7th Pay Commission: ಸರ್ಕಾರಿ ನೌಕರರಿಗೆ ಮತ್ತೊಂದು ಉಡುಗೊರೆ ನೀಡಿದ ಕೇಂದ್ರ ಸರ್ಕಾರ !

7th Pay Commission Latest News: ಕೇಂದ್ರ ಸರ್ಕಾರಿ ನೌಕರರಿಗಾಗಿ ಆರಂಭಿದಿದ್ದ ಮನೆ ನಿರ್ಮಾಣ ಮುಂಗಡ ಯೋಜನೆಯನ್ನು (HBA Scheme) ಮಾರ್ಚ್ 2022 ರವರೆಗೆ ಸರ್ಕಾರ ವಿಸ್ತರಿಸಿದೆ.

Written by - Nitin Tabib | Last Updated : Aug 9, 2021, 12:44 PM IST
  • ಕೇಂದ್ರ ಸರ್ಕಾರಿ ನೌಕರರಿಗೆ ಮತ್ತೊಂದು ಉಡುಗೊರೆ ನೀಡಿದ ಕೇಂದ್ರ ಸರ್ಕಾರ.
  • HBA ಸ್ಕೀಮ್ ಅವಧಿಯಲ್ಲಿ ವಿಸ್ತರಣೆ.
  • ಅಗ್ಗದ ಬಡ್ಡಿದರದಲ್ಲಿ ಮನೆ ಖರೀದಿಗೆ ಸಿಗುತ್ತೆ ಅಡ್ವಾನ್ಸ್ .
7th Pay Commission: ಸರ್ಕಾರಿ ನೌಕರರಿಗೆ ಮತ್ತೊಂದು ಉಡುಗೊರೆ ನೀಡಿದ ಕೇಂದ್ರ ಸರ್ಕಾರ ! title=
7th Pay commission Latest News Today (File Photo)

ನವದೆಹಲಿ: 7th Pay Commission Latest News - ಕೇಂದ್ರ ಸರ್ಕಾರಿ ನೌಕರರಿಗೆ ಮತ್ತೊಂದು ಸಂತಸದ ಸುದ್ದಿ ಪ್ರಕಟವಾಗಿದೆ. ಈ ಹಿಂದೆ ಜುಲೈ 2021ರಲ್ಲಿ ಸರ್ಕಾರ ಕೇಂದ್ರ ಸರ್ಕಾರಿ ನೌಕರರ DA (DA Hike), DR ಜೊತೆಗೆ HRA ಕೂಡ ಹೆಚ್ಚಿಸಿತ್ತು. ಇದರ ಬಳಕ ಇದೀಗ ಕೇಂದ್ರ ಸರ್ಕಾರಿ ನೌಕರರಿಗಾಗಿ ಆರಂಭಿಸಿದ್ದ ಹೌಸ್ ಬಿಲ್ಡಿಂಗ್ ಅಡ್ವಾನ್ಸ್ ಸ್ಕೀಮ್ (HBA Scheme) ಅನ್ನು ಮಾರ್ಚ್ 2022ರವರೆಗೆ ವಿಸ್ತರಿಸಿದೆ. ಅಂದರೆ ಒಂದು ವೇಳೆ ಯಾವುದೇ ಸರ್ಕಾರಿ ನೌಕರ ಮನೆಯನ್ನು ಖರೀದಿಸಲು ಯೋಜನೆ ರೂಪಿಸುತಿದ್ದರೆ, ಅವರಿಗ ಅಗ್ಗದ ದರದಲ್ಲಿ ಹೋಮ್ ಲೋನ್ ಸೌಲಭ್ಯ ಸಿಗಲಿದೆ. 

ಅಗ್ಗದ ಬಡ್ಡಿ ದರದಲ್ಲಿ ಹೋಮ್ ಲೋನ್ ಸಿಗಲಿದೆ
ಕೇಂದ್ರ ಸರ್ಕಾರದ ಹೌಸ್ ಬಿಲ್ಡಿಂಗ್  ಅಡ್ವಾನ್ಸ್ ಯೋಜನೆಯ ಅಡಿ ಸಿಗುವ ಲಾಭವನ್ನು ಇದೀಗ ಮಾರ್ಚ್ 31, 2022ರವರೆಗೆ ವಿಸ್ತರಿಸಲಾಗಿದೆ. ಇದರ ಅಡಿ ಸರ್ಕಾರ ಕೇಂದ್ರ ಸರ್ಕಾರಿ ನೌಕರರಿಗೆ (Central Government Employees) ಶೇ.7.9ರ ಬಡ್ಡಿ ದರದಲ್ಲಿ ಗೃಹ ಸಾಲ ಒದಗಿಸುತ್ತಿದೆ. HBA ಯೋಜನೆಯಲ್ಲಿ ನೆಮ್ಮದಿ ನೀಡುವ ಮೊದಲು ಕೇಂದ್ರ ಸರ್ಕಾರ (Central Government) ನೌಕರರ ಹಾಗೂ ಪಿಂಚಣಿದಾರರ DA ಹಾಗೂ DR ಹೆಚ್ಚಳ ಮಾಡಿತ್ತು.

