close

News WrapGet Handpicked Stories from our editors directly to your mailbox

'ಅಮಿತ್ ಭಾಯ್, ನೀವು ನಿಜವಾದ ಕರ್ಮಯೋಗಿ, ಹಾಗೂ ಉಕ್ಕಿನ ಮನುಷ್ಯ'-ಮುಖೇಶ್ ಅಂಬಾನಿ

ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ನಿಜವಾದ ಕರ್ಮಯೋಗಿ ಮತ್ತು  ಉಕ್ಕಿನ ಮನುಷ್ಯ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಮುಖೇಶ್ ಅಂಬಾನಿ ಶ್ಲಾಘಿಸಿದ್ದಾರೆ.

Updated: Aug 30, 2019 , 02:50 PM IST
'ಅಮಿತ್ ಭಾಯ್, ನೀವು ನಿಜವಾದ ಕರ್ಮಯೋಗಿ, ಹಾಗೂ ಉಕ್ಕಿನ ಮನುಷ್ಯ'-ಮುಖೇಶ್ ಅಂಬಾನಿ
Photo courtesy: twitter

ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ನಿಜವಾದ ಕರ್ಮಯೋಗಿ ಮತ್ತು  ಉಕ್ಕಿನ ಮನುಷ್ಯ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಮುಖೇಶ್ ಅಂಬಾನಿ ಶ್ಲಾಘಿಸಿದ್ದಾರೆ.

ಗಾಂಧಿನಗರದ ಪಂಡಿತ್ ದೀಂದಯಾಲ್ ಪೆಟ್ರೋಲಿಯಂ ವಿಶ್ವವಿದ್ಯಾಲಯದ ಸಮಾವೇಶ ಸಮಾರಂಭದಲ್ಲಿ ಮಾತನಾಡಿದ ಮುಖೇಶ್ ಅಂಬಾನಿ 'ಅಮಿತ್ ಭಾಯ್, ನೀವು ನಿಜವಾದ ಕರ್ಮಯೋಗಿ, ಮತ್ತು ನೀವು ನಿಜವಾಗಿಯೂ ನಮ್ಮ ದೇಶದ ಉಕ್ಕಿನ ಮನುಷ್ಯ. ಗುಜರಾತ್, ಮತ್ತು ಈಗ ಭಾರತ ನಿಮ್ಮಂತ ನಾಯಕನನ್ನು ಹೊಂದಲು ಆಶೀರ್ವದಿಸಲಾಗಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಅಮಿತ್ ಶಾ ಕೂಡ ಉಪಸ್ಥಿತರಿದ್ದರು.

ಭಾರತವು ಈಗ ಸುರಕ್ಷಿತ ಕೈಯಲ್ಲಿದೆ ಎಂದ ಮುಖೇಶ್ ಅಂಬಾನಿ, "ನಿಮ್ಮ ಮಹತ್ವಾಕಾಂಕ್ಷೆಗಳ ತಡೆಗೋಡೆಯನ್ನು ಎಂದಿಗೂ ಕಡಿಮೆ ಮಾಡಬೇಡಿ. ದೊಡ್ಡ ಕನಸು ಕಾಣಲು ಎಂದಿಗೂ ಹಿಂಜರಿಯಬೇಡಿ. ನಾಳೆಯ ಭಾರತವು ನಿಮ್ಮ ಮಹತ್ವಾಕಾಂಕ್ಷೆಗಳನ್ನು ಮತ್ತು ಕನಸುಗಳನ್ನು ಈಡೇರಿಸಲು ಸಾಕಷ್ಟು ಅವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಆಶಿಸಿರಿ' ಎಂದು ಅಮಿತ್ ಷಾ ಕುರಿತು ಅಂಬಾನಿ ಮೆಚ್ಚುಗೆ ಸುರಿಮಳೆ ಸುರಿದರು.

ಇದೇ ವೇಳೆ ಮುಖೇಶ್ ಅಂಬಾನಿ ಅವರು ಭಾರತವನ್ನು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ಮಾಡುವ ನರೇಂದ್ರ ಮೋದಿ ಸರ್ಕಾರದ ಮಹತ್ವಾಕಾಂಕ್ಷೆಯ ಗುರಿಯನ್ನು ಬೆಂಬಲಿಸಿದರು.

ಇದೇ ವೇಳೆ  ಅಮಿತ್ ಶಾ ಮಾತನಾಡಿ  '2014 ರವರೆಗೆ ಭಾರತದ ಆರ್ಥಿಕತೆಯನ್ನು ಉಳಿಸುವ ಯಾವುದೇ ಪ್ರಯತ್ನಗಳು ನಡೆದಿಲ್ಲ. ಕಳೆದ ಐದು ವರ್ಷಗಳಲ್ಲಿ ನಾವು ಅದನ್ನು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯನ್ನಾಗಿ ಮಾಡಲು ಸಾಧ್ಯವಾಯಿತು' ಎಂದರು.