ತಪ್ಪಿಯೂ ಈ ಆಹಾರಗಳನ್ನು ಫ್ರಿಡ್ಜ್ ನಲ್ಲಿ ಇಡಬೇಡಿ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ

ಎಲ್ಲರ ಮನೆಯ ಫ್ರಿಜ್‌ ಹಣ್ಣುಗಳು , ತರಕಾರಿಗಳಿಂದ  ತುಂಬಿರುತ್ತವೆ. ಬೇಸಿಗೆ ಮತ್ತು ಮಳೆಗಾಲದಲ್ಲಿ ಈ ವಸ್ತುಗಳು ಬೇಗನೆ ಹಾಳಾಗಿ ಬಿಡುತ್ತವೆ.

Written by - Ranjitha R K | Last Updated : Aug 8, 2021, 11:47 AM IST
  • ಎಲ್ಲಾ ಆಹಾರಗಳನ್ನು ಫ್ರಿಜ್ ನಲ್ಲಿಡುವುದು ಸೂಕ್ತವಲ್ಲ
  • ಈ ಆಹಾರಗಳನ್ನು ಫ್ರಿಜ್ ನಲ್ಲಿಡಲೇಬಾರದು
  • ಈ ತರಕಾರಿಗಳನ್ನು ಕೂಡಾ ಫ್ರಿಜ್ ನಲ್ಲಿ ಇಡಬಾರದು
ತಪ್ಪಿಯೂ ಈ ಆಹಾರಗಳನ್ನು ಫ್ರಿಡ್ಜ್ ನಲ್ಲಿ ಇಡಬೇಡಿ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ  title=
ಎಲ್ಲಾ ಆಹಾರಗಳನ್ನು ಫ್ರಿಜ್ ನಲ್ಲಿಡುವುದು ಸೂಕ್ತವಲ್ಲ (photo zee news)

ನವದೆಹಲಿ : ಸಾಮಾನ್ಯವಾಗಿ ನಾವು ಆಹಾರ ಸಾಮಗ್ರಿಗಳನ್ನು ಫ್ರಿಡ್ಜ್ ನಲ್ಲಿಟ್ಟು ಸ್ಟೋರ್ ಮಾಡುತ್ತೇವೆ. ಅಗತ್ಯವಿದ್ದಾಗ ​ಇದನ್ನು ಉಪಯೋಗಿಸುತ್ತೇವೆ ಎಂಬ ಉದ್ದೇಶದಿಂದ ಫ್ರಿಡ್ಜ್ ನಲ್ಲಿ ಇಡುತ್ತೇವೆ. ಇನ್ನು, ರೆಫ್ರಿಜರೇಟರ್ ನಲ್ಲಿ ಇಟ್ಟ ಆಹಾರಗಳು ಕೆಡುವುದಿಲ್ಲ ಎಂಬ ಭಾವನೆ ನಮ್ಮದಾಗಿರುತ್ತದೆ. ಆದರೆ ಇದು ಸಂಪೂರ್ಣ ಸತ್ಯ ಅಲ್ಲ.  ಫ್ರಿಜ್‌ನಲ್ಲಿ  ಆಹಾರ (Food stored in fridge) ಇಂತಿಷ್ಟು ದಿನಗಳವರೆಗೆ ಮಾತ್ರ ಕೆಡದೆ ಉಳಿಯುತ್ತದೆ.  

ಮಳೆಗಾಲದಲ್ಲಿ ಈ ವಿಷಯದ ಬಗ್ಗೆ ಎಚ್ಚರವಿರಲಿ :  
ಎಲ್ಲರ ಮನೆಯ ಫ್ರಿಜ್‌ ಹಣ್ಣುಗಳು (Fruits) , ತರಕಾರಿಗಳಿಂದ  ತುಂಬಿರುತ್ತವೆ. ಬೇಸಿಗೆ ಮತ್ತು ಮಳೆಗಾಲದಲ್ಲಿ ಈ ವಸ್ತುಗಳು ಬೇಗನೆ ಹಾಳಾಗಿ ಬಿಡುತ್ತವೆ. ಕೆಲವು ಹಣ್ಣುಗಳು ಮತ್ತು ತರಕಾರಿಗಳು (Vegetabels) ಫ್ರಿಜ್‌ನಲ್ಲಿ ಹಲವು ದಿನಗಳವರೆಗೆ ಉಳಿಯುತ್ತವೆ. ಆದರೆ, ಇನ್ನು ಕೆಲವು ವಸ್ತುಗಳನ್ನು ಫ್ರಿಜ್‌ನಲ್ಲಿ ಇಡುವುದರಿಂದ ಆರೋಗ್ಯದ ಮೇಲೆ ಬಹಳ ಪರಿಣಾಮ ಬೀರಲಿದೆ. 

