Makhana: ಈ ಜನರು ಮರೆತೂ ಕೂಡ ಮಖನಾ ಸೇವಿಸಬಾರದು, ಸಮಸ್ಯೆ ಉಲ್ಬಣಿಸುತ್ತದೆ

Side Effects Of Makhana: ದಿನನಿತ್ಯ ಮಖನಾ ಸೇವನೆ ಆರೋಗ್ಯಕ್ಕೆ ತುಂಬಾ ಲಾಭಕಾರಿಯಾಗಿದೆ. ಆದರೆ, ಕೆಲವರು ಮಕನಾ ಸೇವನೆಯನ್ನು ತಪ್ಪಿಸಬೇಕು.

Written by - Nitin Tabib | Last Updated : Nov 24, 2022, 04:01 PM IST
  • ಮಖನಾದಲ್ಲಿ ಉರಿಯೂತ ನಿವಾರಕ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳಿವೆ.
  • ಅಷ್ಟೇ ಅಲ್ಲ ಮಖನಾದಲ್ಲಿ ಉತ್ತಮ ಪ್ರಮಾಣದ ಕ್ಯಾಲೋರಿಗಳು ಕಂಡುಬರುತ್ತವೆ.
  • ಇದರಿಂದಾಗಿ ಜನರು ತೂಕ ಹೆಚ್ಚಿಸಿಕೊಳ್ಳಲು ಕೂಡ ಅವುಗಳನ್ನು ಸೇವಿಸುತ್ತಾರೆ.
Makhana: ಈ ಜನರು ಮರೆತೂ ಕೂಡ ಮಖನಾ ಸೇವಿಸಬಾರದು, ಸಮಸ್ಯೆ ಉಲ್ಬಣಿಸುತ್ತದೆ title=
Eating Makhana

Disadvantages Of Eating Too Much Makhana:ಮಖನಾ ಸೇವನೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ.ಉಪವಾಸದ ಸಮಯದಲ್ಲಿ ಮಖನಾವನ್ನು ತಿನ್ನಲು ಹಲವರು ಇಷ್ಟಪಡುತ್ತಾರೆ. ಏಕೆಂದರೆ ಮಖನಾದಲ್ಲಿ ಉರಿಯೂತ ನಿವಾರಕ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳಿವೆ. ಅಷ್ಟೇ ಅಲ್ಲ ಮಖನಾದಲ್ಲಿ ಉತ್ತಮ ಪ್ರಮಾಣದ ಕ್ಯಾಲೋರಿಗಳು ಕಂಡುಬರುತ್ತವೆ. ಇದರಿಂದಾಗಿ ಜನರು ತೂಕ ಹೆಚ್ಚಿಸಿಕೊಳ್ಳಲು ಕೂಡ ಅವುಗಳನ್ನು ಸೇವಿಸುತ್ತಾರೆ. ಆದರೆ ಇಷ್ಟೆಲ್ಲಾ ಗುಣಗಳಿದ್ದರೂ ಕೆಲವರು ಮಖನಾವನು ಸೇವಿಸಬಾರದು. ಹೌದು, ಕೆಲವರು ಮಖನಾ ಸೇವನೆಯನ್ನು ತಪ್ಪಿಸಬೇಕು. ಹಾಗಾದರೆ ಬನ್ನಿ ಯಾರು ಮಖನಾ ಸೇವನೆಯಿಂದ ಅಂತರ ಕಾಯ್ದುಕೊಳ್ಳಬೇಕು ಎಂಬುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ,

