Viral video : ಹಾರಿಕೊಂಡು ನದಿಯನ್ನೇ ದಾಟಿದ ಅಪರೂಪದ ಕೋಳಿ

ಸಾಮಾನ್ಯವಾಗಿ ಕೋಳಿ ಎಷ್ಟು ದೂರ ಹಾರಬಹುದು ಎಂದು ಕೇಳಿದರೆ ಒಂದು ಅಂದಾಜಿನ ಪ್ರಕಾರ ಕೆಲವು ಅಡಿಗಳಷ್ಟು ಮಾತ್ರ ಎಂದು ಹೇಳಬಹುದು.

Written by - Ranjitha R K | Last Updated : Feb 26, 2022, 05:16 PM IST
  • ಕೋಳಿ ಎಷ್ಟು ದೂರ ಹಾರಬಹುದು ?
  • ಇಲ್ಲೊಂದು ಕೋಳಿ ಹಾರಿ ನದಿಯನ್ನೇ ದಾಟಿದೆ
  • ಈ ವಿಡಿಯೋ ನೋಡಿದರೆ ಎಲ್ಲರೂ ಬೆರಗಾಗಲೇ ಬೇಕು.
Viral video : ಹಾರಿಕೊಂಡು  ನದಿಯನ್ನೇ ದಾಟಿದ ಅಪರೂಪದ ಕೋಳಿ title=
ಇಲ್ಲೊಂದು ಕೋಳಿ ಹಾರಿ ನದಿಯನ್ನೇ ದಾಟಿದೆ (photo twitter)

ಬೆಂಗಳೂರು : ಮನೆಯಲ್ಲಿ ಸಾಕಿರುವ ಕೋಳಿಗಳು ಕೆಲವೊಮ್ಮೆ ತುಸು ದೂರದವರೆಗೆ ಹಾರುವುದನ್ನು ನೋಡಿರಬಹುದು. ಇನ್ನು ಕಾಗೆ ಹದ್ದುಗಳು ತಮ್ಮ ಮರಿಗಳನ್ನು ಬೇಟೆಯಾಡಲು ಬಂದಾಗ ಅವುಗಳನ್ನು ಅಟ್ಟಿಸಿಕೊಂಡು ಹೋಗುವಾಗಲೂ ಸ್ವಲ್ಪ ಎತ್ತರಕ್ಕೆ ಹಾರಿರುವ ಕೋಳಿಯನ್ನು ಕೂಡಾ ನೋಡಿರಬಹುದು. ಸಾಮಾನ್ಯವಾಗಿ ಕೋಳಿ ಎಷ್ಟು ದೂರ ಹಾರಬಹುದು ಎಂದು ಕೇಳಿದರೆ ಒಂದು ಅಂದಾಜಿನ ಪ್ರಕಾರ ಕೆಲವು ಅಡಿಗಳಷ್ಟು ಮಾತ್ರ ಎಂದು ಹೇಳಬಹುದು. ಆದರೆ ಇಲ್ಲೊಂದು ಕೋಳಿ ಹಾರಿಕೊಂಡು ಹೋಗಿ ನದಿಯನ್ನೇ ದಾಟಿದೆ (Hen vireal video). 

ಈ ವಿಡಿಯೋ  (Viral Video)ನೋಡಿದರೆ ಎಲ್ಲರೂ ಬೆರಗಾಗಲೇ ಬೇಕು. ಹಾರಲು ಸಾಧ್ಯವಾಗದ ಹಕ್ಕಿ ಎಂದೇ ನಾವು ತಿಳಿದು ಕೊಂಡಿರುವ ಕೋಳಿ ಊಹೆಗೂ ನಿಲುಕದಂತೆ ಹಾರಿ ಬಹುದ ದೂರ ಕ್ರಮಿಸಿದೆ.  ಅತಿದೊಡ್ಡ ನದಿಯ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹಾರಿ ನೋಡುಗರು ಹುಬ್ಬೇರುವಂತೆ ಮಾಡಿದೆ.  ಕೋಳಿ ನದಿ ದಾಟುವ ವಿಡಿಯೋ  ಈಗ ವೈರಲ್ (Hen video)ಆಗುತ್ತಿದೆ. 

ಇದನ್ನೂ ಓದಿ : Viral Video : ಮದುವೆ ಮಂಟಪದಿಂದ ಎದ್ದು 'ಉ ಅಂಟಾವಾ' ಹಾಡಿಗೆ ಸೊಂಟ ಬಳುಕಿಸಿದ ವಧು..! ಡಾನ್ಸ್ ಗೆ ಬ್ರೇಕ್ ಹಾಕಿದ ವರ

ಆ ವಿಡಿಯೋದಲ್ಲಿ ಕೋಳಿಗಳ ಗುಂಪು ನದಿ ದಡದಲ್ಲಿ ಮೇಯುತ್ತಿರುವುದನ್ನು ಕಾಣಬಹುದು. ಇದ್ದಕ್ಕಿದ್ದಂತೆ ಒಂದು ಕೋಳಿಗೆ ಅದೇನಾಯಿತೋ ಗೊತ್ತಿಲ್ಲ, ನದಿಯ ಒಂದು ಬದಿಯಿಂದ ಮತ್ತೊಂದು ಬದಿಗೆ ಹಾರಿ ಬಿಡುತ್ತದೆ.   

 

ಈ ವಿಡಿಯೋದಲ್ಲಿ ಇದೀಗ ಸಾಮಾಜಿಕ ಮಾಧ್ಯಮದಲ್ಲಿ (Social media) ಎಲ್ಲೆಡೆ ಹರಿದಾಡುತ್ತಿದೆ.  ಈ ವಿಡಿಯೋ ನೋಡಿದ ನೆಟ್ಟಿಗರು ಮೂಕವಿಸ್ಮಿತರಾಗಿದ್ದಾರೆ. 

ಇದನ್ನೂ ಓದಿ : Viral Video: ಹೆಂಡತಿಗೆ ಬಸ್ ಹತ್ತಿಸಲು ಗಂಡ ಏನು ಮಾಡಿದ್ದಾನೆ ನೋಡಿ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ  ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News