Burnt Tongue: ಬಿಸಿ ಆಹಾರವನ್ನು ಬಾಯಲ್ಲಿಟ್ಟು ನಾಲಿಗೆ ಸುಟ್ಟಿದೆಯೇ? ತ್ವರಿತ ಪರಿಹಾರಕ್ಕಾಗಿ ಈ ಮನೆಮದ್ದುಗಳನ್ನು ಬಳಸಿ

Burnt Tongue: ಟೀ, ಕಾಫಿ ಸೇವಿಸುವಾಗ ಇಲ್ಲವೇ ಯಾವುದೇ ಬಿಸಿ ಆಹಾರವನ್ನು ಸೇವಿಸುವಾಗ ನಾಲಿಗೆ ಸುಡಬಹುದು. ಇಂತಹ ಸಂದರ್ಭದಲ್ಲಿ ಆಹಾರ ಸೇವನೆ ಬಹಳ ಕಷ್ಟವಾಗುತ್ತದೆ. ಆದರೆ, ನಿಮ್ಮ ಮನೆಯಲ್ಲಿ ಲಭ್ಯವಿರುವ ಕೆಲವು ಪದಾರ್ಥಗಳನ್ನು ಬಳಸಿ ನೀವು ಈ ಸಮಸ್ಯೆಯಿಂದ ಸುಲಭ ಪರಿಹಾರ ಪಡೆಯಬಹುದು. 

Written by - Yashaswini V | Last Updated : Apr 12, 2024, 05:26 PM IST
  • ಕೆಲವೊಮ್ಮೆ ಆತುರಾತುರವಾಗಿ ಆಹಾರ ಸೇವಿಸುವಾಗ ಗಮನಿಸದೆ ಬಿಸಿ ಆಹಾರವನ್ನು ಬಾಯಿಗೆ ಹಾಕಿಕೊಳ್ಳುತ್ತೇವೆ.
  • ಗೊತ್ತೋ/ಗೊತ್ತಿಲ್ಲದೆಯೋ ಬಿಸಿ ಆಹಾರವನ್ನು ಬಾಯಿಗಿಟ್ಟಾಗ ನಾಲಿಗೆ ಸುಟ್ಟು ಹೋಗುತ್ತದೆ
  • ಇಂತಹ ಸಂದರ್ಭದಲ್ಲಿ ಕೆಲವು ಸರಳ ಮನೆಮದ್ದುಗಳು ನಿಮಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು.
Burnt Tongue: ಬಿಸಿ ಆಹಾರವನ್ನು ಬಾಯಲ್ಲಿಟ್ಟು ನಾಲಿಗೆ ಸುಟ್ಟಿದೆಯೇ? ತ್ವರಿತ ಪರಿಹಾರಕ್ಕಾಗಿ ಈ ಮನೆಮದ್ದುಗಳನ್ನು ಬಳಸಿ  title=

Home Remedies For Burnt Tongue: ಕೆಲವೊಮ್ಮೆ ಆತುರಾತುರವಾಗಿ ಬಿಸಿಯಿರುವ ಆಹಾರವನ್ನು ಸೇವಿಸುವಾಗ ನಾಲಿಗೆ ಸುಡುತ್ತದೆ. ಹೀಗಾದಾಗ ನಾಲಿಗೆ ಸುಟ್ಟುಹೋಗುವುದು ಮಾತ್ರವಲ್ಲದೆ ಬಾಯಿಯ ರುಚಿಯೂ ಹಾಳಾಗುತ್ತದೆ. ಈ ಸಂದರ್ಭದಲ್ಲಿ ನಾಲಿಗೆ ಹೆಚ್ಚಾಗಿ ಉರಿಯುತ್ತದೆ, ಏನನ್ನೂ ತಿನ್ನಲು ಸಹ ಸಾಧ್ಯವಾಗುವುದಿಲ್ಲ. ಆದರೆ, ನಿಮ್ಮ ಮನೆಯಲ್ಲಿರುವ ಕೆಲವು ಪದಾರ್ಥಗಳನ್ನು ಬಳಸಿ ಈ ಸಮಸ್ಯೆಯಿಂದ ಬಹಳ ಸುಲಭವಾಗಿ ಪರಿಹಾರ ಪಡೆಯಬಹುದು. 

