ಅಕ್ಟೋಬರ್ 23 ರಂದು ಬಿಹಾರದಲ್ಲಿ ರಾಹುಲ್ ಗಾಂಧಿ, ತೇಜಸ್ವಿ ಯಾದವ್ ರ್ಯಾಲಿ

ಬಿಹಾರ ವಿಧಾನಸಭಾ ಚುನಾವಣೆ: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮತ್ತು ಆರ್‌ಜೆಡಿ ಮುಖಂಡ ತೇಜಸ್ವಿ ಯಾದವ್ ಅಕ್ಟೋಬರ್ 23 ರಂದು ಜಂಟಿ ರ್ಯಾಲಿಯನ್ನು ನಡೆಸಲಿದ್ದಾರೆ.  

Last Updated : Oct 21, 2020, 05:34 PM IST
  • ಬಿಹಾರ ವಿಧಾನಸಭಾ ಚುನಾವಣೆ: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮತ್ತು ಆರ್‌ಜೆಡಿ ಮುಖಂಡ ತೇಜಸ್ವಿ ಯಾದವ್ ಅಕ್ಟೋಬರ್ 23 ರಂದು ಜಂಟಿ ರ್ಯಾಲಿಯನ್ನು ನಡೆಸಲಿದ್ದಾರೆ.
  • ಮಹಾಘಟಬಂಧನ್ ನಾಯಕರ ಇಂತಹ ರ್ಯಾಲಿ ಮೊದಲಿಗೆ ಅಕ್ಟೋಬರ್ 23 ರಂದು ನಂತರ ಅಕ್ಟೋಬರ್ 28 ರಂದು ನಡೆಯಲಿದೆ.
ಅಕ್ಟೋಬರ್ 23 ರಂದು ಬಿಹಾರದಲ್ಲಿ ರಾಹುಲ್ ಗಾಂಧಿ, ತೇಜಸ್ವಿ ಯಾದವ್ ರ್ಯಾಲಿ title=
Image courtesy: India.com

Bihar Assembly Election 2020: ಬಿಹಾರ ಚುನಾವಣಾ ಪ್ರಚಾರವು ಭರದಿಂದ ಸಾಗಿದೆ. ರಾಜಕೀಯ ಪಕ್ಷಗಳು ಚುನಾವಣಾ ರ್ಯಾಲಿಗಳನ್ನು ನಡೆಸುತ್ತಿವೆ. ಒಂದೆಡೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಜಂಟಿಯಾಗಿ ರ್ಯಾಲಿಗಳನ್ನು ನಡೆಸುತ್ತಿದ್ದರೆ ಮತ್ತೊಂದೆಡೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ (Rahul Gandhi) ಹಾಗೂ ಆರ್‌ಜೆಡಿ ಮುಖಂಡ ಮತ್ತು ಸಿಎಂ ಅಭ್ಯರ್ಥಿ ತೇಜಸ್ವಿ ಯಾದವ್ (Tejashwi Yadav) ಕೂಡ ಬೃಹತ್ ರ್ಯಾಲಿಗಳನ್ನು ಆಯೋಜಿಸಿದ್ದಾರೆ.

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ (Congress) ಮುಖಂಡ ರಾಹುಲ್ ಗಾಂಧಿ ಮತ್ತು ಆರ್‌ಜೆಡಿ (RJD) ಮುಖಂಡ ತೇಜಸ್ವಿ ಯಾದವ್ ಅಕ್ಟೋಬರ್ 23 ರಂದು ತಮ್ಮ ಮೊದಲ ಜಂಟಿ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಮೂಲಗಳು ಬುಧವಾರ ಮಾಹಿತಿ ನೀಡಿವೆ. 

ಬಿಹಾರದಲ್ಲಿ ಮಹಾಗಟಬಂಧನ್ ಪ್ರಣಾಳಿಕೆ ಬಿಡುಗಡೆ: 10 ಲಕ್ಷ ಯುವಕರಿಗೆ ಉದ್ಯೋಗದ ಭರವಸೆ

ಮಹಾಘಟಬಂಧನ್ ನಾಯಕರ ಇಂತಹ ರ್ಯಾಲಿ ಮೊದಲಿಗೆ ಅಕ್ಟೋಬರ್ 23 ರಂದು ಬಿಹಾರದ ನವಾಡಾ ಜಿಲ್ಲೆಯ ಹಿಸುವಾದಲ್ಲಿ ಭವ್ಯ ಮೈತ್ರಿಕೂಟದ ಐಕ್ಯತೆಯನ್ನು ತೋರಿಸಲು ಮತ್ತು ಅಕ್ಟೋಬರ್ 28 ರಂದು ಮೊದಲ ಹಂತದ ಮತದಾನದ ಮೊದಲು ಪಕ್ಷದ ಕಾರ್ಯಕರ್ತರನ್ನು ಪ್ರಚೋದಿಸಲು ನಡೆಯಲಿದೆ ಎಂದು ತಿಳಿದುಬಂದಿದೆ.

ಮಹಾಘಟಬಂಧನ್ ನಾಯಕರು, ಕಾರ್ಯಕರ್ತರು ಒಗ್ಗಟ್ಟಾಗಿದ್ದಾರೆ  ಎಂದು ಬಿಹಾರದ ಮತದಾರರಿಗೆ ಸಂದೇಶ ರವಾನಿಸುವುದು ರ್ಯಾಲಿಯ ಉದ್ದೇಶವಾಗಿದೆ ಎಂದು ಕಾಂಗ್ರೆಸ್ ಮುಖಂಡರೊಬ್ಬರು ಹೇಳಿದ್ದಾರೆ. 

ಬಿಹಾರ ಚುನಾವಣೆಯಲ್ಲಿ ಎನ್‌ಡಿಎ ಪರ 12 ರ್ಯಾಲಿಗಳನ್ನು ನಡೆಸಲಿರುವ ಪ್ರಧಾನಿ ಮೋದಿ

ರಾಷ್ಟ್ರೀಯ ಜನತಾದಳದ ನಾಯಕ ತೇಜಸ್ವಿ ಯಾದವ್ ಅವರ ತಂದೆ ಲಾಲು ಪ್ರಸಾದ್ ಯಾದವ್ ಅವರ ಅನುಪಸ್ಥಿತಿಯ ಹೊರತಾಗಿಯೂ ಭಾರಿ ಜನಸಂದಣಿಯನ್ನು ಸೆಳೆಯುತ್ತಿದ್ದಾರೆ. ಜಂಟಿ ರ್ಯಾಲಿಯು ಧಾರ್ಮಿಕ ಅಲ್ಪಸಂಖ್ಯಾತರಿಗೆ ಅವರು ಒಗ್ಗಟ್ಟಿನಿಂದ ಇರಬೇಕು ಎಂಬ ಸಂದೇಶವನ್ನು ರವಾನಿಸುತ್ತದೆ ಎಂದು ಆರ್‌ಜೆಡಿ ನಾಯಕರೊಬ್ಬರು ಹೇಳಿದರು.
 

Trending News