ಸಂಜೆಯ ಹೊತ್ತು Immunity Booster ಟೀ ಸೇವಿಸಿ ಈ ಲಾಭ ಪಡೆಯಿರಿ

ಕೊರೊನಾವೈರಸ್ ಯುಗದಲ್ಲಿ, ಜನರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಜಾಗೃತರಾಗಿದ್ದಾರೆ. ಇದೀಗ ಜನರು ತಮ್ಮ ಆಹಾರದಲ್ಲಿ ದೇಹಕ್ಕೆ ರೋಗ ನಿರೋಧಕ ಶಕ್ತಿಯನ್ನು ನೀಡುವ ಸಂಗತಿಗಳನ್ನುಸೇರಿಸುತ್ತಿದ್ದಾರೆ. 

Last Updated : Sep 9, 2020, 06:37 PM IST
  • ಕೊರೊನಾ ಕಾಲದಲ್ಲಿ ಜನರು ತಮ್ಮ ಆರೋಗ್ಯದ ಪ್ರತಿ ತುಂಬಾ ಜಾಗರೂಕರಾಗಿದ್ದಾರೆ.
  • ಜನರ ಜೀವನಶೈಲಿ ಹಿಡಿದು, ಡಯಟ್ ಕೂಡ ಬದಲಾಗಿದೆ.
  • ಇಮ್ಯೂನಿಟಿ ಬೂಸ್ಟರ್ ಚಹಾ ಸೇವಿಸಿ ನಿಮ್ಮ ರೋಗ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು.
ಸಂಜೆಯ ಹೊತ್ತು Immunity Booster ಟೀ ಸೇವಿಸಿ ಈ ಲಾಭ ಪಡೆಯಿರಿ title=

ನವದೆಹಲಿ: ಕೊರೊನಾವೈರಸ್ (Corornavirus) ಯುಗದಲ್ಲಿ, ಜನರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಜಾಗೃತರಾಗಿದ್ದಾರೆ. ಇದೀಗ ಜನರು ತಮ್ಮ ಆಹಾರದಲ್ಲಿ ದೇಹಕ್ಕೆ ರೋಗ ನಿರೋಧಕ ಶಕ್ತಿಯನ್ನು ನೀಡುವ ಸಂಗತಿಗಳನ್ನುಸೇರಿಸುತ್ತಿದ್ದಾರೆ.  ಪ್ರತಿಯೊಬ್ಬರೂ ತಮ್ಮ ಜೀವನಶೈಲಿಯಿಂದ ಹಿಡಿದು ಆಹಾರಕ್ರಮದಲ್ಲಿ ಅನೇಕ ಬದಲಾವಣೆಗಳನ್ನು ಮಾಡುವ ಮೂಲಕ ಅವರ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಜನರು ಹೊರಗಿನ ಆಹಾರ ಪದಾರ್ಥಗಳು ಹಾಗೂ ಪಾನೀಯಗಳ ಸೇವನೆ ಕಡಿಮೆ ಮಾಡಿದ್ದು, ಕಷಾಯ ಹಾಗೂ ಇತರೆ ಔಷಧಿ ಪದಾರ್ಥಗಳ ಸೇವನೆಯನ್ನು ಹೆಚ್ಚಿಸಿದ್ದಾರೆ.

