ಶಿಮ್ಲಾ: ಹಿಮಾಚಲ ಪ್ರದೇಶದ ಬಿಲಾಸ್ಪುರದಲ್ಲಿ ಶನಿವಾರ ಬೆಳಿಗ್ಗೆ 3.2 ತೀವ್ರತೆಯ ಮಧ್ಯಮ ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪನ (Earthquake) ವು ಬೆಳಿಗ್ಗೆ 10.34ಕ್ಕೆ ಪ್ರದೇಶವನ್ನು ಅಪ್ಪಳಿಸಿತು ಮತ್ತು ಅದರ ಕೇಂದ್ರಬಿಂದು 7 ಕಿ.ಮೀ ಆಳದಲ್ಲಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ತಿಳಿಸಿದೆ.
ಇದಕ್ಕೂ ಮೊದಲು ಹಿಮಾಚಲ ಪ್ರದೇಶದ (Himachal Pradesh) ಚಂಬಾ ಜಿಲ್ಲೆಯಲ್ಲಿ ಶುಕ್ರವಾರ (ಅಕ್ಟೋಬರ್ 23, 2020) 2.7 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
Earthquake of magnitude 3.2 occurred near Himachal Pradesh's Mandi at 10.34 am today: National Centre for Seismology pic.twitter.com/nJloykka7I
— ANI (@ANI) October 24, 2020
ಚಂಬಾ ಜಿಲ್ಲೆಯಲ್ಲಿ ಈಶಾನ್ಯಕ್ಕೆ 5 ಕಿ.ಮೀ ಆಳದಲ್ಲಿ ಭೂಕಂಪದ ಕೇಂದ್ರಬಿಂದು ಇದೆ ಎಂದು ಇಲಾಖೆ ತಿಳಿಸಿದೆ. ಮಧ್ಯಾಹ್ನ 12.15 ಕ್ಕೆ ಜಿಲ್ಲೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭೂಕಂಪದ ಅನುಭವವಾಗಿದೆ ಎಂದು ಹೇಳಲಾಗಿದೆ. ಆದರೆ ಈ ಸಮಯದಲ್ಲಿ ಯಾವುದೇ ಅಪಘಾತ ಅಥವಾ ಆಸ್ತಿಗೆ ಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ.
ಇದಕ್ಕೂ ಮೊದಲು ರಿಕ್ಟರ್ ಮಾಪಕದಲ್ಲಿ 3.6 ತೀವ್ರತೆಯ ಭೂಕಂಪನವು ಸೋಮವಾರ (ಅಕ್ಟೋಬರ್ 19) ಬೆಳಿಗ್ಗೆ 4:44ಕ್ಕೆ ಲಡಾಖ್ ಅನ್ನು ಅಪ್ಪಳಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ತಿಳಿಸಿದೆ.
ಡ್ರಗ್ಸ್ ನ ಮೂಲವಾದ ಹಿಮಾಚಲದಿಂದಲೇ ಕಂಗನಾ ಹೋರಾಟ ಪ್ರಾರಂಭಿಸಲಿ- ಉರ್ಮಿಳಾ ಮಾತೋಂಡ್ಕರ್
10 ಕಿಲೋಮೀಟರ್ ಆಳದಲ್ಲಿ ಕಾರ್ಗಿಲ್‌ನ 110 ಕಿಲೋಮೀಟರ್ ವಾಯುವ್ಯ (ಎನ್‌ಎನ್‌ಡಬ್ಲ್ಯೂ) ಭಾಗದಲ್ಲಿ ಭೂಕಂಪ ಸಂಭವಿಸಿದೆ ಎಂದು ಎನ್‌ಸಿಎಸ್ ತಿಳಿಸಿದೆ. ಘಟನೆಯಲ್ಲಿ ಇದುವರೆಗೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.