Bullet Proof Coffee Benefits: ವಿಶ್ವಾದ್ಯಂತ ಕಾಫಿ ಸೇವನೆ ಒಂದು ಸ್ಟೇಟಸ್ ಸಿಂಬಲ್ ಆಗಿದೆ. ಪ್ರಸ್ತುತ, ನೀವು ಮಾರುಕಟ್ಟೆಯಲ್ಲಿ ಕಾಫಿಯ ಅನೇಕ ಫ್ಲೇವರ್ ಗಳನ್ನು ಕಾಣಬಹುದು, ಅಂದರೆ, ಕಾಫಿಯ ಹಲವು ವಿಧಗಳು ಸಹ ಲಭ್ಯವಿದೆ. ಕಾಫಿ ಕುಡಿಯುವುದರಿಂದ ಅನಾನುಕೂಲತೆಗಳು ಇವೆ ಮತ್ತು ಅನುಕೂಲತೆಗಳು ಇವೆ. ಅನೇಕರು ಫಿಟ್ ಆಗಿ ಇರಲು ಮತ್ತು ಚೈತನ್ಯ ಭರಿತವಾಗಿ ಇರಲು ಕಾಫಿ ಕುಡಿಯುತ್ತಾರೆ, ಆದರೆ ಕೆಲವರು ತೂಕ ಇಳಿಸಿಕೊಳ್ಳಲು ಕಾಫಿ ಕುಡಿಯುತ್ತಾರೆ. ಮೆಗ್ನೀಸಿಯಮ್, ಪೊಟ್ಯಾಸಿಯಮ್ ಮತ್ತು ಆಂಟಿಆಕ್ಸಿಡೆಂಟ್‌ಗಳಂತಹ ಅನೇಕ ರೀತಿಯ ಪೋಷಕಾಂಶಗಳು ಕಾಫಿಯಲ್ಲಿ ಕಂಡುಬರುತ್ತವೆ. ಕೆಲವರು ಹಾಲಿನ ಕಾಫಿಯನ್ನು ಕುಡಿಯಲು ಇಷ್ಟಪಟ್ಟರೆ, ಇನ್ನೂ ಕೆಲವ್ರು ಕಪ್ಪು ಕಾಫಿ ಸೇವಿಸುತ್ತಾರೆ. ಆದಾಗ್ಯೂ, ಇತ್ತೀಚಿನ ದಿನಗಳಲ್ಲಿ ಅನೇಕ ಸೆಲೆಬ್ರಿಟಿಗಳು ಬುಲೆಟ್‌ಪ್ರೂಫ್ ಕಾಫಿಯ ಬಗ್ಗೆ ಮಾತನಾಡುವುದನ್ನು ನೀವು ಕೇಳಿರಬಹುದು. ಬುಲೆಟ್ ಪ್ರೂಫ್ ಕಾಫಿಯನ್ನು ಬಟರ್ ಕಾಫಿ ಅಥವಾ ಕೆಟೋ ಕಾಫಿ ಎಂದೂ ಕರೆಯುತ್ತಾರೆ. ಹಾಗಾದರೆ ಬನ್ನಿ ಬುಲ್ಲೆಟ್ ಪ್ರೂಫ್ ಕಾಫಿ ಬ್ಲ್ಯಾಕ್ ಕಾಫಿಗಿಂತ ಹೇಗೆ ಉತ್ತಮ ತಿಳಿದುಕೊಳ್ಳೋಣ ಬನ್ನಿ (Lifestyle News In Kannada)
ಕಪ್ಪು ಕಾಫಿಗಿಂತ ಬುಲ್ಲೆಟ್ ಪ್ರೂಫ್ ಕಾಫಿ ಹೇಗೆ ಉತ್ತಮವಾಗಿದೆ?
ಅನೇಕ ಸೇಲಿಬ್ರಿಟಿಗಳು ತಮ್ಮ ಸಂದರ್ಶನದ ವೇಳೆ ಬುಲೆಟ್ ಫ್ರೂಪ್ ಕಾಫಿ ಬಗ್ಗೆ ಮಾತನಾಡುವುದನ್ನು ನೀವು ಕೇಳಿರಬಹುದು. ಅವರನ್ನು ಅನುಕರಣೆ ಮಾಡುವವರು ಇದೀಗ ಬುಲೆಟ್ ಪ್ರೂಫ್ ಕಾಫಿ ಒಂದು ಆರೋಗ್ಯಕರ ಪಾನೀಯ ಎಂಬಂತೆ ನೋಡಲು ಆರಂಭಿಸಿದ್ದಾರೆ. ಆದರೆ, ವಿಷಯ ತಜ್ಞರ ಸಲಹೆ ಇಲ್ಲದೆ ಯಾರು ಬುಲೆಟ್ ಪ್ರೂಫ್ ಕಾಫಿ ಸೇವಿಸಲು ಆರಂಭಿಸಬಾರದು ಎಂಬುದು ನಮ್ಮ ಕಳಕಳಿಯ ವಿನಂತಿ. ಏಕೆಂದರೆ ಕಾಫಿ ಸೇವನೆಯು ನಮ್ಮ ದೇಹದಲ್ಲಿ ಹಲವಾರು ಸಮಸ್ಯೆಗಳನ್ನು ಉಂಟುಮಾಡಬಹುದು. ಬ್ಲ್ಯಾಕ್ ಕಾಫಿ ಮತ್ತು ಬುಲೆಟ್ ಕಾಫಿಯ ವಿಷಯಕ್ಕೆ ಬರುವುದಾದರೆ, ಬ್ಲ್ಯಾಕ್ ಕಾಫಿಗಿಂತ ಬುಲ್ಲೆಟ್ ಪ್ರೂಫ್ ಕಾಫಿ ಉತ್ತಮ ಎಂಬುದು ತಜ್ಞರ ಅಭಿಮತವಾಗಿದೆ.
