ಬೆಳಗಿನ ಆಹಾರ ತ್ಯಜಿಸಿದರೆ ಹೆಚ್ಚಾಗುತ್ತದೆ ದೇಹದ ತೂಕ...!

ಪ್ರತಿಯೊಬ್ಬ ವ್ಯಕ್ತಿಗೆ ಆಹಾರ ಪದ್ಧತಿ ಮುಖ್ಯವಾಗಿರುತ್ತದೆ. ಬೆಳಗಿನ ಆಹಾರದಲ್ಲಿ  ಫೈಬರ್‌, ಕ್ಯಾಲ್ಸಿಯಂ, ಪ್ರೋಟೀನ್‌ಯುಕ್ತ ಪದಾರ್ಥಗಳಿರಬೇಕು ಎಂದು ತಜ್ಞರು ಹೇಳುತ್ತಾರೆ.   

Written by - Bhavishya Shetty | Last Updated : May 2, 2022, 03:13 PM IST
  • ಪ್ರತಿಯೊಬ್ಬ ವ್ಯಕ್ತಿಗೆ ಆಹಾರ ಪದ್ಧತಿ ಮುಖ್ಯವಾಗಿರುತ್ತದೆ. ಬೆಳಗಿನ ಆಹಾರದಲ್ಲಿ ಫೈಬರ್‌, ಕ್ಯಾಲ್ಸಿಯಂ, ಪ್ರೋಟೀನ್‌ಯುಕ್ತ ಪದಾರ್ಥಗಳಿರಬೇಕು ಎಂದು ತಜ್ಞರು ಹೇಳುತ್ತಾರೆ.
ಬೆಳಗಿನ ಆಹಾರ ತ್ಯಜಿಸಿದರೆ ಹೆಚ್ಚಾಗುತ್ತದೆ ದೇಹದ ತೂಕ...!  title=
Breakfast

ಇತ್ತೀಚಿನ ದಿನಗಳಲ್ಲಿ ಜನರು ತೂಕ ಇಳಿಕೆ ಮಾಡಿಕೊಳ್ಳಬೇಕೆಂದು ತಮ್ಮ ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಳ್ಳುತ್ತಾರೆ. ಜೊತೆಗೆ ಆಹಾರವನ್ನು ತ್ಯಜಿಸಿ ಆರೋಗ್ಯವನ್ನು ಕೆಡಿಸಿಕೊಳ್ಳುತ್ತಾರೆ. ಬೆಳಗ್ಗೆ ರಾಜನಂತೆ, ಮಧ್ಯಾಹ್ನ ಮಂತ್ರಿಯಂತೆ, ರಾತ್ರಿ ಭಿಕ್ಷುಕನಂತೆ  ಆಹಾರವನ್ನು ಸೇವಿಸಬೇಕು ಎಂಬ ಮಾತಿದೆ. ಆದರೆ ಇದಕ್ಕೆ ತದ್ವಿರುದ್ಧವಾಗಿ ಆಹಾರ ಪದ್ಧತಿಯನ್ನು ರೂಢಿಸಿಕೊಂಡು ಜನರು ತಮ್ಮ ಆರೋಗ್ಯವನ್ನು ಕೆಡಿಸಿಕೊಳ್ಳುತ್ತಿದ್ದಾರೆ.

ಇದನ್ನು ಓದಿ: ಸಾಗರದಾಚೆಗೆ ʼನಮ್‌ ರೇಡಿಯೋʼ ಹವಾ: ಕನ್ನಡ ಕೇಳುಗರ ಮನಮುಟ್ಟಿದ ಅಂತರ್ಜಾಲ ರೇಡಿಯೋ

ಪ್ರತಿಯೊಬ್ಬ ವ್ಯಕ್ತಿಗೆ ಆಹಾರ ಪದ್ಧತಿ ಮುಖ್ಯವಾಗಿರುತ್ತದೆ. ಬೆಳಗಿನ ಆಹಾರದಲ್ಲಿ  ಫೈಬರ್‌, ಕ್ಯಾಲ್ಸಿಯಂ, ಪ್ರೋಟೀನ್‌ಯುಕ್ತ ಪದಾರ್ಥಗಳಿರಬೇಕು ಎಂದು ತಜ್ಞರು ಹೇಳುತ್ತಾರೆ. ಉಪಹಾರ ಎಂದಿಗೂ ಉತ್ತಮವಾಗಿರಬೇಕು. ಇಲ್ಲವಾದರೆ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಹಾಗಾದರೆ ಬೆಳಗಿನ ಆಹಾರ ತ್ಯಜಿಸಿದರೆ ಎದುರಾಗುವ ಅಪಾಯ ಏನು ಎಂಬುದಕ್ಕೆ ಇಲ್ಲಿದೆ ಉತ್ತರ. 