ಈ ಜನರು ಅಪ್ಪಿತಪ್ಪಿಯೂ ಕೂಡ ಮಖನಾ ಸೇವೆಸಬಾರದು
ಗ್ಯಾಸ್ಟ್ರಿಕ್ ಸಮಸ್ಯೆ

ಮಖನಾದಲ್ಲಿ ಹೇರಳ ಪ್ರಮಾಣದಲ್ಲಿ ಫೈಬರ್ ಮತ್ತು ಪ್ರೋಟೀನ್ ಕಂಡುಬರುತ್ತದೆ, ಇವು ಜೀರ್ಣಿಸಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ನಿಮಗೆ ಈಗಾಗಲೇ ಹೊಟ್ಟೆಯ ಸಮಸ್ಯೆ ಇದ್ದರೆ, ನೀವು ಮಖನಾವನ್ನು ಸೇವಿಸಬಾರದು, ಏಕೆಂದರೆ ಮಖನಾ ಸೇವಿಸುವುದರಿಂದ ನಿಮ್ಮ ಸಮಸ್ಯೆ ಮತ್ತಷ್ಟು ಹೆಚ್ಚಾಗಬಹುದು. ಹೀಗಾಗಿ ಹೊಟ್ಟೆಯ ಸಮಸ್ಯೆ ಇರುವವರು ಮಖಾನವನ್ನು ಸೇವಿಸಬಾರದು.

ಮೂತ್ರಪಿಂಡದ ಹರಳು
ನೀವು ಮೂತ್ರಪಿಂಡದ ಹರಳುಗಳ ಸಮಸ್ಯೆಯಿಂದ ತೊಂದರೆಗೊಳಗಾಗಿದ್ದರೆ, ನೀವು ಮಖನಾವನ್ನು ಸೇವಿಸುವುದನ್ನು ತಪ್ಪಿಸಬೇಕು. ಏಕೆಂದರೆ ಮಖನಾದಲ್ಲಿ ಉತ್ತಮ ಪ್ರಮಾಣದ ಕ್ಯಾಲ್ಸಿಯಂ ಇದೆ. ಇದರಿಂದಾಗಿ ಹರಳಿನ  ಗಾತ್ರ ಹೆಚ್ಚಾಗಬಹುದು. ಹೀಗಾಗಿ ಕಿಡ್ನಿ ಸ್ಟೋನ್ ರೋಗಿಗಳು ಮಖನಾವನ್ನು ಸೇವಿಸಬಾರದು.

ಇದನ್ನೂ ಓದಿ-Diabetes: ಕಣ್ಣುಗಳಲ್ಲಿ ಕಾಣಿಸಿಕೊಳ್ಳುವ ಈ ಲಕ್ಷಣಗಳು ರಕ್ತದಲ್ಲಿನ ಅನಿಯಂತ್ರಿತ ಸಕ್ಕರೆಯ ಮಟ್ಟದ ಸಂಕೇತಗಳಾಗಿವೆ ಎಚ್ಚರ!

ಅತಿಸಾರ ಸಮಸ್ಯೆ
ಮಖನಾದಲ್ಲಿರುವ ಫೈಬರ್‌ಗಳು ಅತಿಸಾರದಿಂದ ಬಳಲುತ್ತಿರುವ ರೋಗಿಗಳಿಗೆ ಹಾನಿಕಾರಕ ಸಾಬೀತಾಗಬಹುದು. ಏಕೆಂದರೆ ಮಖನಾದಲ್ಲಿ ಉತ್ತಮ ಪ್ರಮಾಣದ ನಾರಿನಂಶವಿದ್ದು, ಇದು ಅತಿಸಾರದ ಸಮಸ್ಯೆಯನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ. ಹೇಗಾಗಿ ಅತಿಸಾರದ ಸಂದರ್ಭದಲ್ಲಿ ಮಖನಾ ಸೇವಿಸುವುದನ್ನು ಆದಷ್ಟು ತಪ್ಪಿಸಿ.

ಇದನ್ನೂ ಓದಿ-Caffeine Side Effects: ಒಂದು ತಿಂಗಳು ಟೀ-ಕಾಫಿ ಕುಡಿಯುವುದು ಬಿಟ್ಟರೆ ದೇಹದಲ್ಲಿ ಈ ಬದಲಾವಣೆಯಾಗುವುದು ಖಂಡಿತ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News