ಮೊಸರು ಸಸ್ಯಾಹಾರಿಯೇ ಅಥವಾ ಮಾಂಸಾಹಾರಿಯೇ..? ತಪ್ಪದೇ ತಿಳಿಯಿರಿ

Curd vegetarian or nonvegetarian : ಕೆಲವರು ಮೊಸರು ಸಸ್ಯಾಹಾರಿ ಹೇಳುತ್ತಾರೆ ಆದ್ರೆ, ಇನ್ನೂ ಕೆಲವರು ಇಲ್ಲ ಅದು ಮಾಂಸಾಹಾರಿ ಅಂತ ವಾದಿಸುತ್ತಿದ್ದಾರೆ. ಹಾಗಿದ್ರೆ ಇವು ಎರಡಲ್ಲಿ ನಿಜ ಯಾವುದು..? ಅಂತ ಕೆಲವು ಇನ್ನೂ ಯೋಚಿಸುತ್ತಲೇ ದಿನ ಕಳೆಯುತ್ತಿದ್ದಾರೆ.. ಬನ್ನಿ ಈ ಕುರಿತು ತಿಳಿದುಕೊಳ್ಳೋಣ.. 

Written by - Krishna N K | Last Updated : Feb 2, 2024, 05:25 PM IST
  • ಕೆಲವರು ಮೊಸರು ಸಸ್ಯಾಹಾರಿ ಹೇಳುತ್ತಾರೆ
  • ಇನ್ನೂ ಕೆಲವರು ಇಲ್ಲ ಅದು ಮಾಂಸಾಹಾರಿ ಅಂತಾರೆ
  • ಬನ್ನಿ ಈ ಕುರಿತು ತಿಳಿದುಕೊಳ್ಳೋಣ..
ಮೊಸರು ಸಸ್ಯಾಹಾರಿಯೇ ಅಥವಾ ಮಾಂಸಾಹಾರಿಯೇ..? ತಪ್ಪದೇ ತಿಳಿಯಿರಿ title=

Vegan Curd : ನಾವು ಸಾಮಾನ್ಯವಾಗಿ ಬಳಸುವ ಮೊಸರು ಸಸ್ಯಾಹಾರಿಯೇ ಅಥವಾ ಅಲ್ಲವೇ..? ಎಂಬ ಪ್ರಶ್ನೆ ಕೆಲವರನ್ನು ಇಂದಿಗೂ ಕಾಡುತ್ತಿದೆ. ಹೇಗೆ ಅಂದ್ರೆ ಮೊಟ್ಟೆ ಸಸ್ಯಹಾರಿಯೇ ಅಥವಾ ಮಾಂಸಾಹಾರಿಯೇ ಎಂಬಂತೆ. ಬನ್ನಿ ಈ ಕುರಿತು ವಿವರವಾಗಿ ತಿಳಿಯೋಣ.. ಆದ್ರೆ ಮೊಸರು ಮತ್ತು ಮಜ್ಜಿಗೆ ಎರಡೂ ದೇಹಕ್ಕೆ ಆರೋಗ್ಯಕರ ತಿನ್ನುವುದನ್ನು ಮಾತ್ರ ಬಿಡಬೇಡಿ.. 

ಪ್ರಾಣಿಗಳ ಹಾಲು ಶುದ್ಧ ಸಸ್ಯಾಹಾರಿ ಅಲ್ಲ ಎಂದು ಅನೇಕ ಜನರು ಭಾವಿಸುತ್ತಾರೆ. ಹಸು ಮತ್ತು ಎಮ್ಮೆ ಎರಡೂ ಹಾಲು ಉತ್ಪಾದಿಸುವ ಪ್ರಾಣಿಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಮೇಕೆ ಮತ್ತು ಒಂಟೆಗಳು ಸಹ ಹಾಲು ನೀಡುತ್ತವೆ ಆದ್ರೆ, ಆದರೆ ಹೆಚ್ಚಿನ ಪ್ರಮಾಣದಲ್ಲಿ ಅಲ್ಲ. ಆದ್ರೆ ಎಲ್ಲವೂ ಆರೋಗ್ಯ ಉತ್ತಮ.

ಇದನ್ನೂ ಓದಿ: ಬೊಜ್ಜಿನಿಂದ ಹಿಡಿದು ಮಧುಮೇಹದವರೆಗೆ ಎಲ್ಲವನ್ನೂ ನಿಯಂತ್ರಣದಲ್ಲಿತ್ತೆ ಈ ಚಮತ್ಕಾರಿ ಚಿಕ್ಕ ಕೆಂಪು ಹಣ್ಣು!

ಹಸುವಿನ ಹಾಲು ಎಮ್ಮೆಯ ಹಾಲಿಗಿಂತ ಹೆಚ್ಚು ಪೌಷ್ಟಿಕಾಂಶ ಮತ್ತು ಸುಲಭವಾಗಿ ಜೀರ್ಣವಾಗುತ್ತದೆ. ಹಸುವಿನ ಹಾಲು ಹೆಚ್ಚು ಕೊಬ್ಬಿನ ಅಂಶವನ್ನು ಹೊಂದಿರುತ್ತದೆ. ಹಾಲು ಪೌಷ್ಟಿಕ ಆಹಾರವಾದರೂ, ಇದು ಕೆಲವರಿಗೆ ಅಲರ್ಜಿಯನ್ನು ಉಂಟುಮಾಡುತ್ತದೆ.

