Vitamin D rich foods: ವಿಟಮಿನ್ ಡಿ ಕೊಬ್ಬಿನಲ್ಲಿ ಕರಗುವ ವಿಟಮಿನ್ ಆಗಿದ್ದು, ಮೂಳೆ ಮತ್ತು ಹಲ್ಲುಗಳ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಜೊತೆಗೆ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಅಲ್ಲದೆ ಮೆದುಳು ಮತ್ತು ನರಮಂಡಲದ ಕಾರ್ಯವನ್ನು ಹೆಚ್ಚಿಸುತ್ತದೆ. ಚರ್ಮವನ್ನು ಸೂರ್ಯನ ಬೆಳಕಿಗೆ ಒಡ್ಡಿಕೊಂಡಾಗ ಈ ವಿಟಮಿನ್ ದೇಹದಿಂದ ಉತ್ಪತ್ತಿಯಾಗುತ್ತದೆ. ಹೀಗಾಗಿ ನೈಸರ್ಗಿಕವಾಗಿ ದೇಹಕ್ಕೆ ಅಗತ್ಯವಿರುವ ವಿಟಮಿನ್ ಡಿ ಲಭಿಸುತ್ತದೆ. ಆದರೆ ಮೀನು, ಮೊಟ್ಟೆಯ ಹಳದಿ ಭಾಗ, ಹಾಲು ಮತ್ತು ಧಾನ್ಯಗಳಂತಹ ಸಾರವರ್ಧಿತ ಆಹಾರಗಳ ಮೂಲಕವೂ ವಿಟಮಿನ್ ಡಿಯನ್ನು ಪಡೆಯಬಹುದು.
ವಿಟಮಿನ್ ಡಿ ದೇಹವು ಕ್ಯಾಲ್ಸಿಯಂ ಮತ್ತು ರಂಜಕವನ್ನು ಹೀರಿಕೊಳ್ಳಲು ಮತ್ತು ಬಳಸಲು ಸಹಾಯ ಮಾಡುತ್ತದೆ. ಇದು ಮೂಳೆಗಳ ಆರೋಗ್ಯಕ್ಕೆ ಬಹಳ ಮುಖ್ಯ. ಇದು ಉರಿಯೂತವನ್ನು ಕಡಿಮೆ ಮಾಡುವಲ್ಲಿ, ಕೋಶಗಳ ಬೆಳವಣಿಗೆ ಮತ್ತು ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ದೇಹದಲ್ಲಿ ವಿಟಮಿನ್ ಡಿ ಕೊರತೆಯಾದರೆ ಆಸ್ಟಿಯೊಪೊರೋಸಿಸ್, ಮಧುಮೇಹ, ಹೃದ್ರೋಗ ಮತ್ತು ಕೆಲವು ರೀತಿಯ ಕ್ಯಾನ್ಸರ್ ಸೇರಿದಂತೆ ಅನೇಕ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ. ವಿಟಮಿನ್ ಡಿ ಯಲ್ಲಿ ಸಮೃದ್ಧವಾಗಿರುವ ಆಹಾರಗಳ ಬಗ್ಗೆ ನಾವಿಲ್ಲಿ ಮಾಹಿತಿ ನೀಡುತ್ತಿದೇವೆ.
ಇದನ್ನೂ ಓದಿ : French fries: ನೀವು ಬಾಯಿ ಚಪ್ಪರಿಸಿ ತಿನ್ನುವ ʻಫ್ರೆಂಚ್ ಫ್ರೈʼ ಈ ಮಾರಕ ರೋಗಕ್ಕೆ ಕಾರಣ!
ಕೊಬ್ಬಿನಾಂಶ ಇರುವ ಮೀನು :
ಸಾಲ್ಮನ್, ಟ್ಯೂನ ಮತ್ತು ಮ್ಯಾಕೆರೆಲ್‌ನಂತಹ ಕೊಬ್ಬಿನಾಂಶ ಅಧಿಕ ಪ್ರಮಾಣದಲ್ಲಿರುವ ಮೀನುಗಳು ವಿಟಮಿನ್ ಡಿ ಯ ಸಮೃದ್ಧ ಮೂಲಗಳಾಗಿವೆ. ಸಾಲ್ಮನ್ ಮೀನಿನ 3-ಔನ್ಸ್ ನಲ್ಲಿ ಸುಮಾರು 450 IU ವಿಟಮಿನ್ ಡಿ ದೇಹಕ್ಕೆ ಲಭಿಸುತ್ತದೆ.
ಮೊಟ್ಟೆಯ ಹಳದಿ ಭಾಗ :
ಮೊಟ್ಟೆಯ ಹಳದಿ ಲೋಳೆಯು ವಿಟಮಿನ್ ಡಿ ಯ ಉತ್ತಮ ಮೂಲವಾಗಿದೆ. ಒಂದು ದೊಡ್ಡ ಮೊಟ್ಟೆಯ ಸೇವನೆಯು ದೇಹಕ್ಕೆ ಅಗತ್ಯವಿರುವ ವಿಟಮಿನ್ ಡಿಯ 6% ದಷ್ಟನ್ನು ಒದಗಿಸುತ್ತದೆ.
ಅಣಬೆ :
ಅಣಬೆಗಳು ವಿಟಮಿನ್ ಡಿ ಯ ಏಕೈಕ ಸಸ್ಯ ಆಧಾರಿತ ಮೂಲವಾಗಿದೆ. ನೇರಳಾತೀತ ಬೆಳಕಿಗೆ ಒಡ್ಡಿಕೊಳ್ಳುವುದರಿಂದ ಅಣಬೆಗಳಲ್ಲಿ ವಿಟಮಿನ್ ಡಿ ಪ್ರಮಾಣ ಹೆಚ್ಚಿರುತ್ತದೆ.
ಇದನ್ನೂ ಓದಿ : ತೂಕವನ್ನು ಹೆಚಿಸಲು ಸಹಾಯ ಮಾಡುವ ಅತ್ಯುತ್ತಮ ಆಹಾರಗಳಿವು..!
ಸಾರವರ್ಧಿತ ಆಹಾರಗಳು :
ಹಾಲು, ಕಿತ್ತಳೆ ರಸ ಮತ್ತು ಸಿರಿಧಾನ್ಯಗಳಂತಹ ಅನೇಕ ಆಹಾರಗಳು ವಿಟಮಿನ್ ಡಿಯ ಆಗರವಾಗಿದೆ. ಇವುಗಳನ್ನು ಸೇವಿಸುವುದರಿಂದ ದೇಹಕ್ಕೆ ಅಗತ್ಯವಿರುವ ವಿಟಮಿನ್ ಡಿ ದೇಹಕ್ಕೆ ಲಭಿಸುತ್ತದೆ.
( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.