ನಾಲಿಗೆ ಸುಟ್ಟಿದ್ದರೆ ತ್ವರಿತ ಪರಿಹಾರಕ್ಕಾಗಿ ಮನೆಮದ್ದುಗಳು: 
ಜೇನುತುಪ್ಪ

ಒಂದೊಮ್ಮೆ ನಾಲಿಗೆ ಸುಟ್ಟಿದ್ದರೆ  ತ್ವರಿತ ಪರಿಹಾರಕ್ಕಾಗಿ ಜೇನುತುಪ್ಪ (Honey) ಅತ್ಯುತ್ತಮ ಪರಿಹಾರವಾಗಿದೆ. ಆಯುರ್ವೇದ ಗುಣಗಳಿಂದ ಸಮೃದ್ಧವಾಗಿರುವ ಜೇನುತುಪ್ಪವನ್ನು ನಾಲಿಗೆಗೆ ಅನ್ವಯಿಸುವುದರಿಂದ ನಾಲಿಗೆ ಉರಿಯಿಂದ ಪರಿಹಾರ ದೊರೆಯುತ್ತದೆ.

ಇದನ್ನೂ ಓದಿ- ನಿಮಗೂ ಆಗಾಗ್ಗೆ ಕಣ್ಣು ಕೆಂಪಾಗುತ್ತಾ! ಈ ಮನೆಮದ್ದುಗಳನ್ನೊಮ್ಮೆ ಪ್ರಯತ್ನಿಸಿ

ಮೊಸರು: 
ಹಾಲಿನ ಉತ್ಪನ್ನಗಳು (Dairy Products) ನಾಲಿಗೆ ಸುಡುವಿಕೆಗೆ ಅತ್ಯುತ್ತಮ ಮತ್ತು ನೈಸರ್ಗಿಕ ಪರಿಹಾರವಾಗಿದೆ. ನಾಲಿಗೆ ಸುಟ್ಟಿದ್ದರೆ ತಕ್ಷಣ ಮೊಸರನ್ನು ಬಾಯಿಗೆ ಹಾಕಿ ಕೊಳ್ಳುವುದರಿಂದ ಕೂಡಲೇ ಪರಿಹಾರ ಪಡೆಯಬಹುದು. 

ಪುದೀನಾ ಚೂಯಿಂಗ್ ಗಮ್: 
ಬಿಸಿ ಆಹಾರ ಸೇವಿಸುವಾಗ ನಾಲಿಗೆ ಸುಟ್ಟಿದ್ದರೆ (Burnt Tongue) ಪುದೀನಾ ಚೂಯಿಂಗ್ ಗಮ್ ಕೂಡ ಅತ್ಯುತ್ತಮ ಮದ್ದು. ಚೂಯಿಂಗ್ ಗಮ್ ಜಗಿಯುವಾಗ ಬಾಯಿಯಲ್ಲಿ ಹೆಚ್ಚು ಲಾಲಾರಸ ಉತ್ಪತ್ತಿಯಾಗುತ್ತದೆ. ಇದರಿಂದ ನಾಲಿಗೆ ತೇವವಾಗಿರುವುದರಿಂದ ನಿಧಾನವಾಗಿ ನಾಲಿಗೆಯಲ್ಲಿ ಸುಡುವ ಸಂವೇದನೆ ಕಡಿಮೆಯಾಗುತ್ತದೆ. 

ಇದನ್ನೂ ಓದಿ- 

ಐಸ್ ಕ್ರೀಂ: 
ಬಿಸಿ ಆಹಾರ, ಇಲ್ಲವೇ ಪಾನೀಯಗಳಿಂದ ನಾಲಿಗೆ ಸುಟ್ಟಿದ್ದರೆ ಕೂಡಲೇ ಐಸ್ ಕ್ರೀಂ ಸೇವಿಸಿ. ಇದು ನಾಲಿಗೆಯಲ್ಲಿ ಕಿರಿಕಿರಿಯನ್ನು ಕಡಿಮೆ ಮಾಡುತ್ತದೆ. 

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News