ಮಣಿಪುರದ ಉಖ್ರುಲ್‌ನಲ್ಲಿ 4.3 ತೀವ್ರತೆಯ ಭೂಕಂಪ

ಎನ್‌ಸಿಎಸ್ ಪ್ರಕಾರ ಭೂಕಂಪದ ಕೇಂದ್ರಬಿಂದು ಭೂಗತ 10 ಕಿಲೋಮೀಟರ್ ಆಳದಲ್ಲಿತ್ತು.

Last Updated : Oct 7, 2020, 08:30 AM IST
  • ಮಣಿಪುರದ ಉಖ್ರುಲ್ ಜಿಲ್ಲೆಯಲ್ಲಿ ಭೂಕಂಪ
  • ಮುಂಜಾನೆ 3.32ರ ಸುಮಾರಿಗೆ ಭೂಕಂಪದ ಅನುಭವ
  • ರಿಕ್ಟರ್ ಮಾಪಕದಲ್ಲಿ 4.3 ತೀವ್ರತೆ ದಾಖಲು
ಮಣಿಪುರದ ಉಖ್ರುಲ್‌ನಲ್ಲಿ  4.3 ತೀವ್ರತೆಯ ಭೂಕಂಪ title=
File Image

ಉಖ್ರುಲ್: ಪೂರ್ವ ಲೇಹ್ ನಂತರ ಮಣಿಪುರ (Manipur)ದಲ್ಲಿ ಇಂದು (ಬುಧವಾರ) ಭೂಕಂಪ ತಲ್ಲಣ ಸೃಷ್ಟಿಸಿದೆ. ಮಣಿಪುರದ ಉಖ್ರುಲ್ ಜಿಲ್ಲೆಯಲ್ಲಿ ಮುಂಜಾನೆ 3.32ರ ಸುಮಾರಿಗೆ ಭೂಕಂಪದ (Earthquake) ಅನುಭವವಾಗಿದೆ. ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರದ ಪ್ರಕಾರ ಭೂಕಂಪದ ತೀವ್ರತೆಯನ್ನು ರಿಕ್ಟರ್ ಪ್ರಮಾಣದಲ್ಲಿ 4.3 ಎಂದು ಅಳೆಯಲಾಗಿದೆ.

ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ (ಎನ್‌ಸಿಎಸ್) ನೀಡಿದ ಮಾಹಿತಿಯ ಪ್ರಕಾರ -

  • ಭೂಕಂಪದ ತೀವ್ರತೆ (4.3)
  • ಸ್ಥಳ: ಉಖ್ರುಲ್, ಮಣಿಪುರ
  • ಮೂಲ ಸಮಯ: 03:32:56 IST 2020-10-07
  • ಅಕ್ಷಾಂಶ: ಮತ್ತು ರೇಖಾಂಶ: 25.33, 94.44
  • ಮ್ಯಾಗ್ನಿಟ್ಯೂಡ್, ಆಳ ಎಂ: 4.3 - ಡಿ: 10 ಕಿ.ಮೀ.

ಇದಕ್ಕೂ ಮೊದಲು ಪೂರ್ವ ಲೇಹ್‌ (Leh)ನಲ್ಲಿ ಮಂಗಳವಾರ ಲಡಾಕ್‌ನಲ್ಲಿ ಭೂಕಂಪ ಸಂಭವಿಸಿದೆ. ಬೆಳಿಗ್ಗೆ 5.13ಕ್ಕೆ ಪೂರ್ವ ಲೇಹ್‌ನಲ್ಲಿ ನಡುಕದ ಅನುಭವವಾಯಿತು. ಭೂಕಂಪದ ಕೇಂದ್ರಬಿಂದು ಲೇಹ್‌ನಿಂದ ಪೂರ್ವಕ್ಕೆ 174 ಕಿಲೋಮೀಟರ್ ದೂರದಲ್ಲಿತ್ತು. ತೀವ್ರತೆಯನ್ನು 5.1 ಎಂದು ಅಳೆಯಲಾಗಿದೆ. 

Earthquake: ನೇಪಾಳದಲ್ಲಿ ಕಂಪಿಸಿದ ಭೂಮಿ, ಬಿಹಾರದ ಹಲವು ಜಿಲ್ಲೆಗಳಲ್ಲಿಯೂ ಕೂಡ ಭೂಕಂಪದ ಅನುಭವ

ಇದಕ್ಕೂ ಮುನ್ನ ಸೆಪ್ಟೆಂಬರ್ 28ರಂದು ಜಮ್ಮು ಮತ್ತು ಕಾಶ್ಮೀರ (Jammu and Kashmir)ದಲ್ಲಿ 4.2 ತೀವ್ರತೆಯ ಭೂಕಂಪ ಸಂಭವಿಸಿದೆ. ಸೆಪ್ಟೆಂಬರ್ 8 ರಂದು ಲೇಹ್‌ನಲ್ಲಿ ಭೂಕಂಪನವೂ ಉಂಟಾಯಿತು. ಆ ಸಮಯದಲ್ಲಿ ರಿಕ್ಟರ್ ಮಾಪಕದಲ್ಲಿ ಅದರ ತೀವ್ರತೆ 4.4 ರಷ್ಟಿತ್ತು.

Trending News