ರಾಜ್ಯದಲ್ಲಿ ಕೋವಿಡ್ ನಿರ್ವಹಣೆಗೆ 5 ಟಿ ಸೂತ್ರ: ಪ್ರಧಾನಿ ಮೋದಿ ಮೆಚ್ಚುಗೆ

ರಾಜ್ಯದಲ್ಲಿ ಕೋವಿಡ್ ನಿಯಂತ್ರಣ ಹಾಗೂ ನಿರ್ವಹಣೆಗೆ ಅಳವಡಿಸಿರುವ ಟೆಸ್ಟಿಂಗ್, ಟ್ರಾಕಿಂಗ್, ಟ್ರೇಸಿಂಗ್, ಟ್ರಯಾಜಿಂಗ್ ಮತ್ತು ಟೆಕ್ನಾಲಜಿ ಬಳಕೆಯ 5 ಟಿ ಸೂತ್ರವನ್ನು ಪುಧಾನಮಂತ್ರಿಯವರು ಶ್ಲಾಘಿಸಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Written by - Zee Kannada News Desk | Last Updated : Jan 13, 2022, 08:32 PM IST
  • ರಾಜ್ಯದಲ್ಲಿ ಕೋವಿಡ್ ನಿಯಂತ್ರಣ ಹಾಗೂ ನಿರ್ವಹಣೆಗೆ ಅಳವಡಿಸಿರುವ ಟೆಸ್ಟಿಂಗ್, ಟ್ರಾಕಿಂಗ್, ಟ್ರೇಸಿಂಗ್, ಟ್ರಯಾಜಿಂಗ್ ಮತ್ತು ಟೆಕ್ನಾಲಜಿ ಬಳಕೆಯ 5 ಟಿ ಸೂತ್ರವನ್ನು ಪುಧಾನಮಂತ್ರಿಯವರು ಶ್ಲಾಘಿಸಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಕೋವಿಡ್ ನಿರ್ವಹಣೆಗೆ 5 ಟಿ ಸೂತ್ರ: ಪ್ರಧಾನಿ ಮೋದಿ ಮೆಚ್ಚುಗೆ  title=
file photo

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ನಿಯಂತ್ರಣ ಹಾಗೂ ನಿರ್ವಹಣೆಗೆ ಅಳವಡಿಸಿರುವ ಟೆಸ್ಟಿಂಗ್, ಟ್ರಾಕಿಂಗ್, ಟ್ರೇಸಿಂಗ್, ಟ್ರಯಾಜಿಂಗ್ ಮತ್ತು ಟೆಕ್ನಾಲಜಿ ಬಳಕೆಯ 5 ಟಿ ಸೂತ್ರವನ್ನು ಪುಧಾನಮಂತ್ರಿಯವರು ಶ್ಲಾಘಿಸಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ನಡೆಸಿದ ವಿಡಿಯೊ ಸಂವಾದದಲ್ಲಿ ಭಾಗವಹಿಸಿದ ನಂತರ ಪತ್ರಿಕಾ ಹೇಳಿಕೆ ನೀಡಿರುವ ಮುಖ್ಯಮಂತ್ರಿ ಬೊಮ್ಮಾಯಿ, ರಾಜ್ಯದಲ್ಲಿ ಕೋವಿಡ್ ನಿಯಂತ್ರಣ ಹಾಗೂ ನಿರ್ವಹಣೆಗಾಗಿ ಕೈಗೊಂಡಿರುವ ಕ್ರಮಗಳನ್ನು ಪುಧಾನಿಯವರಿಗೆ ವಿವರಿಸಲಾಯಿತು.ರಾಜ್ಯದಲ್ಲಿ ಹೆಚ್ಚಿನ ಪುಮಾಣದಲ್ಲಿ ಪರೀಕ್ಷೆ ನಡೆಸುತ್ತಿರುವ ಕುರಿತು ಹಾಗೂ ರಾಜ್ಯದಲ್ಲಿ ಲಸಿಕೆ ಹಾಕಿಸಿಕೊಂಡವರ ಪ್ರಮಾಣ ದೇಶದ ಸರಾಸರಿಗಿಂತ ಹೆಚ್ಚಿರುವ ಕುರಿತು ಪ್ರಧಾನಿಯವರು ಮೆಚ್ಚುಗೆ ವ್ಯಕ್ತಪಡಿಸಿದರು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ರಾತ್ರಿ 10 ಗಂಟೆಯಿಂದ ನೈಸ್ ರಸ್ತೆಯಲ್ಲಿ ದ್ವಿಚಕ್ರ ವಾಹನಗಳ ಸಂಚಾರಕ್ಕೆ ಬ್ರೇಕ್

