ಮುಖೇಶ್ ಅಂಬಾನಿ ಮನೆ ಬಳಿ ಸ್ಪೋಟಕ ಸಾಮಗ್ರಿ ಹೊತ್ತಿದ್ದ ವಾಹನ ಪತ್ತೆ

ಉದ್ಯಮಿ ಮುಖೇಶ್ ಅಂಬಾನಿ ಅವರ ಮನೆಯ ಬಳಿ ಗುರುವಾರ ಸ್ಫೋಟಕ ಸಾಮಗ್ರಿಗಳೊಂದಿಗೆ ಕೈಬಿಡಲಾದ ವಾಹನ ಪತ್ತೆಯಾಗಿದೆ ಎಂದು ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ ಹೇಳಿದ್ದಾರೆ.

Last Updated : Feb 25, 2021, 11:01 PM IST
ಮುಖೇಶ್ ಅಂಬಾನಿ ಮನೆ ಬಳಿ ಸ್ಪೋಟಕ ಸಾಮಗ್ರಿ ಹೊತ್ತಿದ್ದ ವಾಹನ ಪತ್ತೆ

ನವದೆಹಲಿ: ಉದ್ಯಮಿ ಮುಖೇಶ್ ಅಂಬಾನಿ ಅವರ ಮನೆಯ ಬಳಿ ಗುರುವಾರ ಸ್ಫೋಟಕ ಸಾಮಗ್ರಿ ಹೊಂದಿರುವ ವಾಹನ ಪತ್ತೆಯಾಗಿದೆ ಎಂದು ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ ಹೇಳಿದ್ದಾರೆ.

'ಮುಂಬೈನ ಮುಖೇಶ್ ಅಂಬಾನಿ (Mukesh Ambani)ಯ ಮನೆಯಿಂದ ಸ್ವಲ್ಪ ದೂರದಲ್ಲಿ ಕೆಲವು ಜೆಲಾಟಿನ್ ಇರುವ ಸ್ಕಾರ್ಪಿಯೋ ವ್ಯಾನ್ ಪತ್ತೆಯಾಗಿದೆ. ಮುಂಬೈ ಅಪರಾಧ ಶಾಖೆ ಇದರ ಬಗ್ಗೆ ತನಿಖೆ ನಡೆಸುತ್ತಿದೆ.ಸತ್ಯ ಹೊರಬರಲಿದೆ"ಎಂದು ದೇಶ್ಮುಖ್ ಹೇಳಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ, ಕಾರ್ಮೈಕಲ್ ರಸ್ತೆಯಲ್ಲಿ ಗುರುವಾರ ಸಂಜೆ ಅನುಮಾನಾಸ್ಪದ ವಾಹನ ಪತ್ತೆಯಾಗಿದೆ.ಪೊಲೀಸರನ್ನು ಎಚ್ಚರಿಸಲಾಯಿತು ಮತ್ತು ಬಾಂಬ್ ಪತ್ತೆ ಮತ್ತು ವಿಲೇವಾರಿ ದಳ ಅಥವಾ ಬಿಡಿಡಿಎಸ್ ತಂಡ ಮತ್ತು ಇತರ ಪೊಲೀಸ್ ತಂಡಗಳು ತಕ್ಷಣ ಸ್ಥಳಕ್ಕೆ ತಲುಪಿದವು.

ಇದನ್ನೂ ಓದಿ: Worlds Largest Zoo - ವಿಶ್ವದ ಅತಿ ದೊಡ್ಡ ಮೃಗಾಲಯ ತೆರೆಯಲು ಮುಂದಾದ Mukesh Ambani

'ಅವರು ವಾಹನವನ್ನು ಪರಿಶೀಲಿಸಿದಾಗ ಒಳಗೆ 20 ಸ್ಫೋಟಕ ಜೆಲಾಟಿನ್ ತುಂಡುಗಳು ಕಂಡುಬಂದಿವೆ. ಇದು ಜೋಡಿಸಲಾದ ಸ್ಫೋಟಕ ಸಾಧನವಲ್ಲ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ" ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ ನಿನ್ನೆ ರಾತ್ರಿ 1 ಗಂಟೆ ಸುಮಾರಿಗೆ ಕಾರನ್ನು ಪ್ರದೇಶದಲ್ಲಿ ನಿಲ್ಲಿಸಲಾಗಿದೆ.ಆ ಪ್ರದೇಶದಲ್ಲಿ ಭದ್ರತೆ ಹೆಚ್ಚಿಸಲಾಗಿದ್ದು, ಮುಂಬೈ ಪೊಲೀಸರ ಹಿರಿಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: Jeff Bezos Reclaim World Richest Title - ವಿಶ್ವದ ಟಾಪ್ 10 ಧಣಿಗಳ ಪಟ್ಟಿಯಿಂದ Mukesh Ambani ಔಟ್, ನಂ.1 ಧಣಿ ಯಾರು ?

ರಿಲಯನ್ಸ್ ಇಂಡಸ್ಟ್ರೀಸ್ ನ ಅಧ್ಯಕ್ಷರಾದ ಅಂಬಾನಿ, ದಕ್ಷಿಣ ಮುಂಬೈನ ಐಷಾರಾಮಿ ಕುಂಬಲ್ಲಾ ಹಿಲ್ ಪ್ರದೇಶದಲ್ಲಿ ಆಂಟಿಲಿಯಾ ಎಂಬ ಐಷಾರಾಮಿ, 27 ಅಂತಸ್ತಿನ, 400,000 ಚದರ ಅಡಿ ಕಟ್ಟಡದಲ್ಲಿ ವಾಸಿಸುತ್ತಿದ್ದಾರೆ.ಅವರ ಕುಟುಂಬವು 2012 ರಲ್ಲಿ ಕಟ್ಟಡಕ್ಕೆ ಸ್ಥಳಾಂತರಗೊಂಡಿತು.ಚಿಕಾಗೊ ಮೂಲದ ಸಂಸ್ಥೆ ಪರ್ಕಿನ್ಸ್ ಮತ್ತು ವಿಲ್ ವಿನ್ಯಾಸಗೊಳಿಸಿದ ಇದು ಮೂರು ಹೆಲಿಪ್ಯಾಡ್‌ಗಳು, 168 ಕಾರುಗಳ ಗ್ಯಾರೇಜ್, ಬಾಲ್ ರೂಂ, ಒಂಬತ್ತು ಹೈಸ್ಪೀಡ್ ಎಲಿವೇಟರ್‌ಗಳು, 50 ಆಸನಗಳ ಥಿಯೇಟರ್, ಟೆರೇಸ್ ಗಾರ್ಡನ್ಸ್, ಈಜುಕೊಳ, ಸ್ಪಾ, ಹೆಲ್ತ್‌ಸೆಂಟರ್, ದೇವಾಲಯ, ಮತ್ತು ಹಿಮ ಕೋಣೆಯನ್ನು ಒಳಗೊಂಡಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

More Stories

Trending News