ಬಿಗ್ ನ್ಯೂಸ್! ಭಾರತ, ಚೀನಾ ಮತ್ತು ಪಾಕಿಸ್ತಾನದ ಸೈನಿಕರಿಂದ ಜಂಟಿ ಮಿಲಿಟರಿ ವ್ಯಾಯಾಮ

ಈ ಮಿಲಿಟರಿ ವ್ಯಾಯಾಮದಲ್ಲಿ ರಷ್ಯಾ, ಇರಾನ್, ಈಜಿಪ್ಟ್, ಟರ್ಕಿ ಮತ್ತು ಸಿರಿಯಾವನ್ನು ಹೊರತುಪಡಿಸಿ ಮಧ್ಯಪ್ರಾಚ್ಯದ ಇತರ ಹಲವು ದೇಶಗಳನ್ನು ಸಹ ಸೇರಿಸಿಕೊಳ್ಳಲಾಗುವುದು. 

Last Updated : Aug 17, 2020, 10:33 AM IST
  • 2007 ರಿಂದ ಭಾರತ ಮತ್ತು ಚೀನಾ ನಡುವೆ ಪ್ರತಿವರ್ಷ ಜಂಟಿ ಮಿಲಿಟರಿ ವ್ಯಾಯಾಮ 'ಹ್ಯಾಂಡ್ ಇನ್ ಹ್ಯಾಂಡ್' ಆಯೋಜಿಸಲಾಗಿದೆ.
  • ಈ ಮಿಲಿಟರಿ ವ್ಯಾಯಾಮದಲ್ಲಿ ಒಟ್ಟು 18 ದೇಶಗಳು ಭಾಗವಹಿಸಲಿವೆ.
  • ಈ ಮಿಲಿಟರಿ ವ್ಯಾಯಾಮದಲ್ಲಿ ರಷ್ಯಾ (Russia), ಇರಾನ್, ಈಜಿಪ್ಟ್, ಟರ್ಕಿ ಮತ್ತು ಸಿರಿಯಾವನ್ನು ಹೊರತುಪಡಿಸಿ ಮಧ್ಯಪ್ರಾಚ್ಯದ ಇತರ ಹಲವು ದೇಶಗಳನ್ನು ಸಹ ಸೇರಿಸಿಕೊಳ್ಳಲಾಗುವುದು.
ಬಿಗ್ ನ್ಯೂಸ್! ಭಾರತ, ಚೀನಾ ಮತ್ತು ಪಾಕಿಸ್ತಾನದ ಸೈನಿಕರಿಂದ ಜಂಟಿ ಮಿಲಿಟರಿ ವ್ಯಾಯಾಮ title=

ನವದೆಹಲಿ: ಇಂಡೋ-ಚೀನಾ ಗಡಿಯಲ್ಲಿ ಮೂರೂವರೆ ಸಾವಿರ ಕಿಲೋಮೀಟರ್ ನಿಯಂತ್ರಣ ರೇಖೆಯ ಉದ್ದಕ್ಕೂ ಕಳೆದ ಮೂರು ತಿಂಗಳಿನಿಂದ ಉದ್ವಿಗ್ನತೆ ಹೆಚ್ಚುತ್ತಿದೆ. ಆದರೆ ಸೆಪ್ಟೆಂಬರ್ ತಿಂಗಳಲ್ಲಿ ಉಭಯ ದೇಶಗಳ ಸೈನಿಕರು ಪರಸ್ಪರ ಜಂಟಿ ಮಿಲಿಟರಿ ವ್ಯಾಯಾಮ ಮಾಡುವುದನ್ನು ಕಾಣಬಹುದು. ಸೆಪ್ಟೆಂಬರ್ 16 ರಿಂದ ಸೆಪ್ಟೆಂಬರ್ 26 ರವರೆಗೆ ಭಾರತ, ಚೀನಾ ಮತ್ತು ಪಾಕಿಸ್ತಾನದ (Pakistan) ಸೈನಿಕರು ರಷ್ಯಾದ ಅಸ್ಟ್ರಾಖಾನ್‌ನಲ್ಲಿ ಇತರ ಹಲವು ದೇಶಗಳ ಸೈನಿಕರೊಂದಿಗೆ ಜಂಟಿ ಮಿಲಿಟರಿ ವ್ಯಾಯಾಮದಲ್ಲಿ ಭಾಗವಹಿಸಬಹುದು. ಕವ್ಕಾಜ್ 2020 ಹೆಸರಿನ ಈ ಮಿಲಿಟರಿ ವ್ಯಾಯಾಮದಲ್ಲಿ, ರಷ್ಯಾ ಶಾಂಘೈ ಸಹಕಾರ ಸಂಸ್ಥೆ (ಎಸ್‌ಸಿಒ) ಯ ಎಲ್ಲಾ 8 ದೇಶಗಳನ್ನು ಆಹ್ವಾನಿಸಿದೆ.

