ರಕ್ತದ ಸಕ್ಕರೆ ನಿಯಂತ್ರಿಸಲು ಸಹಾಯ ಮಾಡುತ್ತದೆ ಅಡುಗೆ ಮನೆಯ ಈ ಮಸಾಲೆಗಳು

Diabetes Home Remedies:ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗಿರುವ ಕಾರಣ ಸೇವಿಸುವ ಆಹಾರಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ. ಎಷ್ಟೇ ಇಷ್ಟವಿದ್ದರೂ ಕೆಲವೊಂದು ಆಹಾರಗಳನ್ನು ಸೇವಿಸಲೇ ಬಾರದು.  ಇದರೊಂದಿಗೆ ಜೀವನ ಪರ್ಯಂತ ಔಷಧಿ ಸೇವಿಸಲೇ ಬೇಕು. 

Written by - Ranjitha R K | Last Updated : Nov 25, 2022, 05:02 PM IST
  • ಮಧುಮೇಹ ಒಂದು ಗಂಭೀರ ಕಾಯಿಲೆ
  • ಆಹಾರಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ.
  • ಜೀವನ ಪರ್ಯಂತ ಔಷಧಿ ಸೇವಿಸಲೇ ಬೇಕು.
ರಕ್ತದ ಸಕ್ಕರೆ ನಿಯಂತ್ರಿಸಲು ಸಹಾಯ ಮಾಡುತ್ತದೆ ಅಡುಗೆ ಮನೆಯ ಈ ಮಸಾಲೆಗಳು  title=
Diabetes Home Remedies

Diabetes Home Remedies: ಮಧುಮೇಹ ಒಂದು ಗಂಭೀರ ಕಾಯಿಲೆ. ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗಿರುವ ಕಾರಣ ಸೇವಿಸುವ ಆಹಾರಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ. ಎಷ್ಟೇ ಇಷ್ಟವಿದ್ದರೂ ಕೆಲವೊಂದು ಆಹಾರಗಳನ್ನು ಸೇವಿಸಲೇ ಬಾರದು.  ಇದರೊಂದಿಗೆ ಜೀವನ ಪರ್ಯಂತ ಔಷಧಿ ಸೇವಿಸಲೇ ಬೇಕು. ಮಧುಮೇಹಕ್ಕೆ ಮುಖ್ಯ ಕಾರಣವೆಂದರೆ ಕಳಪೆ ಜೀವನಶೈಲಿ ಮತ್ತು ತಪ್ಪು ಆಹಾರ ಪದ್ಧತಿ. ಆದರೆ ನಮ್ಮ ಅಡುಗೆ ಮನೆಯಲ್ಲಿಯೇ ಸಿಗುವ ಕೆಲವೊಂದು ಮಸಾಲೆಗಳನ್ನು ಬಳಸಿ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಣಕ್ಕೆ ತರಬಹುದು. 

ಶುಂಠಿ :
ಶುಂಠಿಯನ್ನು ಪ್ರತಿ ಮನೆಯಲ್ಲೂ ಬಳಸಲಾಗುತ್ತದೆ. ಶುಂಠಿಯಲ್ಲಿರುವ ಆಂಟಿ-ಆಕ್ಸಿಡೆಂಟ್‌ಗಳು, ಉರಿಯೂತದ ಗುಣಲಕ್ಷಣಗಳು ಮತ್ತು ಫೈಬರ್ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಲ್ಲದೆ ಮಧುಮೇಹ ನಿಯಂತ್ರಣದಲ್ಲಿಯೂ ಇದು ಪ್ರಮುಖ ಪಾತ್ರ ವಹಿಸುತ್ತದೆ. 

ಇದನ್ನೂ ಓದಿ : Healthy Diet : ತೂಕ ಇಳಿಸಿಕೊಳ್ಳಲು ಕಾಫಿಯಲ್ಲಿ ಈ ಪದಾರ್ಥ ಬೆರೆಸಿ ಸೇವಿಸಿ!

