Health Tips: ಮಲಗುವ ಕೋಣೆಯಲ್ಲಿ ರೆಫ್ರಿಜರೇಟರ್ ಇಡುವುದು ಸುರಕ್ಷಿತವೇ?

ಮಲಗುವ ಕೋಣೆಯಲ್ಲಿ ಫ್ರಿಜ್‌ನ ಪರಿಣಾಮಗಳು: ಮಲಗುವ ಕೋಣೆಯಲ್ಲಿ ಫ್ರಿಜ್ ಇಡುವುದು ಸರಿಯೇ? ಈ ಪ್ರಶ್ನೆಯು ನಮ್ಮ ಮನಸ್ಸಿಗೆ ಆಗಾಗ್ಗೆ ಬರುತ್ತದೆ. ಆದರೆ ಇದಕ್ಕೆ ಸರಿಯಾದ ಉತ್ತರ ಪಡೆಯಲು ನಿಮಗೆ ಸಾಧ್ಯವಾಗದಿರಬಹುದು. ಇದಕ್ಕೆ ಸರಳ ಉತ್ತರವನ್ನು ನಾವು ಇಂದು ನಿಮಗೆ ತಿಳಿಸಲಿದ್ದೇವೆ.

Written by - Puttaraj K Alur | Last Updated : Oct 10, 2023, 11:18 AM IST
  • ಮಲಗುವ ಕೋಣೆಯಲ್ಲಿ ರೆಫ್ರಿಜರೇಟರ್ ಇಡುವುದು ಸುರಕ್ಷಿತವೇ..?
  • ಮಲಗುವ ಕೋಣೆಯಲ್ಲಿ ರೆಫ್ರಿಜರೇಟರ್ ಇಟ್ಟರೆ ಅನಿಲ ಸೋರಿಕೆ ಅಥವಾ ಬೆಂಕಿಯ ಅಪಾಯ ಸಾಧ್ಯತೆ
  • ರಾತ್ರಿ ವೇಳೆ ರೆಫ್ರಿಜರೇಟರ್ ಹೊರಹೊಮ್ಮಿಸುವ ಶಬ್ದದಿಂದ ನಿಮ್ಮ ನಿದ್ರೆಗೆ ಭಂಗ ಬರಬಹುದು
Health Tips: ಮಲಗುವ ಕೋಣೆಯಲ್ಲಿ ರೆಫ್ರಿಜರೇಟರ್ ಇಡುವುದು ಸುರಕ್ಷಿತವೇ?  title=
ಮಲಗುವ ಕೋಣೆಯಲ್ಲಿ ಫ್ರಿಡ್ಜ್!

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಜನರ ಜೀವನವು ತುಂಬಾ ಸಂಕೀರ್ಣವಾಗಿದೆ. ಬದಲಾಗುತ್ತಿರುವ ಈ ಜೀವನಶೈಲಿಯಿಂದ ಅವರ ಆಹಾರ ಪದ್ಧತಿ ಮತ್ತು ಮಲಗುವ ಸಮಯ ಎರಡೂ ಬದಲಾಗಿದೆ. ಅನೇಕ ಜನರು ರಾತ್ರಿಯಲ್ಲಿ ಸಹ ಹಸಿವನ್ನು ಅನುಭವಿಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಅವರು ತಮ್ಮ ಮಲಗುವ ಕೋಣೆಯ ಹತ್ತಿರ ಅಥವಾ ಒಳಗೆ ಫ್ರಿಡ್ಜ್ ಇರಿಸಿ, ಅದರಲ್ಲಿ ಆಹಾರ ಇಟ್ಟಿರುತ್ತಾರೆ. ರಾತ್ರಿ ಹಸಿವು ಆದಾಗ ಅವರು ತಕ್ಷಣ ಫ್ರಿಡ್ಜ್ ತೆರೆದು ಏನನ್ನಾದರೂ ತಿನ್ನಬಹುದು ಅಥವಾ ಕುಡಿಯಬಹುದೆಂದು. ಆದರೆ ಮಲಗುವ ಕೋಣೆಯಲ್ಲಿ ರೆಫ್ರಿಜರೇಟರ್ ಇಡುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದೇ? ಇಂದು ನಾವು ಈ ವಿಷಯದ ಬಗ್ಗೆ ನಿಮಗೆ ತುಂಬಾ ಉಪಯುಕ್ತವಾದ ಮಾಹಿತಿ ನೀಡಲಿದ್ದೇವೆ.

ಮಲಗುವ ಕೋಣೆಯಲ್ಲಿ ರೆಫ್ರಿಜರೇಟರ್ ಇಡುವುದು ಸುರಕ್ಷಿತವೇ?

