ನವದೆಹಲಿ: ನಮ್ಮಲ್ಲಿ ಸಾಕಷ್ಟು ಮಂದಿ ಯಾವುದೇ ಪೂರ್ವ ಯೋಜನೆ ಇಲ್ಲದೆ ಹಣಕಾಸಿನ ವ್ಯವಹಾರಗಳು, ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ. ಆದರೆ ಹಣಕಾಸಿನ ಸಮಸ್ಯೆ ಎದುರಾದಾಗ ಅವರ ಪರಿಸ್ಥಿತಿ ಹೇಳಲಸಾಧ್ಯ. ಅಂತಹ ಸಂದರ್ಭಗಳು ಎದುರಾಗುವುದಕ್ಕೂ ಮುನ್ನ ಬ್ಯಾಂಕ್ ರಜಾ ದಿನಗಳನ್ನು ಮೊದಲೇ ತಿಳಿದು ಹಣಕಾಸಿನ ವ್ಯವಸ್ಥಿತ ಯೋಜನೆ ಮಾಡಿಕೊಳ್ಳಿ...
ಇವತ್ತು ಆಗಸ್ಟ್ 2 ರಂದು. ಈ ತಿಂಗಳು ಸ್ವಾತಂತ್ರ್ಯ ದಿನಾಚರಣೆ, ರಕ್ಷಾ ಬಂಧನ್, ಬಕ್ರಿದ್, ಶ್ರೀ ಕೃಷ್ಣ ಜನ್ಮಾಷ್ಟಮಿ ಮತ್ತು ಪಾರ್ಸಿ ಹೊಸ ವರ್ಷಗಳು ಇರುವುದರಿಂದ ಬ್ಯಾಂಕುಗಳು ಅಂದು ಕಾರ್ಯನಿರ್ವಹಿಸುವುದಿಲ್ಲ. ಈ ರಜಾ ದಿನಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗಬಹುದು. ಅಂತಹ ಪರಿಸ್ಥಿತಿಯಲ್ಲಿ ನೀವು ಬ್ಯಾಂಕಿನ ಯಾವುದೇ ಕೆಲಸವನ್ನು ಯೋಜಿಸುವ ಮೊದಲು ಆಗಸ್ಟ್ ತಿಂಗಳ ರಜಾದಿನಗಳ ಬಗ್ಗೆ ತಿಳಿಯುವುದು ಅವಶ್ಯಕ.
ಆಗಸ್ಟ್ನಲ್ಲಿ ಬ್ಯಾಂಕ್ಗಳಿಗೆ 11 ದಿನಗಳ ರಜೆ
ರಜಾದಿನಗಳ ಬಗ್ಗೆ ನಿಮಗೆ ಸರಿಯಾದ ಮಾಹಿತಿ ಇದ್ದರೆ, ನೀವು ಬ್ಯಾಂಕ್ ವ್ಯವಹಾರಗಳ ಯೋಜನೆಯನ್ನು ಸಿದ್ಧಪಡಿಸಬಹುದು. ಶನಿವಾರ ಮತ್ತು ಭಾನುವಾರ ಸೇರಿ ಆಗಸ್ಟ್ನಲ್ಲಿ ಒಟ್ಟು 11 ದಿನಗಳು ಬ್ಯಾಂಕ್ ಕಾರ್ಯನಿರ್ವಹಿಸುವುದಿಲ್ಲ. ತಿಂಗಳಲ್ಲಿ ಕೇವಲ 20 ದಿನಗಳು ಬ್ಯಾಂಕ್ ಗಳು ಕಾರ್ಯನಿರ್ವಹಿಸಲಿವೆ. ಆಗಸ್ಟ್ 4, 11, 18 ಮತ್ತು 25 ರಂದು ಭಾನುವಾರ ಆಗಿರುವುದರಿಂದ ಬ್ಯಾಂಕಿಗೆ ರಜೆ ಇರಲಿದೆ.
ಆಗಸ್ಟ್ 10 ಮತ್ತು 24 ರಂದು ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರ
ಇದಲ್ಲದೆ, ಆಗಸ್ಟ್ 10 ಮತ್ತು 24 ರಂದು ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರದಂದು ಬ್ಯಾಂಕ್ ಕಾರ್ಯನಿರ್ವಹಿಸುವುದಿಲ್ಲ. ಈ ಎರಡೂ ದಿನಗಳು ಬ್ಯಾಂಕಿಗೆ ರಜೆ ಇರುತ್ತದೆ. ಆಗಸ್ಟ್ 12ರಂದು, ಈದ್ ಮಿಲಾದ್ ಇರುವುದರಿಂದ ದೇಶಾದ್ಯಂತ ಬ್ಯಾಂಕುಗಳಿಗೆ ರಜೆ ಇರಲಿದೆ. ಆಗಸ್ಟ್ 13ರಂದು ಮಣಿಪುರ, ಜಮ್ಮು ಮತ್ತು ಶ್ರೀನಗರದಲ್ಲಿ ಬ್ಯಾಂಕ್ ರಜೆ ಇರುತ್ತದೆ. ಬಳಿಕ ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನಾಚರಣೆ ಹಾಗೂ ರಕ್ಷಾಬಂಧನ್ ಇರುವುದರಿಂದ ದೇಶಾದ್ಯಂತ ಎಲ್ಲಾ ಬ್ಯಾಂಕುಗಳಿಗೆ ರಜೆ ಇರಲಿದೆ.
ಆಗಸ್ಟ್ 17 ರಂದು ಪಾರ್ಸಿ ಹೊಸ ವರ್ಷ ಆಚರಣೆ ಇರುವುದರಿಂದ ಅಹಮದಾಬಾದ್, ಬೆಲಾಪುರ, ಮುಂಬೈ ಮತ್ತು ನಾಗ್ಪುರದ ಕೆಲವು ಬ್ಯಾಂಕ್ ಗಳಿಗೆ ರಜೆ ಇರಲಿದೆ. ಆಗಸ್ಟ್ 23 ರಂದು ಭುವನೇಶ್ವರ, ಚೆನ್ನೈ, ಡೆಹ್ರಾಡೂನ್, ಹೈದರಾಬಾದ್, ಕಾನ್ಪುರ್, ಲಕ್ನೋ ಮತ್ತು ಪಾಟ್ನಾದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಗೆ ಬ್ಯಾಂಕುಗಳಿಗೆ ರಜೆ ಇರುತ್ತದೆ.