ಇದರೊಂದಿಗೆ ರಾಜ್ಯದಲ್ಲಿ ಆರೋಗ್ಯ ಮೂಲಸೌಕರ್ಯ ಅಭಿವೃದ್ಧಿಗೆ ಕೈಗೊಂಡಿರುವ ಕ್ರಮಗಳ ಕುರಿತು ಸಹ ಪ್ರಧಾನಿಯವರಿಗೆ ಮಾಹಿತಿ ನೀಡಲಾಯಿತು. ಹಾಗೂ ಆಕ್ಸಿಜನೇಟೆಡ್ ಬೆಡಗಳು ಮತ್ತು ಆಕ್ಸಿಜನ್ ಪ್ಯಾಂಟ್ ಗಳನ್ನು ಹೆಚ್ಚಿಸಲು ಕೇಂದ್ರದ ನೆರವು ಕೋರಲಾಯಿತು.ರಾಜ್ಯದಲ್ಲಿ ಹೋಂ ಐಸೊಲೇಷನ್ ನಲ್ಲಿ ಇರುವವರ ಮೇಲ್ವಿಚಾರಣೆಗೆ ತಂತ್ರಜ್ಞಾನದ ಬಳಕೆಯನ್ನು ಪ್ರಧಾನಿಯವರು ಶ್ಲಾಘಿಸಿದರು ಎಂದು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಅಲೆ ಫೆಬ್ರವರಿ ತಿಂಗಳಲ್ಲಿ ಅತ್ಯಂತ ತೀವುಗೊಳ್ಳುವ ನಿರೀಕ್ಷೆಯಿದ್ದು, ಮೊದಲ ಹಾಗೂ ಎರಡನೇ ಅಲೆಯನ್ನು ಎದುರಿಸಿದ ಅನುಭವದ ಆಧಾರದಲ್ಲಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಸೂಚಿಸಿದರು.

ಇದನ್ನೂ ಓದಿ: 'ಓಮಿಕ್ರಾನ್ ಡೆಲ್ಟಾಕ್ಕಿಂತ ಹೆಚ್ಚು ಸಾಂಕ್ರಾಮಿಕ "

ಮೂರನೇ ಅಲೆಯ ಸಂದರ್ಭದಲ್ಲಿ ಶೇ. 94 ಕ್ಕೂ ಹೆಚ್ಚು ಸೋಂಕಿತರು ಹೋಮ್ ಐಸೊಲೇಷನ್ ನಲ್ಲಿ ಇದ್ದಾರೆ. ಆದ್ದರಿಂದ ಅವರಲ್ಲಿ ವಿಶ್ವಾಸ ಮೂಡಿಸುವ ಹಾಗೂ ಅವರಿಗೆ ಔಷಧ ಪೂರೈಕೆಯೂ ಸೇರಿದಂತೆ ಸೂಕ್ತ ಆರೈಕೆಯನ್ನು ಖಾತರಿಪಡಿಸಲು ಆದ್ಯತೆ ನೀಡುವಂತೆ ಪ್ರಧಾನಿ ತಿಳಿಸಿದ್ದಾರೆ.

ಕೇಂದ್ರ ಸರ್ಕಾರವು ಎಲ್ಲಾ ರಾಜ್ಯಗಳಿಗೆ ರೂ.32 ಸಾವಿರ ಹಣವನ್ನು ಆರೋಗ್ಯ ಮೂಲಭೂತ ಸೌಕರ್ಯಕ್ಕಾಗಿ 2ನೇ ಅಲೆಯ ನಂತರ ಒದಗಿಸಲಾಗಿದೆ.ಇನ್ನೂ ಹಲವು ರಾಜ್ಯಗಳು ಇದರ ಪ್ರಯೋಜನ ಪಡೆದಿಲ್ಲ. ಆರೋಗ್ಯ ಮೂಲಭೂತ ಸೌಕರ್ಯ, ಐಸಿಯು, ಆಕ್ಸಿಜನ್ ಪ್ಲಾಂಟ್, ಆಕ್ಸಿಜನೇಟೆಡ್ ಬೆಡ್‌ಗಳು, ಹಾಗೂ ಆಂಬುಲೆನ್ಸ್ ಇತರ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲು ರಾಜ್ಯಗಳ ಸಹ ತಮ್ಮ ಪಾಲನ್ನು ಸೇರಿಸಿ ಈ ಯೋಜನೆಯ ಪ್ರಯೋಜನೆಯನ್ನು ಪಡೆದುಕೊಳ್ಳಬೇಕಾಗಿ ಸಲಹೆ ಕೊಟ್ಟರು.

Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News