ಚೀನಾಕ್ಕೆ ಡಬಲ್ ಆಘಾತ: Alibaba, PubG ಸೇರಿದಂತೆ ಮತ್ತೆ 47 ಆ್ಯಪ್‌ಗಳನ್ನು ನಿಷೇಧಿಸಿದ ಭಾರತ

ಈ ಮಿಲಿಟರಿ ವ್ಯಾಯಾಮದಲ್ಲಿ ಒಟ್ಟು 18 ದೇಶಗಳು ಭಾಗವಹಿಸಲಿವೆ. ಈ ಮಿಲಿಟರಿ ವ್ಯಾಯಾಮದಲ್ಲಿ ರಷ್ಯಾ (Russia), ಇರಾನ್, ಈಜಿಪ್ಟ್, ಟರ್ಕಿ ಮತ್ತು ಸಿರಿಯಾವನ್ನು ಹೊರತುಪಡಿಸಿ ಮಧ್ಯಪ್ರಾಚ್ಯದ ಇತರ ಹಲವು ದೇಶಗಳನ್ನು ಸಹ ಸೇರಿಸಿಕೊಳ್ಳಲಾಗುವುದು. ಈ ಮಿಲಿಟರಿ ವ್ಯಾಯಾಮದಲ್ಲಿ ಭಾರತವು ಮೂರು ಸೇನೆಗಳ ಒಟ್ಟು 178 ಸೈನಿಕರನ್ನು ಕಳುಹಿಸುತ್ತಿದೆ, ಅದರಲ್ಲಿ 140 ಸೈನ್ಯ ಮತ್ತು 38 ವಾಯುಪಡೆ ಮತ್ತು ನೌಕಾಪಡೆಯವರು ಸೇರಿದ್ದಾರೆ. ಇದರಲ್ಲಿ ಮಿತ್ರ ರಾಷ್ಟ್ರಗಳ ಸಹಯೋಗದೊಂದಿಗೆ ಶತ್ರುಗಳೊಂದಿಗಿನ ಯುದ್ಧವನ್ನು ಅಭ್ಯಾಸ ಮಾಡಲಾಗುತ್ತದೆ.

2007 ರಿಂದ ಭಾರತ ಮತ್ತು ಚೀನಾ (Indo-China) ನಡುವೆ ಪ್ರತಿವರ್ಷ ಜಂಟಿ ಮಿಲಿಟರಿ ವ್ಯಾಯಾಮ 'ಹ್ಯಾಂಡ್ ಇನ್ ಹ್ಯಾಂಡ್' ಆಯೋಜಿಸಲಾಗಿದೆ. 'ಹ್ಯಾಂಡ್ ಇನ್ ಹ್ಯಾಂಡ್' ಭಾರತದಲ್ಲಿ ಒಂದು ವರ್ಷ ಮತ್ತು ಇನ್ನೊಂದು ವರ್ಷ ಚೀನಾದಲ್ಲಿ (China) ನಡೆಯುತ್ತದೆ. ಅದೇ ಸಮಯದಲ್ಲಿ ಎಸ್‌ಸಿಒ ಆಯೋಜಿಸಿದ್ದ 2018ರಲ್ಲಿ ರಷ್ಯಾದಲ್ಲಿ ನಡೆದ ಜಂಟಿ ಮಿಲಿಟರಿ ವ್ಯಾಯಾಮದಲ್ಲಿ ಭಾರತ ಮತ್ತು ಪಾಕಿಸ್ತಾನದ ಸೈನಿಕರು ಸೇರಿಕೊಂಡರು.

ಟಿಕ್‌ಟಾಕ್ ಡಿಲೀಟ್ ಮಾಡುವಂತೆ ತನ್ನ ನೌಕರರಿಗೆ ಸೂಚಿಸಿದ ಅಮೆಜಾನ್

ವಿಶೇಷವೆಂದರೆ ಮೇ ತಿಂಗಳಿನಿಂದ ಮೂರೂವರೆ ಸಾವಿರ ಕಿಲೋಮೀಟರ್ ನಿಯಂತ್ರಣ ರೇಖೆಯಲ್ಲಿ ಭಾರತ ಮತ್ತು ಚೀನಾ ನಡುವೆ ಉದ್ವಿಗ್ನತೆ ಉಂಟಾಗಿದೆ. ಮೇ 5 ರಂದು ಲಡಾಖ್‌ನ (Ladakh) ಪಂಗಂಗ್ ಸರೋವರದ ಬಳಿ ಉಭಯ ದೇಶಗಳ ಸೈನಿಕರ ನಡುವೆ ಮಾತಿನ ಚಕಮಕಿ ನಡೆದಿತ್ತು ಮತ್ತು ಅದರ ನಂತರ ಸೈನಿಕರು ಗಾಲ್ವಾನ್ ಕಣಿವೆ ಮತ್ತು ಹಾಟ್ ಸ್ಪ್ರಿಂಗ್ ಸೇರಿದಂತೆ ಅನೇಕ ಸ್ಥಳಗಳಲ್ಲಿ ಮುಖಾಮುಖಿಯಾದರು. ನಂತರ ಜೂನ್ 15 ರಂದು ಗಾಲ್ವಾನ್ ಕಣಿವೆಯಲ್ಲಿ ನಡೆದ ಘರ್ಷಣೆಯಲ್ಲಿ ಭಾರತೀಯ ಸೇನೆಯ 16 ನೇ ಬಿಹಾರ ರೆಜಿಮೆಂಟ್‌ನ ಕಮಾಂಡಿಂಗ್ ಆಫೀಸರ್ ಸೇರಿದಂತೆ ಒಟ್ಟು 20 ಸೈನಿಕರು ಸಾವನ್ನಪ್ಪಿದ್ದರು. ಅದೇ ಸಮಯದಲ್ಲಿ ಚೀನಾದ 45-50 ಸೈನಿಕರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಪ್ರಸ್ತುತ ಲಡಾಖ್‌ನಲ್ಲಿ ಎರಡೂ ದೇಶಗಳ 40 ಸಾವಿರಕ್ಕೂ ಹೆಚ್ಚು ಸೈನಿಕರನ್ನು ಮುಖಾಮುಖಿಯಾಗಿ ನಿಯೋಜಿಸಲಾಗಿದೆ.
 

Trending News