ಇದನ್ನೂ ಓದಿ-Aadhaar Update: ಆಧಾರ್‌ನಲ್ಲಿ ವಿಳಾಸ ನವೀಕರಿಸಲು ಈ ಸೌಲಭ್ಯ ಸ್ಥಗಿತಗೊಳಿಸಿದ UIDAI

ಏನಿದು HBA?
ಕೇಂದ್ರ ಸರ್ಕಾರ ತನ್ನ ನೌಕರರಿಗೆ House Building Advance ನೀಡುತ್ತದೆ. ಇದರಲ್ಲಿ ನೌಕರರು ತಮ್ಮ ಹೆಸರ ಮೇಲೆ ಅಥವಾ ತಮ್ಮ ಪತ್ನಿಯ ಹೆಸರಿನಲ್ಲಿರುವ ಪ್ಲಾಟ್ ನಲ್ಲಿ ಸ್ವಂತ ಮನೆ ನಿರ್ಮಿಸಿಕೊಳ್ಳಬಹುದು. ಈ ಯೋಜನೆ ಅಕ್ಟೋಬರ್ 1, 2020 ರಂದು ಆರಂಭಗೊಂಡಿತ್ತು ಹಾಗೂ ಇದರ ಅಡಿ ಮಾರ್ಚ್ 31, 2022ರವರೆಗೆ ಕೇಂದ್ರ ಸರ್ಕಾರ ತನ್ನ ನೌಕರರಿಗೆ ಶೇ.7.9ರ ಬಡ್ಡಿ ದರದಲ್ಲಿ ಹೌಸ್ ಬಿಲ್ಡಿಂಗ್ ಅಡ್ವಾನ್ಸ್ ನೀಡುತ್ತದೆ. 7ನೇ ವೇತನ ಆಯೋಗದ ಶಿಫಾರಸ್ಸಿನಂತೆ ಹಾಗೂ HBA ನಿಯಮಗಳ ಅನುಸಾರ ಕೇಂದ್ರ ಸರ್ಕಾರಿ ನೌಕರರು ಹೊಸ ಮನೆಯ ನಿರ್ಮಾಣ ಅಥವಾ ಹೊಸ ಮನೆ ಅಥವಾ ಫ್ಲಾಟ್ ಖರೀದಿಗಾಗಿ 34 ತಿಂಗಳ ಬೇಸಿಕ್ ಸ್ಯಾಲರಿ ಅಥವಾ ಅತ್ಯಧಿಕ 25 ಲಕ್ಷ ರೂರೂ. ಅಥವಾ ಮನೆಯ ಬೆಲೆ ಅಹ್ತವಾ ಅಡ್ವಾನ್ಸ್ ಮರು ಪಾವತಿಯ ಕ್ಷಮತೆಗೆ ಅನುಗುಣವಾಗಿ ಯಾವುದು ಕಡಿಮೆಯಾಗುತ್ತದೆಯೋ ಅಷ್ಟು ಮೊತ್ತವನ್ನು ಅಡ್ವಾನ್ಸ್ ಪಡೆಯಬಹುದು. ಈ ಅಡ್ವಾನ್ಸ್ ಮೇಲೆ ಶೇ.7.9 ರಷ್ಟು ಬಡ್ಡಿ ಪಾವತಿಸಬೇಕು. ಸತತ 5 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ತಾತ್ಕಾಲಿಕ ಉದ್ಯೋಗಿಗಳಿಗೂ ಕೂಡ ಈ ಸೌಲಭ್ಯದ ಲಾಭ ಸಿಗುತ್ತದೆ.

ಇದನ್ನೂ ಓದಿ-PM Kisan: ಇಂದಿನಿಂದ ರೈತರ ಖಾತೆ ಸೇರಲಿದೆ 2000 ರೂ., ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಈ ರೀತಿ ಪರಿಶೀಲಿಸಿ

ಪಿಂಚಣಿದಾರರಿಗೇನು ಲಾಭ?
ಈ ಬಾರಿ ಸರ್ಕಾರ ಪಿಂಚಣಿದಾರರ ವಿಷಯದಲ್ಲಿಯೂ ಕೂಡ ಒಂದು ಮಹತ್ವದ ನಿರ್ಣಯ ಕೈಗೊಂಡಿದೆ. ಸರ್ಕಾರದ ಈ ನಿರ್ಧಾರದಿಂದ ನಿವೃತ್ತ ನೌಕರರ ನಿಧನದ ನಂತರ ಅವರ ಸಂತ್ರಸ್ತ ಸದಸ್ಯರಿಗೆ ಶೇ.50ರಷ್ಟು ಲಾಭ ಸಿಗಲಿದೆ. ನೌಕರರ ಮೇಲೆ ಅವಲಂಭಿತರಾಗಿರುವವರಿಗೆ ಪಿಂಚಣಿಯ ಲಾಭ ಸಿಗಲು ಸರ್ಕಾರಿ ನೌಕರರಿಗೆ ಈ ಮೊದಲಿದ್ದ 7 ವರ್ಷಗಳ ಕಟ್ಟಳೆಯನ್ನು ಇದೀಗ ತೆಗೆದುಹಾಕಲಾಗಿದೆ.

ಇದನ್ನೂ ಓದಿ-Mumbai Local Train: ಆಗಸ್ಟ್ 15 ರಿಂದ ಆರಂಭವಾಗಲಿದೆ ಮುಂಬೈ ಲೋಕಲ್ ಟ್ರೈನ್, ಆದರೆ ಈ ಷರತ್ತುಗಳು ಅನ್ವಯ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News