ನವದೆಹಲಿ : ಲಘು ಆಹಾರ ಯಾವತ್ತೂ ದೇಹವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಲಘು ಆಹಾರ ಸೇವಿಸಿದರೆ ಅದು ಸುಲಭವಾಗಿ ಜೀರ್ಣವಾಗುತದೆ. ಅಲ್ಲದೆ, ಅಸಿಡಿಟಿ ಮತ್ತು ಅಜೀರ್ಣ ಸಮಸ್ಯೆಯನ್ನು (Digestion problem) ಎದುರಿಸಬೇಕಾಗಿಲ್ಲ. ಭಾರತದಲ್ಲಿ ಬೇಳೆಯನ್ನು ಹೆಚ್ಚಾಗಿ ಬಳಸುತ್ತೇವೆ. ಎಲ್ಲಾ ಸಾಂಬಾರ್ ಮಾಡುವಾಗಲೂ ಬೇಳೆಯನ್ನು ಅವಶ್ಯವಾಗಿ ಬಳಸಲಾಗುತ್ತದೆ. ಬೇಳೆಯಲ್ಲಿ ಅಗತ್ಯ ಪೋಷಕಾಂಶಗಳು ಅವುಗಳಲ್ಲಿ ಕಂಡುಬರುತ್ತವೆ. ಅದರಲ್ಲೂ ಬೇಳೆ ಬೇಯಿಸಿದ ನೀರು ಆರೋಗ್ಯಕ್ಕೆ (Health benefits of dal water) ಇನ್ನು ಒಳ್ಳೆಯದು. ಇದರಿಂದ ಆರೋಗ್ಯಕ್ಕೆ ಅನೇಕ ರೀಯ ಪ್ರಯೋಜನಗಳಾಗುತ್ತವೆ.
ಬೇಳೆ ಬೇಯಿಸಿದ (Dal water) ನೀರಿನಲ್ಲಿ ಪ್ರೋಟೀನ್, ಕಾರ್ಬೋಹೈಡ್ರೇಟ್ ಮತ್ತು ರಂಜಕವಿದೆ. ಪ್ರತಿನಿತ್ಯ ಒಂದು ಕಪ್ ಬೇಳೆ ಬೇಯಿಸಿದ ನೀರನ್ನು ಕುಡಿಯುವುದರಿಂದ, ದೇಹವನ್ನು ಅನೇಕ ರೋಗಗಳಿಂದ ರಕ್ಷಿಸಬಹುದು.
ಇದನ್ನೂ ಓದಿ : Benefits of Salad : ಸಲಾಡ್ ತಿನ್ನಲು ಸರಿಯಾದ ಮಾರ್ಗ ಯಾವುದು? ರಾತ್ರಿ ಕೂಡ ಸೇವಿಸುತ್ತಿದ್ದರೆ ಈ ಪ್ರಮುಖ ವಿಷಯ ತಿಳಿದುಕೊಳ್ಳಿ!
ಬೇಳೆ ಬೇಯಿಸಿದ ನೀರಿನಲ್ಲಿ ತುಪ್ಪವನ್ನು (ghee) ಬೆರೆಸಿ ಕುಡಿಯುವುದರಿಂದ ಅದರ ರುಚಿ ಹೆಚ್ಚುತ್ತದೆ. ಅಲ್ಲದೆ, ಇದು ಬಹಳ ಪೌಷ್ಟಿಕವಾಗಿದೆ. ಮಸೂರ ನೀರು ದೇಹದ ಉಷ್ಣತೆಯನ್ನು ನಿಯಂತ್ರಿಸುತ್ತದೆ. ಬೇಸಿಗೆಯಲ್ಲಿ (Summer) ಬಿಸಿಲು ಮತ್ತು ಅತಿಯಾದ ಶಾಖದ ಕಾರಣದಿಂದ ಉಂಟಾಗುವ ಸಮಸ್ಯೆಯಿಂದ ದೇಹವನ್ನು ಕಾಪಾಡಲು ಸಹಾಯ ಮಾಡುತ್ತದೆ.
ಬೇಳೆ ನೀರು ಕುಡಿಯುವುದರಿಂದ ದೇಹಕ್ಕೆ ಶಕ್ತಿ ಬರುತ್ತದೆ. ಅದನ್ನು ಫ್ರಿಜ್ ನಲ್ಲಿಟ್ಟು (fridge) ತಣ್ಣಗಾದ ನಂತರವು ಅದನ್ನು ಕುಡಿಯಬಹುದು.
ಬೇಳೆ ನೀರು ದೇಹದ ರೋಗನಿರೋಧಕ ಶಕ್ತಿಯನ್ನು (immunity) ಹೆಚ್ಚಿಸುತ್ತದೆ. ತೂಕವನ್ನು ಕಡಿಮೆ ಮಾಡಲು, ಕೂಡಾ ಬೇಳೆ ನೀರು ತುಂಬಾ ಪ್ರಯೋಜನಕಾರಿಯಾಗಿದೆ. ಬೇಳೆ ನೀರನ್ನು ಕುಡಿಯುವುದರಿಂದ ದೀರ್ಘಕಾಲದವರೆಗೆ ಹಸಿವಾಗುವುದಿಲ್ಲ.
ಇದನ್ನೂ ಓದಿ : Sleep Disorders : ನಿಮಗೆ ರಾತ್ರಿ ನಿದ್ದೆ ಬರುತ್ತಿಲ್ಲವೆ? ಹಾಗಿದ್ರೆ ಈ ಕೆಲಸ ಮಾಡಿ, ಅದ್ಭುತ ಲಾಭ ಪಡೆಯಿರಿ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