರವು 5.2% ರಿಂದ 7.8% ಕ್ಕೆ ಏರಿತು.
ಕೇರಳದ 14 ಜಿಲ್ಲೆಗಳ ಪೈಕಿ 11 ಜಿಲ್ಲೆಗಳಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳನ್ನು ಗಮನಿಸಿದ ಕೇಂದ್ರ ಆರೋಗ್ಯ ಸಚಿವಾಲಯ ಪರಿಸ್ಥಿತಿಯನ್ನು ಕಳವಳಕಾರಿ ಸ್ಥಿತಿ ಎಂದು ಘೋಷಿಸಿದೆ.
ಇದನ್ನೂ ಓದಿ-30ಕ್ಕೂ ಅಧಿಕ ದೇಶಗಳಲ್ಲಿ ಮಂಗನ ಕಾಯಿಲೆ ಪ್ರಕರಣ, ಮಾರ್ಗಸೂಚಿ ಬಿಡುಗಡೆ ಮಾಡಿದ ಕೇಂದ್ರ
ಈ ಕುರಿತು ಮಾತನಾಡಿರುವ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್, ರೋಗದ ಪ್ರಕರಣಗಳನ್ನು ಮೇಲ್ವಿಚಾರಣೆ ಮಾಡಲು ಎಲ್ಲಾ ಆರೋಗ್ಯ ಸೌಲಭ್ಯಗಳನ್ನು ನಿಯಮಿತವಾಗಿ ಪರಿಶೀಲಿಸಲು ಸೂಚಿಸಲಾಗಿದೆ ಎಂದಿದ್ದಾರೆ.
ಇದನ್ನೂ ಓದಿ-ದೇಶದಲ್ಲಿ ಮತ್ತೆ ಕೊರೊನಾ ಅಬ್ಬರ: ಈ ರಾಜ್ಯದಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯ..!
ಎರಡು ತಿಂಗಳ ಅಂತರದ ನಂತರ ಗುರುವಾರ ಭಾರತದಲ್ಲಿ ಒಟ್ಟು 4 ಸಾವಿರ ಹೊಸ ಕೊವಿಡ್-19 ಪ್ರಕರಣಗಳು ದಾಖಲಾಗಿವೆ. ಭಾರತದ ಶೇ. 90% ಜನಸಂಖ್ಯೆ ಸಂಪೂರ್ಣಲಸಿಕೆಯನ್ನು ಪಡೆದ ನಂತರವೂ ಕೂಡ ಈ ಪ್ರಕರಣಗಳು ಪತ್ತೆಯಾಗುತ್ತಿವೆ ಎಂಬುದು ಇಲ್ಲಿ ಉಲ್ಲೇಖನೀಯ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.