ಪರೀಕ್ಷೆಯಿಲ್ಲದೆಯೇ ಮುಂದಿನ ತರಗತಿಗೆ ಪ್ರಮೋಟ್ ಆಗಲಿದ್ದಾರೆ 9 ಮತ್ತು ೧೧ನೇ ಕ್ಲಾಸ್ ವಿದ್ಯಾರ್ಥಿಗಳು

ಈ ಮೊದಲು ಮಹಾರಾಷ್ಟ್ರ  ಬೋರ್ಡ್ ನ  1 ನೇ ತರಗತಿಯಿಂದ 8 ನೇ ತರಗತಿಯವರೆಗೆ ಎಲ್ಲಾ ವಿದ್ಯಾರ್ಥಿಗಳನ್ನು ಯಾವುದೇ ಪರೀಕ್ಷೆಯಿಲ್ಲದೆ  ಮುಂದಿನ ತರಗತಿಗೆ ಪ್ರಮೋಟ್ ಮಾಡುವುದಾಗಿ ಸರ್ಕಾರ  ಘೋಷಿಸಿತ್ತು. ಇದೀಗ 9 ಮತ್ತು 11 ನೇ ತರಗತಿಯ ವಿದ್ಯಾರ್ಥಿಗಳನ್ನು ಕೂಡಾ ಪರೀಕ್ಷೆಗೆ ಒಳಪಡಿಸದೆ ಮುಂದಿನ ತರಗತಿಗೆ ಬಡ್ತಿ ನೀಡಲಾಗುವುದು ಎಂದು ಸರ್ಕಾರ  ಪ್ರಕಟಿಸಿದೆ. 

Written by - Ranjitha R K | Last Updated : Apr 7, 2021, 05:15 PM IST
  • ಮಹಾರಾಷ್ಟ್ರದಲ್ಲಿ ದಾಖಲೆ ಪ್ರಮಾಣದಲ್ಲಿ ವರದಿಯಾಗುತ್ತಿವೆ ಕರೋನವೈರಸ್ ಪ್ರಕರಣಗಳು
  • 9 ಮತ್ತು 11 ನೇ ತರಗತಿಯ ವಿದ್ಯಾರ್ಥಿಗಳು ಕೂಡಾ ಪರೀಕ್ಷೆಯಿಲ್ಲದೆ ಪಾಸ್
  • 10-12 ನೇ ತರಗತಿಗೆ ನಡೆಯಲಿದೆ ಆಫ್ ಲೈನ್ ಪರೀಕ್ಷೆ
ಪರೀಕ್ಷೆಯಿಲ್ಲದೆಯೇ ಮುಂದಿನ ತರಗತಿಗೆ ಪ್ರಮೋಟ್ ಆಗಲಿದ್ದಾರೆ 9 ಮತ್ತು ೧೧ನೇ ಕ್ಲಾಸ್ ವಿದ್ಯಾರ್ಥಿಗಳು title=
10-12 ನೇ ತರಗತಿಗೆ ನಡೆಯಲಿದೆ ಆಫ್ ಲೈನ್ ಪರೀಕ್ಷೆ (file photo)

ಮುಂಬೈ : ಮಹಾರಾಷ್ಟ್ರದಲ್ಲಿ ದಾಖಲೆಯ ಪ್ರಮಾಣದಲ್ಲಿ ಕರೋನವೈರಸ್ (Coronavirus) ಪ್ರಕರಣಗಳು ವರದಿಯಾಗುತ್ತಿವೆ. ದಿನೇ ದಿನೇ ಹೆಚ್ಚುತ್ತಿರುವ ಪ್ರಕರಣಗಳಿಂದ ಆತಂಕ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮಹತ್ವದ ಘೋಷನೆಯೊಂದನ್ನು ಪ್ರಕಟಿಸಿದೆ. ಈಗ 9 ಮತ್ತು 11 ನೇ ತರಗತಿಯ ವಿದ್ಯಾರ್ಥಿಗಳನ್ನು ಕೂಡಾ ಪರೀಕ್ಷೆಗೆ ಒಳಪಡಿಸದೆ ಮುಂದಿನ ತರಗತಿಗೆ ಬಡ್ತಿ ನೀಡಲಾಗುವುದು . 