ಮೊದಲನೆಯದಾಗಿ ಮಲಗುವ ಕೋಣೆಯೊಳಗೆ ಫ್ರಿಡ್ಜ್ ಇಡುವುದು ಸುರಕ್ಷಿತವೇ ಅಥವಾ ಇಲ್ಲವೇ? ಈ ಪ್ರಶ್ನೆಗೆ ಉತ್ತರ ಇಲ್ಲಿದೆ. ಮಲಗುವ ಕೋಣೆಯಲ್ಲಿ ರೆಫ್ರಿಜರೇಟರ್ ಇಡುವುದರಿಂದ ಅನಿಲ ಸೋರಿಕೆ ಅಥವಾ ಬೆಂಕಿಯ ಅಪಾಯ ಉಂಟುಮಾಡಬಹುದು. ಆದ್ದರಿಂದ ರೆಫ್ರಿಜರೇಟರ್ ಅನ್ನು ತೆರೆದ ಸ್ಥಳದಲ್ಲಿ ಇಡಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಫ್ರಿಡ್ಜ್ ಗಳು ವಿವಿಧ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದ್ದು, ಅವುಗಳಲ್ಲಿ ಇಂತಹ ಘಟನೆಗಳು ಸಂಭವಿಸುವ ಸಾಧ್ಯತೆ ಕಡಿಮೆ. ಹೀಗಾಗಿ ಈ ಆತಂಕ ಕೆಲವರಿಗೆ ಕಾಡಬಹುದು.

ಇದನ್ನೂ ಓದಿ: ಥೈರಾಯಿಡ್-ಮಧುಮೇಹ ಸೇರಿದಂತೆ ಹಲವು ಕಾಯಿಲೆಗಳಿಗೆ ಸಂಜೀವನಿ ಇದ್ದಂತೆ ಈ ನೀರು!

ಫ್ರಿಡ್ಜ್‌ನ ಶಾಖದಿಂದ ತೊಂದರೆ 

ಮಲಗುವ ಕೋಣೆಯಲ್ಲಿ ಫ್ರಿಡ್ಜ್ ಇಡಲೇಬಾರದು. ಇದಕ್ಕೆ ಕಾರಣವೆಂದರೆ ಅದರಿಂದ ಹೊರಹೊಮ್ಮುವ ಶಾಖ. ನಿಮ್ಮ ಮಲಗುವ ಕೋಣೆಯಲ್ಲಿ ನೀವು ರೆಫ್ರಿಜರೇಟರ್ ಇಟ್ಟರೆ, ಅದರಿಂದ ಹೊರಹೊಮ್ಮುವ ಶಾಖವು ನಿಮ್ಮ ಮಲಗುವ ಕೋಣೆಯ ಉಷ್ಣತೆಯನ್ನು ಹೆಚ್ಚಿಸುತ್ತದೆ. ಇದರಿಂದಾಗಿ ನೀವು ಶಾಖದಿಂದ ತೊಂದರೆಗೊಳಗಾಗಬಹುದು. ಇದರೊಂದಿಗೆ ಕೋಣೆಯಲ್ಲಿ ಇಂಗಾಲದ ಡೈಆಕ್ಸೈಡ್ ಹರಡುವ ಅಪಾಯವು ಕ್ರಮೇಣ ಹೆಚ್ಚಾಗಬಹುದು.

ನಿಮ್ಮ ನಿದ್ರೆ ಹಾಳಾಗುತ್ತದೆ

ರೆಫ್ರಿಜಿರೇಟರ್‌ನ ಮುಖ್ಯಕಾರ್ಯ ನಿಮ್ಮ ಮನೆಯಲ್ಲಿ ಹಸಿ ಮತ್ತು ಬೇಯಿಸಿದ ಆಹಾರವನ್ನು ತಾಜಾ ಮತ್ತು ತಂಪಾಗಿ ಇಡುವುದು. ಇದಕ್ಕಾಗಿ ರೆಫ್ರಿಜರೇಟರ್ ಹಗಲು ರಾತ್ರಿ ಕೆಲಸ ಮಾಡುತ್ತಿರುತ್ತದೆ. ರೆಫ್ರಿಜರೇಟರ್‌ ಆನ್ ಮಾಡಿದಾಗ ಹೊರಹೊಮ್ಮುವ ಶಬ್ದ ನಿಮ್ಮ ನಿದ್ರೆಗೆ ಭಂಗ ತರಬಹುದು. ಹೀಗಾಗಿ ನಿಮಗೆ ಒಳ್ಳೆಯ ನಿದ್ರೆ ಆನಂದಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ರೆಫ್ರಿಜರೇಟರ್‌ನ ಈ ಶಬ್ದವು ನಿಮಗೆ ಸಮಸ್ಯೆಯಾಗಬಹುದು. ಈಗ ನೀವೇ ಯೋಚಿಸಿ ಮಲಗುವ ಕೋಣೆಯಲ್ಲಿ ರೆಫ್ರಿಜಿರೇಟರ್‌ ಇಡಬೇಕೋ ಅಥವಾ ಬೇಡವೋ ಎಂದು…

ಇದನ್ನೂ ಓದಿ: ಹೃದ್ರೋಗ-ಅಧಿಕ ರಕ್ತದೊತ್ತಡದಂತಹ ಹಲವು ಮಾರಕ ಕಾಯಿಲೆಗಳ ಅಪಾಯ ತಗ್ಗಿಸುತ್ತೆ ಈ ನೀರು!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News