ಒಬ್ಬ ವ್ಯಕ್ತಿಯು ಕಪ್ಪು ಕಾಫಿಯನ್ನು ಕುಡಿದಾಗ, ಅದು ದೇಹಕ್ಕೆ ತ್ವರಿತ ಶಕ್ತಿಯನ್ನು ನೀಡುತ್ತದೆ ಮತ್ತು ಶಕ್ತಿಯ ಗ್ರಾಫ್ ಏರಿದ ತಕ್ಷಣ ಅದು ಕಡಿಮೆಯಾಗುತ್ತದೆ ಎಂಬುದು ತಜ್ಞರ ಅಭಿಮತ. ಇದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದೇ ವೇಳೆ, ನೀವು ಕಾಫಿಯೊಂದಿಗೆ ಕೊಬ್ಬನ್ನು ಬೆರೆಸಿದಾಗ, ಅದು ಕ್ರಮೇಣ ದೇಹದಲ್ಲಿ ಶಕ್ತಿಯನ್ನು ಹೆಚ್ಚಿಸುತ್ತದೆ, ಇದು ಮೆದುಳಿನ ಮೇಲೆ ಉತ್ತಮ ಪರಿಣಾಮ ಬೀರುತ್ತದೆ ಮತ್ತು ನಿಮ್ಮ ಶಕ್ತಿಯ ಮಟ್ಟವು ಸಹ ದೀರ್ಘಕಾಲದವರೆಗೆ ಇರುವಂತೆ ಮಾಡುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಬ್ಲ್ಯಾಕ್ ಕಾಫಿಗಿಂತ ಬುಲೆಟ್ ಕಾಫಿ ಸೇವನೆ ಉತ್ತಮ. ಆದರೆ ಬುಲೆಟ್ ಕಾಫಿಯನ್ನು ಆರೋಗ್ಯ ತಜ್ಞರ ಸಲಹೆ (bulletproof coffee side effects) ಪಡೆದುಕೊಳ್ಳದೆ ಸೇವಿಸಬಾರದು. ಏಕೆಂದರೆ ನಿಮ್ಮ ರಕ್ತದೊತ್ತಡವು ಅಧಿಕವಾಗಿದ್ದರೆ ಅಥವಾ ನಿಮಗೆ ಹೃದಯ ಸಂಬಂಧಿ ಸಮಸ್ಯೆಗಳಿದ್ದರೆ, ಇದರ ಸೇವನೆಯು ಹಾನಿಕಾರಕವೆಂದು ಸಾಬೀತಾಗಬಹುದು.
ಬುಲೆಟ್ ಕಾಫಿಯ ಪ್ರಯೋಜನಗಳು (bulletproof coffee: benefits and side effects)
1. ಬುಲೆಟ್ ಕಾಫಿಯು ಕೊಬ್ಬಿನೊಂದಿಗೆ ಉತ್ತಮ ಪ್ರಮಾಣದ ಕೆಫೀನ್ ಅನ್ನು ಹೊಂದಿರುತ್ತದೆ, ಇದು ಮಾನಸಿಕ ಸ್ಪಷ್ಟತೆ ಮತ್ತು ಕಾನ್ಸನ್ಟ್ರೇಷನ್ ಸುಧಾರಿಸುತ್ತದೆ.
ಇದನ್ನೂ ಓದಿ-Ash Gourd Benefits: ಶರೀರದಿಂದ ವಿಷಕಾರಿ ಪದಾರ್ಥ ಹೊರಹಾಕಿ ತೂಕ ಇಳಿಕೆಗೆ ಸಹಕರಿಸುತ್ತೆ ಈ ಜ್ಯೂಸ್!
2. ಬುಲೆಟ್ ಕಾಫಿ ದೇಹಕ್ಕೆ ತ್ವರಿತ ಶಕ್ತಿಯನ್ನು ನೀಡುವುದಿಲ್ಲ ಮತ್ತು ಅದು ನೀಡುವ ಶಕ್ತಿಯು ದೀರ್ಘಕಾಲದವರೆಗೆ ಇರುತ್ತದೆ. ಹೀಗಾಗಿ ಬುಲೆಟ್ ಕಾಫಿ ಕುಡಿಯುವುದರಿಂದ ನೀವು ತಾಜಾತನ ಮತ್ತು ಶಕ್ತಿಭರಿತ ಅನುಭವ ಪಡೆಯುವಿರಿ.
ಇದನ್ನೂ ಓದಿ-Weight Reduce Tips: ಕೆಲವೇ ದಿನಗಳಲ್ಲಿ ಹೊಟ್ಟೆ ಭಾಗದ ಕೊಬ್ಬು ಕರಗಿಸಬೇಕೆ?ಇಲ್ಲಿದೆ ಒಂದು ಸೂಪರ್ ಡ್ರಿಂಕ್!
3. ಬುಲೆಟ್ ಕಾಫಿ ಸೇವನೆ ಮಾಡುವುದರಿಂದ ತೂಕ ಇಳಿಕೆ ಮಾಡಿಕೊಳ್ಳಬಹುದು. ಏಕೆಂದರೆ ಇದು ಹಸಿವನ್ನು ಕಡಿಮೆ ಮಾಡುತ್ತದೆ (benefits of bulletproof coffee for weight loss).
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