10-12 ನೇ ತರಗತಿಗೆ ನಡೆಯಲಿದೆ ಆಫ್ ಲೈನ್ ಪರೀಕ್ಷೆ:
ಈ ಮೊದಲು ಮಹಾರಾಷ್ಟ್ರ (Maharastra) ಬೋರ್ಡ್ ನ  1 ನೇ ತರಗತಿಯಿಂದ 8 ನೇ ತರಗತಿಯವರೆಗೆ ಎಲ್ಲಾ ವಿದ್ಯಾರ್ಥಿಗಳನ್ನು ಯಾವುದೇ ಪರೀಕ್ಷೆಯಿಲ್ಲದೆ (exam) ಮುಂದಿನ ತರಗತಿಗೆ ಪ್ರಮೋಟ್ ಮಾಡುವುದಾಗಿ ಸರ್ಕಾರ  ಘೋಷಿಸಿತ್ತು. ಇದೀಗ 9 ಮತ್ತು 11 ನೇ ತರಗತಿಯ ವಿದ್ಯಾರ್ಥಿಗಳನ್ನು ಕೂಡಾ ಪರೀಕ್ಷೆಗೆ ಒಳಪಡಿಸದೆ ಮುಂದಿನ ತರಗತಿಗೆ ಬಡ್ತಿ ನೀಡಲಾಗುವುದು ಎಂದು ಸರ್ಕಾರ (government) ಪ್ರಕಟಿಸಿದೆ. ಅಂದರೆ, ಈಗ ಕೇವಲ 10 ಮತ್ತು 12 ನೇ ತರಗತಿಯ ವಿದ್ಯಾರ್ಥಿಗಳು ಮಾತ್ರ ಆಫ್‌ಲೈನ್‌ನಲ್ಲಿ (offline) ಪರೀಕ್ಷೆ ಬರೆಯಬೇಕಾಗಿದೆ.  ಪರೀಕ್ಷಾ ವೇಳಾ ಪಟ್ಟಿಯನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು. 

ಇದನ್ನೂ ಓದಿ : Covid-19- ದೇಶಾದ್ಯಂತ ಇದ್ದಕ್ಕಿದ್ದಂತೆ ಕೋವಿಡ್ -19 ಪ್ರಕರಣ ಹೆಚ್ಚಳದ ಹಿಂದಿನ ಕಾರಣ ಬಿಚ್ಚಿಟ್ಟ ಕೇಂದ್ರ ಆರೋಗ್ಯ ಸಚಿವರು

ಹೊಸ ಪ್ರಕರಣಗಳ ವಿಷಯದಲ್ಲಿ ಮಹಾರಾಷ್ಟ್ರ ವಿಶ್ವದಲ್ಲಿ ಮೂರನೇ ಸ್ಥಾನವನ್ನು ತಲುಪಿದೆ. ಕಳೆದ 24 ಗಂಟೆಗಳ ಅಂಕಿಅಂಶಗಳನ್ನು ನೋಡಿದರೆ, ಮಹಾರಾಷ್ಟ್ರದಲ್ಲಿ 55 ಸಾವಿರ 469 ಹೊಸ ಕರೋನಾ (COVID-19) ಪ್ರಕರಣಗಳು ವರದಿಯಾಗಿವೆ. ಒಂದೇ ದಿನದಲ್ಲಿ 297 ಜನರು ಸಾವನ್ನಪ್ಪಿದ್ದಾರೆ. ಈ ಪೈಕಿ ದೇಶದ ಆರ್ಥಿಕ ರಾಜಧಾನಿಯಾದ ಮುಂಬೈಯಲ್ಲಿಯೇ (Mumbai) 10 ಸಾವಿರ 40 ಪ್ರಕರಣಗಳು ವರದಿಯಾಗಿವೆ.  

ಇದನ್ನೂ ಓದಿ : Lockdown: ಭಾರತದಲ್ಲಿ ಮತ್ತೆ ಒಂದು ತಿಂಗಳು ಲಾಕ್‌ಡೌನ್ ಆದರೆ ಏನಾಗುತ್ತೆ? ಅಮೆರಿಕದ ಕಂಪನಿ ಹೇಳಿದ್ದೇನು?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News