ರೋಗ ಪ್ರತಿರೋಧಕ ಶಕ್ತಿವರ್ಧಕ ಚಹಾ ಸೇವನೆ
ಇಮ್ಯೂನಿಟಿ ಎಂದರೆ ರೋಗ ಪ್ರತಿರೋಧಕ ಶಕ್ತಿ. ಇದರಿಂದ ನೀವು ಎಷ್ಟು ಆರೋಗ್ಯವಂತರಾಗಿದ್ದೀರಿ ಎಂಬುದು ತಿಳಿಯುತ್ತದೆ. ಯಾವುದೇ ರೀತಿಯ ರೋಗ ಅಥವಾ ವೈರಸ್ ದಾಳಿಯ ವಿರುದ್ಧ ಹೋರಾಡುವಲ್ಲಿ ನಿಮ್ಮ ಶರೀರ ಎಷ್ಟು ಗಟ್ಟಿ ಇಮ್ಯೂನ್ ಸಿಸ್ಟಂ ಹೊಂದಿದೆ ಇದರಿಂದ ಗೊತ್ತಾಗುತ್ತದೆ. ಕೇವಲ ರೋಗ ಪ್ರತಿರೋಧಕ ಶಕ್ತಿಯ ಕಾರಣ ನೀವು ಆರೋಗ್ಯವಂತರಾಗಿರಬಹುದು. ಜೊತೆಗೆ ಯಾವುದೇ ಒಂದು ಕಾಯಿಲೆಗೆ ಗುರಿಯಾದರೆ ಆ ಕಾಯಿಲೆಯಿಂದ ನೀವು ಎಷ್ಟು ಬೇಗ ಗುಣಮುಖರಾಗಬಹುದು ಎಂಬುದು ಕೂಡ ಇದರ ಮೇಲೆ ಅವಲಂಭಿಸಿರುತ್ತದೆ. ವೃತ್ತಿಯಲ್ಲಿ ಫಿಟ್ನೆಸ್ ಟ್ರೈನರ್ ಆಗಿರುವ ಪಾರಸ್ ಗುಪ್ತಾ ನಮ್ಮೊಂದಿಗೆ ಒಂದು ವಿಶಿಷ್ಠ ರೀತಿಯ ಟೀ ರೆಸಿಪಿಯೊಂದನ್ನು ಹಂಚಿಕೊಂಡಿದ್ದು. ಈ ವಿಶೇಷ ಟೀ ಸೇವನೆಯನ್ನು ಮಾಡಿ ಅವರು ತಮ್ಮ ದೇಹದ ರೋಗಪ್ರತಿರೋಧಕ ಶಕ್ತಿಯನ್ನು ಗಟ್ಟಿಗೊಳಿಸುತ್ತಾರೆ ಎಂದು ಹೇಳಿದ್ದಾರೆ. ಹೀಗಾಗಿ ನೀವೂ ಕೂಡ ಪ್ರತಿನಿತ್ಯ ಸಂಜೆಯ ಹೊತ್ತು ಹಾಲಿನ ಚಹಾ ಸೇವನೆಯ ಬದಲು ಇಮ್ಯೂನ್ ಬೂಸ್ಟ್ ಮಾಡುವ ಈ ಚಹಾ ಸೇವೆಸಬಹುದು.

ಬೇಕಾಗುವ ಸಾಮಗ್ರಿ
2 ಕಪ್ ಬಿಸಿ ನೀರು
ಚಚ್ಚಿದ ಹಸಿ ಶುಂಠಿ
ಅರಸಿನ ಪೌಡರ್
1 ಟೇಬಲ್ ಸ್ಪೂನ್ ಜೇನುತುಪ್ಪ
1 ನಿಂಬೆಹಣ್ಣಿನ ರಸ ಹಾಗೂ ಸಿಪ್ಪೆ

ತಯಾರಿಸುವ ವಿಧಾನ
ಪಾತ್ರೆಯಲ್ಲಿ ಹಸಿ ಶುಂಠಿ ಹಾಗೂ ಅರಸಿನ ತೆಗೆದುಕೊಂಡು ಅದರ ಮೇಲೆ ಬಿಸಿ ನೀರು ಹಾಕಿ, ಕೆಲವು ನಿಮಿಷಗಳ ಬಳಿಕ ಅದರಲ್ಲಿ ನಿಂಬೆ ರಸ ಹಾಗೂ ನಿಂಬೆ ಹಣ್ಣಿನ ಸಿಪ್ಪೆಗಳನ್ನು ಹಾಕಿ. ಬಳಿಕ ಅದನ್ನು ಸೋಸಿ, ಸೇವನೆ ಮಾಡಿ.

Trending News