ಇದನ್ನೂ ಓದಿ : ಈ ಸಮಸ್ಯೆಗಳಿರುವ ಪುರುಷರು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ ಅರಶಿನ ಮತ್ತು ಜೇನುತುಪ್ಪ

ಈ ಹಣ್ಣನ್ನು ಫ್ರಿಜ್ ನಲ್ಲಿ ಇಡಬೇಡಿ :
ಅನೇಕರು  ಬಾಳೆಹಣ್ಣನ್ನು (Banana) ಕೂಡ ಫ್ರಿಜ್‌ನಲ್ಲಿ  ಇಡುತ್ತಾರೆ. ಫ್ರಿಜ್ ನಲ್ಲಿಟ್ಟಿರುವ ಬಾಳೆಹಣ್ಣನ್ನು ತಿನ್ನುವುದರಿಂದ ನಿಮ್ಮ ಆರೋಗ್ಯ  ಹಾಳಾಗಬಹುದು. ಬಾಳೆಹಣ್ಣನ್ನು ಫ್ರಿಜ್ ನಲ್ಲಿ ಇಡುವುದರಿಂದ, ಬಾಳೆಹಣ್ಣು ಮಾತ್ರವಲ್ಲ ಇತರ ಹಣ್ಣುಗಳು ಮತ್ತು ತರಕಾರಿಗಳು ಕೂಡ ಹಾಳಾಗಬಹುದು. ಅದೇ ಸಮಯದಲ್ಲಿ, ಕತ್ತರಿಸಿದ ಮಾವಿನಹಣ್ಣು,  ಮತ್ತು ಕಲ್ಲಂಗಡಿ ಹಣ್ಣನ್ನು (Watermelon) ಕೂಡಾ ಫ್ರಿಜ್‌ನಲ್ಲಿ ಇಡಬಾರದು.

ಈ ತರಕಾರಿಗಳನ್ನು ಕೂಡಾ ಫ್ರಿಜ್ ನಲ್ಲಿ ಇಡಬಾರದು : 
ಜನರು ಆಲೂಗಡ್ಡೆ (Potato), ಈರುಳ್ಳಿ ಮತ್ತು ಬೆಳ್ಳುಳ್ಳಿಯಂತಹ ತರಕಾರಿಗಳನ್ನು ಫ್ರಿಜ್‌ನಲ್ಲಿ ಇಡುತ್ತಾರೆ. ಆದರೆ ಇದು ತಪ್ಪು. ಈ ತರಕಾರಿಗಳನ್ನು ಫ್ರಿಜ್ ನಲ್ಲಿಡಬಾರದು.  ಆಲೂಗಡ್ಡೆಯನ್ನು ಫ್ರಿಜ್‌ನಲ್ಲಿ ಇಟ್ಟರೆ,  ಮಧುಮೇಹ ರೋಗಿಗಳ ಸಮಸ್ಯೆಗಳನ್ನು ಹೆಚ್ಚಿಸಬಹುದು.  ಏಕೆಂದರೆ ಆಲೂಗಡ್ಡೆಯ ಸ್ಟಾರ್ಚ್ ಶೀತದಿಂದಾಗಿ ಸಕ್ಕರೆಯಾಗಿ ಬದಲಾಗುತ್ತದೆ. ಆಲೂಗಡ್ಡೆಯನ್ನು ಕಾಗದದ ಚೀಲದಲ್ಲಿ ಹಾಕಿ, ಅದನ್ನು ತೆರೆದ ಸ್ಥಳದಲ್ಲಿ ಇರಿಸಿಡ್ರೆ ಅದು ಕೆಡುವುದಿಲ್ಲ. 

ಇದನ್ನೂ ಓದಿ : Benefits of Black Pepper: ಕೇವಲ ಅಡುಗೆಯಲ್ಲಷ್ಟೇ ಅಲ್ಲ, ಈ ಕೆಲಸಕ್ಕೂ ನೀವು ಕರಿ ಮೆಣಸು ಬಳಸಬಹುದು

ಫ್ರಿಜ್ ನಲ್ಲಿ ಜೇನುತುಪ್ಪ ಇಡಬೇಡಿ:
ಹಾಳಾಗಬಹುದು ಎನ್ನುವ ಕಾರಣಕ್ಕೆ ಕೆಲವರು,ಜೇನು ತುಪ್ಪವನ್ನು (Honey) ಫ್ರಿಜ್ ನಲ್ಲಿಡುತ್ತಾರೆ. ಆದರೆ ಇಫು ಸರಿಯಾದ ಕ್ರಮ ಅಲ್ಲ. ಜೇನುತುಪ್ಪವನ್ನು ಫ್ರಿಜ್ ನಲ್ಲಿ ಇಡುವುದರಿಂದ ಹರಳುಗಳು ಜೇನುತುಪ್ಪದಲ್ಲಿ ರೂಪುಗೊಳ್ಳುತ್ತವೆ. ಅಂತಹ ಜೇನುತುಪ್ಪವನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಪ್ರಯೋಜನವಾಗುವ ಬದಲು ಹಾನಿಯಾಗುತ್ತದೆ. ಅದೇ ಸಮಯದಲ್ಲಿ, ಬ್ರೆಡ್ ಅನ್ನು ಫ್ರಿಜ್‌ನಲ್ಲಿ ಇಡಬಾರದು. ಫ್ರಿಜ್ ನಲ್ಲಿಟ್ಟ ಬ್ರೆಡ್ (Bread kept in fridge) ತಿನ್ನುವುದರಿಂದ ಕೂಡಾ ಆರೋಗ್ಯಕ್ಕೆ ಹಾನಿಯಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News