ಸರಿ, ಮೊಸರು ಸಸ್ಯಾಹಾರವೋ ಅಥವಾ ಮಾಂಸಾಹಾರವೋ ಎಂಬ ಪ್ರಶ್ನೆಗೆ ಉತ್ತರ ಹುಡುಕಲು ಹೋಗುವುದಕ್ಕಿಂತ ಮೊದಲು, ಹಾಲಿನ ಪೋಷಕಾಂಶಗಳ ಬಗ್ಗೆ ತಿಳಿದುಕೊಳ್ಳುವುದು ಅವಶ್ಯಕ. ಹಾಲನ್ನು ಅತ್ಯುತ್ತಮ ಪೋಷಕಾಂಶ ಎಂದು ಕರೆಯಲಾಗುತ್ತದೆ. ಇದರಲ್ಲಿ ಪ್ರೋಟೀನ್, ಕ್ಯಾಲ್ಸಿಯಂ, ವಿಟಮಿನ್ ಬಿ, ವಿಟಮಿನ್ ಡಿ ಮುಂತಾದ ಹಲವು ಪೋಷಕಾಂಶಗಳಿವೆ. ನವಜಾತ ಶಿಶುವಿನಿಂದ ಹಿಡಿದು ವೃದ್ಧರವರೆಗೆ ಎಲ್ಲರಿಗೂ ಹಾಲು ಒಂದೇ. 

ಇದನ್ನೂ ಓದಿ:ನಟಿ ಪೂನಂ ಪಾಂಡೆ ಸಾವಿಗೆ ಕಾರಣವಾದ ಗರ್ಭಕಂಠದ ಕ್ಯಾನ್ಸರ್‌ಗೆ ಕಾರಣವೇನು?

ಡೈರಿ ಉತ್ಪನ್ನಗಳಿಂದ ತಯಾರಿಸಲಾದ ಹಲವಾರು ಆಹಾರ ಉತ್ಪನ್ನಗಳಲ್ಲಿ ಮೊಸರು ಒಂದಾಗಿದೆ. ಮಜ್ಜಿಗೆಯನ್ನು ಮೊಸರಿನಿಂದ ತಯಾರಿಸಲಾಗುತ್ತದೆ. ಎರಡನ್ನೂ ಹಾಗೆಯೇ ತಿನ್ನಬಹುದು ಅಥವಾ ಖಾರದ, ಮಸಾಲೆಯುಕ್ತ ಮತ್ತು ಸಿಹಿ ತಿನಿಸುಗಳಲ್ಲಿ ಬಳಸಬಹುದು. ಹಾಲಿಗೆ ಯೀಸ್ಟ್ ಅಥವಾ ಬ್ಯಾಕ್ಟೀರಿಯಾವನ್ನು ಸೇರಿಸುವುದರಿಂದ ಹಾಲಿನಲ್ಲಿರುವ ಲ್ಯಾಕ್ಟೋಸ್ ಲ್ಯಾಕ್ಟಿಕ್ ಆಮ್ಲವಾಗಿ ವಿಭಜನೆಯಾಗಿ ಮೊಸರಾಗುತ್ತದೆ.

ಕೆಲವರ ಪ್ರಕಾರ ಹಸುಗಳು ಮತ್ತು ಎಮ್ಮೆ ಹಾಲಿನಿಂದ ಮಾಡಿದ ಹಾಲು ಮಾಂಸಾಹಾರಿ ಎನ್ನಲಾಗತ್ತದೆ. ಹಾಗಾದ್ರೆ ಸಸ್ಯಾಹಾರಿ ಮೊಸರು ಅಂದ್ರೆ ಏನು..? ನಿಮ್ಗೆ ಆಶ್ಚರ್ಯವಾಗಬಹದು. ಹಾಲಿನ ಬದಲಾಗಿ ಕಡಲೆಕಾಯಿ ಅಥವಾ ಸೋಯಾ ಮುಂತಾದ ಪದಾರ್ಥಗಳಿಂದ ಮಾಡಿದ ಮೊಸರನ್ನು ಸಸ್ಯಾಹಾರಿ ಎಂದು ಕರೆಯಲಾಗುತ್ತದೆ. ಹಾಲಿನಿಂದ ಮೊಸರು ತಯಾರಿಸುವಂತೆ, ಧಾನ್ಯಗಳಿಂದಲೂ ಮೊಸರು ತಯಾರಿಸಲಾಗುತ್ತದೆ. ಸಾಮಾನ್ಯ ಮೊಸರಿನಂತೆಯೇ, ಸಸ್ಯಾಹಾರಿ ಮೊಸರು ರುಚಿಕರವಾಗಿರುತ್ತದೆ. 

(ಹಕ್ಕುತ್ಯಾಗ: ಪ್ರಿಯ ಓದುಗರೇ, ನಮ್ಮ ಸುದ್ದಿಯನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮಗೆ ಮಾಹಿತಿಯನ್ನು ನೀಡುವ ಉದ್ದೇಶಕ್ಕಾಗಿ ಮಾತ್ರ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ತೆಗೆದುಕೊಂಡಿದ್ದೇವೆ. Zee Kannada News ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News