ನವದೆಹಲಿ: ರಫೇಲ್ ಒಪ್ಪಂದದ ವಿಚಾರವಾಗಿ ಪ್ರಕಟಿಸಿದ ಲೇಖನಕ್ಕೆ ಪ್ರತಿಯಾಗಿ ರಿಲಯನ್ಸ್ ಮುಖ್ಯಸ್ಥ ಅನಿಲ್ ಅಂಬಾನಿ 5000 ಕೋಟಿ ರೂಪಾಯಿಗಳ ಮಾನನಷ್ಟ ಮೊಕದ್ದಮೆ ಕೇಸನ್ನು ನಾಷನಲ್ ಹೆರಾಲ್ಡ್ ಪತ್ರಿಕೆಯ ಮೇಲೆ ಹೂಡಿದ್ದಾರೆ.
ಅನಿಲ್ ಅಂಬಾನಿ ಎರಡು ಕೇಸ್ ಗಳನ್ನು ದಾಖಲು ಮಾಡಿದ್ದು ಒಂದು ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ ಮತ್ತು ಈ ಲೇಖನವನ್ನು ಬರೆದವರ ಮೇಲೆ ಇನ್ನೊಂದು ಗುಜರಾತ್ ಕಾಂಗ್ರೆಸ್ ನಾಯಕ ಶಕ್ತಿ ಸಿನ್ಹಾ ಗೋಹಿಲ್ ವಿರುದ್ದ ಮಾನಹಾನಿಗಾಗಿ 5 ಸಾವಿರ ಕೋಟಿ ರೂ ದ ಮಾನನಷ್ಟ ಮೊಕದ್ದಮೆಯನ್ನು ಹೂಡಿದ್ದಾರೆ.
ಈ ಲೇಖನದಲ್ಲಿ ಅನಿಲ್ ಅಂಬಾನಿಯವರು ಪ್ರಧಾನಿ ಮೋದಿ ರಫೇಲ್ ಒಪ್ಪಂದ ಘೋಷಿಸುವ ಮೊದಲೇ ರಿಲಯನ್ಸ್ ಡಿಫೆನ್ಸ್ ಕಂಪನಿಯನ್ನು ಸ್ಥಾಪಿಸಿದ್ದಾರೆ ಎಂದು ಅದು ಆರೋಪಿಸಿದೆ.ಇದಾದ ನಂತರ ರಿಲಯನ್ಸ್ ಏರೋಸ್ಟ್ರಕ್ಚರ್ ಲಿಮಿಟೆಡ್ ರಾಸಾಲ್ ಜೆಟ್ ತಯಾರಕರಾದ ಡಾಸಾಲ್ಟ್ ಏವಿಯೇಷನ್ ಜೊತೆ ಜಂಟಿಯಾಗಿ ಪ್ರಾರಂಭಿಸಲಾಗಿದೆ. ಭಾರತ ಫ್ರಾನ್ಸ್ ನಿಂದ 36 ರೆಫೆಲ್ ಯುದ್ದ ವಿಮಾನಗಳನ್ನು ಖರಿದಿ ಮಾಡುವ ಒಪ್ಪಂದ ಮಾಡಿಕೊಂಡ ನಂತರ ಜಂಟಿ ಉದ್ಯಮದಲ್ಲಿ ಸುಮಾರು 100 ಮಿಲಿಯನ್ ಯೂರೋ ದಷ್ಟು ಹಣ ತೊಡಗಿಸಲು ಡಿಎ ಮುಂದೆ ಬಂದಿದೆ ಎಂದು ನ್ಯಾಷನಲ್ ಹೆರಾಲ್ಡ್ ಲೇಖನದಲ್ಲಿ ಹೇಳಲಾಗಿದೆ.
ಇನ್ನು ಕಾಂಗ್ರೆಸ್ ಪಕ್ಷವು ಸಹಿತ ರಫೇಲ್ ಒಪ್ಪಂದದ ವಿಚಾರವಾಗಿ ಸ್ವತ ರಾಹುಲ್ ಗಾಂಧಿಯವರು ಹಲವಾರು ಬಾರಿ ಪ್ರಶ್ನಿಸಿದ್ದರು. ಆದರೆ ಇದಕ್ಕೆ ಪ್ರತಿಕ್ರಿಯಿಸಿರುವ ರಿಲಯನ್ಸ್ ಗ್ರೂಪ್ ಈ ಒಪ್ಪಂದಕ್ಕೆ ಸರ್ಕಾರದ ಯಾವುದೇ ಪಾತ್ರವಿಲ್ಲ ಬದಲಾಗಿ ಡಿಎ ನೇರವಾಗಿ ಪಾಲುದಾರನಾಗಿ ರಿಲಯನ್ಸ್ ಗ್ರೂಪ್ ಕಂಪನಿಯನ್ನು ಆರಿಸಿಕೊಂಡಿದೆ ಎಂದು ತಿಳಿಸಿದೆ.