Health Tips:ಗಂಟಲಿನ ತುರಿಕೆಯನ್ನು ನಿರ್ಲಕ್ಷಿಸಬೇಡಿ, ಸರಿಪಡಿಸಲು ಇಲ್ಲಿವೆ ಸುಲಭ ಉಪಾಯಗಳು

ಗಂಟಲಿನ ಖಿಚ್ ಖಿಚ್ ಉರಿತ ಹಾಗೂ ಬಾವು ಕೂಡ ಉಂಟು ಮಾಡುತ್ತದೆ. ಚಿಕಿತ್ಸೆಗಾಗಿ ನೀವು ಮನೆಯಲ್ಲಿಯೇ ಹಲವು ಸಾಧಾರಣ ಉಪಾಯಗಳನ್ನು ಮಾಡಬಹುದು.

Last Updated : Sep 8, 2020, 02:03 PM IST
  • ಗಂಟಲಿನ ಖಿಚ್ ಖಿಚ್ ಉರಿತ ಹಾಗೂ ಬಾವು ಕೂಡ ಉಂಟು ಮಾಡುತ್ತದೆ.
  • ಚಿಕಿತ್ಸೆಗಾಗಿ ನೀವು ಮನೆಯಲ್ಲಿಯೇ ಹಲವು ಸಾಧಾರಣ ಉಪಾಯಗಳನ್ನು ಮಾಡಬಹುದು.
  • 3-4 ದಿನಗಳ ಬಳಿಕವೂ ಕೂಡ ತುರಿಕೆ, ನೋವು ಮುಂದುವರೆದರೆ ವೈದ್ಯರನ್ನು ಸಂಪರ್ಕಿಸಿ.
Health Tips:ಗಂಟಲಿನ ತುರಿಕೆಯನ್ನು ನಿರ್ಲಕ್ಷಿಸಬೇಡಿ, ಸರಿಪಡಿಸಲು ಇಲ್ಲಿವೆ ಸುಲಭ ಉಪಾಯಗಳು title=

ನವದೆಹಲಿ: ಗಂಟಲಿನ ತುರಿಕೆ ಒಂದು ಸಾಮಾನ್ಯ ಸಮಸ್ಯೆಯಾಗಿದೆ. ಇದನ್ನು ಕೇವಲ ನಾಲ್ಕೈದುದಿನಗಳಲ್ಲೂ ಸರಿಪದಿಸಬಹುದು. ಒಂದು ವೇಳೆ ಈ ತುರಿಕೆಯ ನೋವು ಗುಣಮುಖವಾಗದಿದ್ದರೆ ನೀವು ವೈದ್ಯರನ್ನು ಸಂಪರ್ಕಿಸಬಹುದು. ಹೆಚ್ಚಿನ ಸಂದರ್ಭಗಳಲ್ಲಿ ನೋಯುತ್ತಿರುವ ಗಂಟಲು ಒಂದು ವೈರಲ್ ಸಮಸ್ಯಾಗಿರುತ್ತದೆ. ಆದರೆ, ಕೆಲವೊಮ್ಮೆ ಇದು ಬ್ಯಾಕ್ಟೀರಿಯಾ ಇನ್ಫೆಕ್ಷನ್ ಕೂಡ ಆಗಿರಬಹುದು.

ಸ್ಟ್ರೆಪ್ಟೋಕೊಕಸ್ ಬ್ಯಾಕ್ಟೀರಿಯಾದಿಂದ ಉಂಟಾಗುವ ಸ್ಟ್ರೆಪ್ ಥ್ರೋಟ್  ಹೆಚ್ಚು ಅಪಾಯಕಾರಿ. ಸ್ಟ್ರೆಪ್ಟೋಕೊಕಸ್ ಬ್ಯಾಕ್ಟೀರಿಯಾದ ಸೋಂಕು ಕೂಡ ಹೆಚ್ಚಿನ ಜ್ವರಕ್ಕೆ ಕಾರಣವಾಗಬಹುದು. ಗಂಟಲಿನ ಸೋಂಕು ವೈರಲ್ ಗಂಟಲಿನ ಸೋಂಕುಗಿಂತ ಹೆಚ್ಚು ತೊಂದರೆ ಉಂಟುಮಾಡುತ್ತದೆ. ಸ್ಟ್ರೆಪ್ ಥ್ರೋಟ್ ಗೆ ಚಿಕಿತ್ಸೆ ನೀಡದಿದ್ದರೆ ರುಮಾಟಿಕ್ ಜ್ವರದ ಅಪಾಯವೂ ಇದೆ. ಗಂಟಲು ಕಿರಿಕಿರಿ  ಯಾವುದೇ ಸಮಯದಲ್ಲಿ ಸಂಭವಿಸಬಹುದು. ಇದನ್ನು ಮನೆಮದ್ದುಗಳಿಂದಲೂ ಕೂಡ ಪರಿಹರಿಸಬಹುದು.

