ನವದೆಹಲಿ: ಪ್ರಪಂಚದಲ್ಲಿ ಮಧುಮೇಹದ ಕಾಯಿಲೆಯಿಂದ ಕೋಟ್ಯಂತರ ಜನರು ಸಮಸ್ಯೆ ಎದುರಿಸುತ್ತಿದ್ದಾರೆ. ಭಾರತವನ್ನು ಮಧುಮೇಹಿಗಳ ರಾಜಧಾನಿ ಎಂದು ಕರೆಯುತ್ತಾರೆ. ದೇಶದಲ್ಲಿ ಈ ಕಾಯಿಲೆಯ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಯಾರಿಗಾದರೂ ಒಮ್ಮೆ ಈ ಕಾಯಿಲೆ ಬಂದರೆ ಸಾಕು ಅದು ಜೀವನವಿಡೀ ಕಾಡುತ್ತದೆ. ಹೀಗಾಗಿ ಹೆಚ್ಚಿನ ಜನರು ಇದರಿಂದ ಭಯಭೀತರಾಗಿದ್ದಾರೆ, ತಮ್ಮ ಶತ್ರುಗಳಿಗೂ ಈ ಕಾಯಿಲೆ ಬರಬಾರದು ಅಂತಾ ಪ್ರಾರ್ಥಿಸುತ್ತಾರೆ. ಮಧುಮೇಹಿಗಳು ಈ 3 ಅಭ್ಯಾಸಗಳನ್ನು ಇಂದೇ ಬಿಟ್ಟುಬಿಡುವುದು ಒಳ್ಳೆಯದು.
1) ಬೆಳಗಿನ ಉಪಾಹಾರ
ಇಂದು ಬಹುತೇಕರು ಶಾಲೆ-ಕಾಲೇಜು ಅಥವಾ ಕಚೇರಿಗೆ ಹೋಗುವ ಆತುರದಲ್ಲಿ ಬೆಳಗಿನ ಉಪಾಹಾರ ಸೇವಿಸುವುದಿಲ್ಲ. ಆದರೆ ಇದರಿಂದ ನಮ್ಮ ಆರೋಗ್ಯಕ್ಕೆ ತುಂಬಾ ಹಾನಿಯಾಗುತ್ತದೆ. ಅಪ್ಪಿತಪ್ಪಿಯೂ ನೀವು ಈ ತಪ್ಪು ಮಾಡಬೇಡಿ, ಇಲ್ಲದಿದ್ದರೆ ನೀವು ಶೀಘ್ರವೇ ಮಧುಮೇಹಕ್ಕೆ ಬಲಿಯಾಗಬಹುದು. ಬೆಳಗಿನ ಉಪಾಹಾರ ಬಿಡುವುದರಿಂದ ನೀವು ಊಟದ ಸಮಯದವರೆಗೆ ಹಸಿವಿನಿಂದ ಇರುತ್ತೀರಿ. ಇದರಿಂದ ರಕ್ತದಲ್ಲಿನ ಸಕ್ಕರೆ ಮತ್ತು ಇನ್ಸುಲಿನ್ ಮಟ್ಟವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುವುದಿಲ್ಲ.
ಇದನ್ನೂ ಓದಿ: ತುಳಸಿ ಜೊತೆ ಈ ಒಂದು ವಸ್ತು ಸೇರಿಸಿ ಬಳಸಿ.. ಬಿಳಿ ಕೂದಲು ಶಾಶ್ವತವಾಗಿ ಕಪ್ಪಾಗುತ್ತವೆ!
2) ಸರಿಯಾದ ನಿದ್ದೆ
ಒಬ್ಬ ಆರೋಗ್ಯವಂತ ವಯಸ್ಕನು ದಿನಕ್ಕೆ ಕನಿಷ್ಠ 7-8 ಗಂಟೆಗಳ ನಿದ್ದೆ ಮಾಡಬೇಕು. ಹೀಗೆ ಮಾಡದಿದ್ದರೆ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಈ ಪೈಕಿ ಮಧುಮೇಹವೂ ಒಂದು. ಕಡಿಮೆ ನಿದ್ರೆ ಮಾಡುವುದು ಹಸಿವು ನಿಯಂತ್ರಿಸುವ ಮತ್ತು ರಕ್ತದಲ್ಲಿನ ಗ್ಲೂಕೋಸ್ ನಿರ್ವಹಿಸುವ ಹಾರ್ಮೋನುಗಳ ಪರಿಣಾಮವನ್ನು ಕಡಿಮೆ ಮಾಡುತ್ತದೆ. ಇದರಿಂದ ದೇಹದಲ್ಲಿ ಬೊಜ್ಜು ಹೆಚ್ಚಾಗುತ್ತದೆ ಮತ್ತು ಮಧುಮೇಹದ ಅಪಾಯವು ಕಾಣಿಸಿಕೊಳ್ಳುತ್ತದೆ.
3) ರಾತ್ರಿ ಊಟದ ನಂತರ ತಿನ್ನುವ ಅಭ್ಯಾಸ
ರಾತ್ರಿ ಊಟದ ನಂತರ ಮತ್ತೆ ಆಹಾರ ಸೇವಿಸುವ ಮತ್ತು ಕುಡಿಯುವ ಅಭ್ಯಾಸವು ಮಧುಮೇಹಕ್ಕೆ ಹೆಚ್ಚಾಗಿ ಕಾರಣವಾಗುತ್ತದೆ. ರಾತ್ರಿಯ ಊಟದಲ್ಲಿ ಆರೋಗ್ಯಕರವಾದ ಆಹಾರ ಸೇವಿಸಬೇಕು. ಊಟದ ನಂತರ ರಾತ್ರಿಯಲ್ಲಿ ಏನಾದರೂ ತಿನ್ನುವ ಅಭ್ಯಾಸವಿದ್ದರೆ ಅದನ್ನು ಇಂದೇ ನಿಲ್ಲಿಸುವುದು ಉತ್ತಮ.
ಇದನ್ನೂ ಓದಿ: Onion Benefits: ಪ್ರತಿದಿನ ಒಂದು ಈರುಳ್ಳಿ ತಿನ್ನುವುದರಿಂದ ದೇಹಕ್ಕೆ ಎಷ್ಟೆಲ್ಲ ಪ್ರಯೋಜನ ಗೊತ್ತೇ?
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.