Madras thorn inc Benefits : ನಿಮ್ಮ ಆರೋಗ್ಯಕ್ಕೆ 'ಇಲಾಚಿ ಹಣ್ಣು : ಎಷ್ಟು ಪ್ರಯೋಜನಗಳಿವೆ ಗೊತ್ತಾ?

ಇಲಾಚಿ ಹಣ್ಣುನ ವಿಶೇಷವೆಂದರೆ ಅದು ರೋಗ ನಿರೋಧಕ ಸಾಮರ್ಥ್ಯವನ್ನು ಬಲಪಡಿಸುವ ಹೆಚ್ಚಿನ ಶಕ್ತಿ ಹೊಂದಿದೆ.

Written by - Channabasava A Kashinakunti | Last Updated : Jul 30, 2021, 11:37 PM IST
  • ಇಲಾಚಿ ಹಣ್ಣು ರುಚಿಯ ಜೊತೆಗೆ ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ
  • ಇಲಾಚಿ ಹಣ್ಣುನ ವಿಶೇಷವೆಂದರೆ ಅದು ರೋಗ ನಿರೋಧಕ ಸಾಮರ್ಥ್ಯ
  • ಇಲಾಚಿ​ ಹಣ್ಣು ಚರ್ಮದ ಕಾಯಿಲೆ ಮತ್ತು ಕಣ್ಣಿನ ಸಮಸ್ಯೆಗಳಿಗೆ ಉಪಯುಕ್ತ
Madras thorn inc Benefits : ನಿಮ್ಮ ಆರೋಗ್ಯಕ್ಕೆ 'ಇಲಾಚಿ ಹಣ್ಣು : ಎಷ್ಟು ಪ್ರಯೋಜನಗಳಿವೆ ಗೊತ್ತಾ? title=

ಇಲಾಚಿ ಹಣ್ಣು ರುಚಿಯ ಜೊತೆಗೆ ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿಯಾಗಿದೆ. ಇದರಲ್ಲಿರುವ ಅಂಶಗಳು ನಮ್ಮ ದೇಹವನ್ನು ವಿವಿಧ ಕಾಯಿಲೆಗಳಿಂದ ರಕ್ಷಿಸಲು ಸಹಾಯಕವಾಗಿವೆ. ಇಲಾಚಿ ಹಣ್ಣುನ ವಿಶೇಷವೆಂದರೆ ಅದು ರೋಗ ನಿರೋಧಕ ಸಾಮರ್ಥ್ಯವನ್ನು ಬಲಪಡಿಸುವ ಹೆಚ್ಚಿನ ಶಕ್ತಿ ಹೊಂದಿದೆ.

ಇಲಾಚಿ ಹಣ್ಣಿ(Madrasthron)ನಲ್ಲಿ ವಿಟಮಿನ್ ಸಿ, ಪ್ರೋಟೀನ್, ಕೊಬ್ಬು, ಕಾರ್ಬೋಹೈಡ್ರೇಟ್, ಕ್ಯಾಲ್ಸಿಯಂ, ರಂಜಕ, ಕಬ್ಬಿಣ, ಥಯಾಮಿನ್, ರಿಬೋಫ್ಲಾವಿನ್ ಕಂಡು ಬರುತ್ತವೆ. ಅಲ್ಲದೆ ಅದರ ತೊಗಟೆಯ ಕಷಾಯವು ಭೇದಿ ಸಮಸ್ಯೆಯನ್ನ ತೆಡೆಯಲು ಸಹಾಯಕವಾಗಿದೆ.

ಇದನ್ನೂ ಓದಿ : Health Tips : ಮೊಟ್ಟೆಯ ಜೊತೆ ತಿನ್ನಬೇಡಿ ಈ ಆಹಾರಗಳನ್ನ : ಸೇವಿಸಿದ್ರೆ ತಪ್ಪಿದಲ್ಲ ಅಪಾಯ!

ಕಣ್ಣುಗಳಿಗೆ ಪ್ರಯೋಜನಕಾರಿ

ಇಲಾಚಿ​ ಹಣ್ಣು ಚರ್ಮದ ಕಾಯಿಲೆ ಮತ್ತು ಕಣ್ಣಿ(Eye)ನ ಸಮಸ್ಯೆಗಳಿಗೆ ತುಂಬಾ ಉಪಯುಕ್ತವೆಂದು ಪರಿಗಣಿಸಲಾಗಿದೆ. ಈ ಮರದ ಎಲೆಗಳ ರಸವು ನೋವು ನಿವಾರಕವಾಗಿ ಕಾರ್ಯನಿರ್ವಹಿಸುತ್ತದೆ ಎಂದು ತಜ್ಞರು ಹೇಳುತ್ತಾರೆ.

ಇಲಾಚಿ​ ಹಣ್ಣಿನಲ್ಲಿದೆ ರೋಗ ನಿರೋಧಕ ಶಕ್ತಿ 

ಇಲಾಚಿ ಹಣ್ಣಿನಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದರ ನಿಯಮಿತ ಸೇವನೆಯು ರೋಗನಿರೋಧಕ ಶಕ್ತಿ(Immunity Booster)ಯನ್ನು ಹೆಚ್ಚಿಸುತ್ತದೆ. ಇದನ್ನು ಪ್ರಚಂಡ ರೋಗನಿರೋಧಕ ವರ್ಧಕ ಎಂದೂ ಕರೆಯುತ್ತಾರೆ. ಈ ಕೊರೋನಾ ಯುಗದಲ್ಲಿ ನಮಗೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ತುಂಬಾ ಸಹಾಯಕವಾಗಿದೆ.

ಇದನ್ನೂ ಓದಿ : Pumpkin Benefits : ಈ ಆರೋಗ್ಯ ಕಾರಣಗಳಿಗಾಗಿ ತಿನ್ನಲೇಬೇಕು ಕುಂಬಳಕಾಯಿ

ಮಧುಮೇಹಕ್ಕೆ ಪ್ರಯೋಜನಕಾರಿ

ಇಲಾಚಿ ಹಣ್ಣು ಮಧುಮೇಹ(Diabetes)ವನ್ನೂ ಗುಣಪಡಿಸುವ ಶಕ್ತಿಯನ್ನ ಹೊಂದಿದೆ. ಇಲಾಚಿ ಹಣ್ಣನ್ನ ನಿಯಮಿತವಾಗಿ ಒಂದು ತಿಂಗಳು ಸೇವಿಸಿದರೆ ದೇಹದ ಸಕ್ಕರೆಯನ್ನ ನಿಯಂತ್ರಿಸುತ್ತದೆ ಎಂದು ಹೇಳಲಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News