ಮೆಂತ್ಯೆ : 
ಮೆಂತ್ಯೆ ಮಧುಮೇಹ ವಿರೋಧಿ ಗುಣಗಳನ್ನು ಹೊಂದಿದೆ. ಮೆಂತ್ಯೆ  ಬೀಜಗಳನ್ನು ನೆನೆಸಿಟ್ಟ  ನೀರನ್ನು ಪ್ರತಿ ದಿನ ಕುಡಿಯುವುದರಿಂದ ಸಕ್ಕರೆ ಮಟ್ಟವು ನಿಯಂತ್ರಣದಲ್ಲಿರುತ್ತದೆ. ಪ್ರತಿ ರಾತ್ರಿ ಅಥವಾ ಬೆಳಿಗ್ಗೆ ಮೆಂತ್ಯೆ ಬೀಜಗಳನ್ನು ನೆನೆಸಿಟ್ಟ ನೀರನ್ನು ಕುಡಿಯುತ್ತಾ ಬಂದರೆ ಮದು ಮೆಹ ಕೂಡಾ ನಿಯಂತ್ರಣಕ್ಕೆ ಬರುತ್ತದೆ. 

 ಚಕ್ಕೆ : 
 ಚಕ್ಕೆಯ ಬಳಕೆಯಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಬಹುದು.  ಚಕ್ಕೆಯಲ್ಲಿ ಅನೇಕ ಔಷಧೀಯ ಗುಣಗಳು ಕಂಡು ಬರುತ್ತವೆ.  ಮದುಮೇಹ ರೋಗಿಗಳಿಗೆ ಚಕ್ಕೆ ಬಹಳ ಪ್ರಯೋಜನಕಾರಿಯಾಗಿದೆ. 

ಕರಿ ಮೆಣಸು :
ಕರಿಮೆಣಸನ್ನು ಪ್ರತಿಯೊಂದು ಅಡುಗೆಮನೆಯಲ್ಲಿಯೂ ಬಳಸಲಾಗುತ್ತದೆ. ಉರಿಯೂತ ನಿವಾರಕ ಗುಣಗಳು ಇದರಲ್ಲಿ ಅಡಗಿರುತ್ತವೆ. ಕರಿಮೆಣಸಿನಲ್ಲಿರುವ ಗುಣಗಳು ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುವ ಮೂಲಕ ಕರಿಮೆಣಸು ಮಧುಮೇಹಕ್ಕೆ ಪ್ರಯೋಜನಕಾರಿಯಾಗಿದೆ.

ಇದನ್ನೂ ಓದಿ : World’s Most Expensive Vegetable: ಚಿನ್ನ-ವಾಹನಕ್ಕಿಂತ ದುಬಾರಿ ಈ ತರಕಾರಿ: ಇದರ ನಿಜ ಬೆಲೆ ಕೇಳಿದ್ರೆ ಶಾಕ್ ಆಗ್ತೀರ!!

ಬೆಳ್ಳುಳ್ಳಿ :
ಬೆಳ್ಳುಳ್ಳಿಯಲ್ಲಿ ಅನೇಕ ಪೋಷಕಾಂಶಗಳು ಕಂಡುಬರುತ್ತವೆ. ಮಧುಮೇಹವನ್ನು ನಿಯಂತ್ರಿಸುವಲ್ಲಿ ಬೆಳ್ಳುಳ್ಳಿ ಪ್ರಯೋಜನಕಾರಿಯಾಗಿದೆ. ಸಕ್ಕರೆ ಮಟ್ಟವನ್ನು ನಿಯಂತ್ರಿಸಲು, ಹಸಿ ಬೆಳ್ಳುಳ್ಳಿ ಎಸಳನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನಬೇಕು. 

ಕರಿಬೇವು :
ಕರಿಬೇವಿನ ಸೊಪ್ಪಿನ ಸೇವನೆಯು ಕೂಡಾ ಮಧುಮೇಹ ರೋಗಿಗಳಿಗೆ  ಪ್ರಯೋಜನಕಾರಿ. ಇದರಲ್ಲಿರುವ ಪೋಷಕಾಂಶಗಳು ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಕರಿಬೇವಿನ ಎಲೆಗಳನ್ನು ಪ್ರತಿದಿನ ತಿನ್ನಬೇಕು. 

 

 ( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಮಾಡಿ 

Trending News