1. ಉಪ್ಪು ನೀರಿನಿಂದ ಬಾಯಿ ಮುಕ್ಕಳಿಸಿ
ಉಪ್ಪನ್ನು ನೀರಿಗೆ ಬೆರೆಸಿ ಅದನ್ನು ಬಿಸಿ ಮಾಡಬೇಕು. ಬಳಿಕ ಆ ನೀರಿನಿಂದ ಬಾಯಿ ಮುಕ್ಕಳಿಸಿದರೆ ಗಂಟಲು ನೋವಿನಿಂದ ಆರಾಮ ಸಿಗುತ್ತದೆ.  ಇದಕ್ಕಾಗಿ ಅರ್ಧ ಚಮಚೆ ಉಪ್ಪನ್ನು 4-8 ಔನ್ಸ್ ನೀರಿಗೆ ಬೆರೆಸಿ ಅದನ್ನು ಉಪ್ಪು ಕರಗುವವರೆಗೆ ಬಿಸಿ ಮಾಡಬೇಕು. ಬಳಿಕ ಕೆಲ ನಿಮಿಷಗಳ ಕಾಲ ಬಾಯಿ ಮುಕ್ಕಳಿಸಬೇಕು. ದಿನದಲ್ಲಿ ಹಲವು ಬಾರಿ ನೀವು ಈ ಕೆಲಸ ಮಾಡಬಹುದಾಗಿದೆ.

2. ಹೈಡ್ರೇಟೆಡ್ ಆಗಿರಿ
ಗಂಟಲಿನಲ್ಲಿ ಕಿರಿಕಿರಿಯದ ವೇಳೆ ಹೈಡ್ರೇಟೆಡ್ ಆಗಿರುವುದು ತುಂಬಾ ಮುಖ್ಯ. ಇದರಿಂದ ನಮ್ಮ ಶರೀರಿರ ಹೆಚ್ಚಿನ ಪ್ರಮಾಣದಲ್ಲಿ ಲಾಲಾ ರಸ ಸೃವಿಸುತ್ತದೆ. ಸಮಸ್ಯೆ ದೂರಗೊಳಿಸಲು ಬಿಸಿಯಾದ ಚಹಾ ಹಾಗೂ ಬಿಸಿ ಸೂಪ್ ಜಗದಲ್ಲಿ ಬಿಸಿ ನೀರು ಒಂದು ಉತ್ತಮ ಆಯ್ಕೆಯಾಗಿದೆ. ಶಾಸ್ತ್ರಜ್ಞರ ಪ್ರಕಾರ ಕ್ಯಾಫಿನ್, ಅಲ್ಕೋಹಾಲ್ ಗಂಟಲನ್ನು ಮತ್ತಷ್ಟು ಒಣಗೊಳಿಸುತ್ತವೆ.

3.ಚಹಾ ಜೊತೆಗೆ ಜೇನುತುಪ್ಪ 
ಒಂದು ವೇಳೆ ನೀವು ಚಹಾ ಸೇವಿಸುತ್ತಿದ್ದರೆ, ಚಹಾದಲ್ಲಿ ಜೇನುತುಪ್ಪ ಬೆರೆಸಲು ಮರೆಯದಿರಿ. ಕೆಮ್ಮು ನಿವಾರಣೆಗೆ ಜೇನುತುಪ್ಪ ಒಂದು ಉತ್ತಮ ಮದ್ದು. ಚಹಾ ನಿಮ್ಮ ಶರೀರ ಹಾಗೂ ಗಂಟಲನ್ನು ತೇವವಾಗಿಡುತ್ತದೆ.

Trending News