ಜೀವಕೋಶಗಳಿಗೆ ಹಾನಿ: 
ರಾತ್ರಿ ವೇಳೆ ನಿದ್ದೆ ಮಾಡಿ ಬೆಳಗ್ಗೆ ಎದ್ದಾಗ ದೇಹಕ್ಕೆ ಶಕ್ತಿ ಅವಶ್ಯಕವಾಗಿರುತ್ತದೆ. ಹೀಗಾಗಿ ಬೆಳಗಿನ ಆಹಾರ ಅತೀ ಮುಖ್ಯ ಎಂದು ಹಿರಿಯರು ಹೇಳುತ್ತಾರೆ. ಪ್ರತಿರಕ್ಷಣಾ ಕೋಶಗಳ ಮಟ್ಟವನ್ನು ಕಾಪಾಡಿಕೊಳ್ಳಲು ದೇಹಕ್ಕೆ ನಿಯಮಿತವಾದ ಆಹಾರ ಅಗತ್ಯವಿರುತ್ತದೆ. ಹೀಗಾಗಿ ಳಗಿನ ತಿಂಡಿಯನ್ನು ತ್ಯಜಿಸಿದರೆ ಜೀವಕೋಶಗಳಿಗೆ ಹಾನಿಯಾಗುತ್ತದೆ ಎಂದು ಆರೋಗ್ಯ ತಜ್ಞರು ಸಲಹೆ ನೀಡಿದ್ದಾರೆ. 

ಚಯಾಪಯ ಕ್ರಿಯೆಗೂ ಹಾನಿ: 
ಬೆಳಗ್ಗಿನ ತಿಂಡಿಯನ್ನು ತ್ಯಜಿಸುವುದರಿಂದ ಚಯಾಪಚಯ ಕ್ರಿಯೆಯ ವೇಗ ಕುಂಠಿತವಾಗುತ್ತದೆ. ಸೇವಿಸಿದ ಆಹಾರ ಸರಿಯಾಗಿ ಜೀರ್ಣವಾಗದೆ ಹೊಟ್ಟೆಯಲ್ಲೇ ಹೆಚ್ಚು ಸಮಯ ಉಳಿಯುವಂತಾಗುತ್ತದೆ. ಇದು ದೇಹದಲ್ಲಿ ಅನಗತ್ಯ ಕೊಬ್ಬು ಸಂಗ್ರಹವಾಗಿ ತೂಕ ಹೆಚ್ಚಾಗುವ ಸಾಧ್ಯತೆ ಇರುತ್ತದೆ. 

ಕೂದಲಿಗೆ ಹಾನಿ
ಬೆಳಗ್ಗಿನ ಆಹಾರ ಸೇವನೆ ಮಾಡದೆ ಇದ್ದರೆ ದೇಹಕ್ಕೆ ಬೇಕಾದ ಪ್ರೋಟೀನ್‌ ಅಂಶಗಳು ಸರಿಯಾಗಿ ಸಿಗುವುದಿಲ್ಲ. ಕೂದಲು ಉದುರುವಿಕೆ, ದೇಹದಲ್ಲಿ ನೋವು, ಅಸಿಡಿಟಿ ಮುಂತಾದ ಸಮಸ್ಯೆಗಳು ಪ್ರಾರಂಭವಾಗುತ್ತದೆ. ಬೆಳಗಿನ ಆಹಾರ ತ್ಯಜಿಸಿದರೆ ಕೂದಲು ಹೆಚ್ಚಾಗಿ ಉದುರುತ್ತವೆಯಂತೆ. ಕೂದಲಿನ ಆರೋಗ್ಯಕ್ಕೆ ಬೇಕಾಗಿರುವ ಕೆರಾಟಿನ್‌ ಅಂಶವು ದೇಹಕ್ಕೆ ಸೇರುವ ಆಹಾರ ಸೇವನೆಯಿಂದ ಪಡೆದುಕೊಳ್ಳಬಹುದಾಗಿದೆ. ಆದ್ದರಿಂದ ಬೆಳಗಿನ ಉಪಹಾರದಲ್ಲಿ ಕಬ್ಬಿಣಾಂಶ, ಫೈಬರ್‌ ಅಂಶಗಳಿರುವ ಹಣ್ಣು, ತರಕಾರಿ, ಓಟ್ಸ್‌ನಂತಹ ಆಹಾರಗಳ ಸೇವನೆ ಮಾಡಬೇಕು. 

ಇದನ್ನು ಓದಿ: Ringworm Treatment: ದದ್ದು, ತುರಿಕೆ ಮತ್ತು ರಿಂಗ್ವರ್ಮ್ ನಿಂದ ಪರಿಹಾರ ಪಡೆಯುವುದು ಹೇಗೆ?

ಡಯಾಬಿಟಿಸ್‌ ಸಮಸ್ಯೆ: 
ಬೆಳಗ್ಗಿನ ಉಪಹಾರ ತ್ಯಜಿಸುವುದರಿಂದ ರಕ್ತದಲ್ಲಿ ಸಕ್ಕರೆ ಪ್ರಮಾಣ ಕಡಿಮೆಯಾಗುತ್ತದೆ. ಇದು ರಕ್ತದೊತ್ತಡ ಜಾಸ್ತಿಯಾಗುವಂತೆ ಮಾಡುತ್ತದೆ. ಇವೆಲ್ಲವೂ ಮೆದುಳಿನ ಮೇಲೆ ಹೆಚ್ಚು ಒತ್ತಡ ಬೀಳುವಂತೆ ಮಾಡುತ್ತದೆ. ಪರಿಣಾಮ ತಲೆನೋವಿನಂತಹ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಅದರಲ್ಲೂ ಮಧ್ಯಾಹ್ನದ ವೇಳೆ ಹೆಚ್ಚಿನ ಪ್ರಮಾಣದ ತಲೆನೋವನ್ನು ಅನುಭವಿಸಬೇಕಾಗುತ್ತದೆ. ಆದ್ದರಿಂದ ಬೆಳಗಿನ ಆಹಾರ ಸೇವನೆ ಮನುಷ್ಯನ ದೇಹಕ್ಕೆ ಅಗತ್ಯವಾಗಿದೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News