Kiwi Fruit: ಸರ್ವ ರೋಗಕ್ಕೂ ಮದ್ದು ಕಿವಿ ಹಣ್ಣು !

Kiwi Fruit: ಈಗಾಗಲೇ  ಕಿವಿ ಹಣ್ಣು ಆರೋಗ್ಯದ ದೃಷ್ಠಿಯಲ್ಲಿ ಬಾರಿ  ಪ್ರಯೋಜನಕಾರಿ ಎಂದು ಸಾಬೀತು ಆಗಿದೆ. ಈ ಹಣ್ಣಿನಲ್ಲಿ ಫೈಬರ್, ವಿಟಮಿನ್ ಇ, ಪಾಲಿಫಿನಾಲ್ಗಳು, ಕ್ಯಾರೊಟಿನಾಯ್ಡ್ಗಳು ಹೇರಳವಾಗಿವೆ.

Written by - Zee Kannada News Desk | Last Updated : Mar 18, 2023, 07:39 PM IST
  • ಕಿವಿ ಹಣ್ಣಿನಲ್ಲಿ ಅಧಿಕ ಪೋಷಾಕಾಂಶಗಳನ್ನು ಹೊಂದಿದೆ
  • ವಿ ಸೇವನೆಯು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ
  • ಈ ಹಣ್ಣನ್ನು ಹೆಚ್ಚಾಗಿ ಮಕ್ಕಳಿಗೆ ನೀಡುವುದರಿಂದ ಸಹಕಾರಿ
Kiwi Fruit: ಸರ್ವ ರೋಗಕ್ಕೂ ಮದ್ದು ಕಿವಿ ಹಣ್ಣು ! title=

Helth Tipes: ಕಿವಿ ಹಣ್ಣಿನಲ್ಲಿ ಫೈಬರ್, ವಿಟಮಿನ್ ಇ, ಪಾಲಿಫಿನಾಲ್ಗಳು, ಕ್ಯಾರೊಟಿನಾಯ್ಡ್ಗಳು ಹೇರಳವಾಗಿವೆ. ಇದನ್ನು ಸೇವಿಸುವುದರಿಂದ ಅನೇಕ ರೀತಿಯಲ್ಲಿ ಸಹಕಾರಿಯಾಗಿದೆ. ಆದರೆ ಇದನ್ನು  ಹೆಚ್ಚಾಗಿ ಯಾರು ಯಾವ ಸಮಯದಲ್ಲಿ ಸೇವಿಸಬೇಕು ಅನ್ನುವ ಬಗೆ ನೋಡೋಣ ..

ದಿನನಿತ್ಯ ಖಾಲಿ ಹೊಟ್ಟೆಯಲ್ಲಿ ಕಿವಿ ಹಣ್ಣು ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಸರ್ವ ರೋಗಕ್ಕೂ ಮದ್ದಾಗಿದೆ, ಮಹಿಳೆಯರು, ಮಕ್ಕಳು ಸೇರಿದಂತೆ ಎಲ್ಲರು ಸೇವಿಸಬಹುದಾಗಿದೆ. ಹೆಚ್ಚಾಗಿ ಮಕ್ಕಳಿಗೆ ನೀಡುವುದರಿಂದ ಅವರ ಆರೋಗ್ಯ ಹೆಚ್ಚೆಚ್ಚು ಸುಧಾರಿಸುತ್ತದೆ.   

ಇದನ್ನೂ ಓದಿ: Health Tips: ದೇಹ ತಂಪಾಗಿಸಲು ಇಲ್ಲಿದೆ ಸರಳ ಮನೆಮದ್ದು

ಜೊತೆಗೆ ಮಲಬದ್ಧತೆ, ಅಸಿಡಿಟಿ ಮತ್ತು ಗ್ಯಾಸ್ ನಿವಾರಣೆಯಲ್ಲಿ ಉಪಯುಕ್ತವಾಗೆದೆ.   ಪೋಷಕಾಂಶಗಳಿಂದ ಸಮೃದ್ಧವಾಗಿರುವ ಕಿವಿಯನ್ನು ತಿನ್ನುವುದರಿಂದ ದೇಹದಲ್ಲಿನ ಪೋಷಕಾಂಶಗಳ ಕೊರತೆಯನ್ನು ನೀಗಿಸುತ್ತದೆ. ಕಿವಿ ಹಣ್ಣನ್ನು ನಿಯಮಿತವಾಗಿ ತಿನ್ನುವುದರಿಂದ ತೂಕ ಇಳಿಕೆಗೆ  ಸಹಕಾರಿಯಾಗಿದೆ.  

ಇದನ್ನೂ ಓದಿ: Workout ಬಳಿಕ ತಕ್ಷಣವೇ ನೀರು ಕುಡಿಯಬೇಕೇ ಅಥವಾ ಬೇಡವೇ?

ಕಿವಿ ಸೇವನೆಯು ರಕ್ತದೊತ್ತಡವನ್ನು ನಿಯಂತ್ರಿಸುವುದರ ಜೊತೆಗೆ ಹೃದಯವನ್ನು ಆರೋಗ್ಯವಾಗಿಡಲು ತುಂಬಾ ಪರಿಣಾಮಕಾರಿಯಾಗಿದೆ. ಬೆಳ್ಳಗಿನ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ಸೇವಿಸಲು ಕಷ್ಟವಾದರೇ ಜ್ಯೂಸ್‌ ಮಾಡಿ ಸಹ ಕುಡಿಯಬಹುದಾಗಿದೆ.  ಹೃದಯಾಘಾತ ಮತ್ತು ಎದೆಯುರಿ ಮುಂತಾದ ಸಮಸ್ಯೆಗಳನ್ನು  ಬೇಗನೆ ಕಡಿಮೆ ಮಾಡುತ್ತದೆ. 

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

Trending News