ಬಿಜೆಪಿ ಮೈತ್ರಿ ಸರ್ಕಾರವನ್ನು 'ದಲಿತ ವಿರೋಧಿ' ಎಂದ ಬಿಜೆಪಿ ಶಾಸಕ!

    

Last Updated : May 1, 2018, 11:55 PM IST
ಬಿಜೆಪಿ ಮೈತ್ರಿ ಸರ್ಕಾರವನ್ನು 'ದಲಿತ ವಿರೋಧಿ' ಎಂದ ಬಿಜೆಪಿ ಶಾಸಕ!  title=

ನವದೆಹಲಿ: ಜಮ್ಮು ಮತ್ತು ಕಾಶ್ಮೀರ ಸಚಿವ ಸಂಪುಟದಲ್ಲಿ  ಸೇರ್ಪಡೆ ಮಾಡದ ಕಾರಣ  ಅಸಮಾಧಾನಗೊಂಡಿರುವ  ಬಿಜೆಪಿ ಶಾಸಕ  ದಿನಾನಾಥ್ ಭಗತ್  ಪಿಡಿಪಿ-ಬಿಜೆಪಿ ಒಕ್ಕೂಟದ ಸರ್ಕಾರ 'ದಲಿತ ವಿರೋಧಿ' ಮತ್ತು ಜಮ್ಮು ವಿರೋಧಿ ಎಂದು ತಿಳಿಸಿದ್ದಾರೆ.

ಈ ಕುರಿತಾಗಿ ಎಎನ್ಐ ಗೆ ಪ್ರತಿಕ್ರಿಯಿಸಿರುವ ಅವರು "ಬಿಜೆಪಿ-ಪಿಡಿಪಿ ಮೈತ್ರಿಕೂಟದ ಸರ್ಕಾರವು ಜಮ್ಮು ಮತ್ತು  ದಲಿತರ ವಿರೋಧಿ ಸರ್ಕಾರ. ಅವರು ದೆಹಲಿಯಲ್ಲಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಆದರೆ ಜಮ್ಮುನಲ್ಲಿ ಯಾವುದೇ  ಕೆಲಸ ಮಾಡಿಲ್ಲ" ಎಂದು ಭಗತ್ ತಮ್ಮ ಅಸಮಧಾನ ಸೂಚಿಸಿದರು.

ಇದೇ ಸಂದರ್ಭದಲ್ಲಿ ಅವರು ಕತುವಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಕುರಿತಾಗಿ ವಿವಾದಾತ್ಮಕ ಹೇಳಿಕೆ ಉಪಮುಖ್ಯಮಂತ್ರಿ ಕವಿಂದರ್ ಗುಪ್ತಾ ಅವರ ಮೇಲೆ ಕಿಡಿಕಾರಿರುವ ಭಗತ್ ಅವರು "ಇತ್ತೀಚೆಗೆ ಉಪಮುಖ್ಯಮಂತ್ರಿಗಳು ಕತುವಾ ಘಟನೆಯು ಸಣ್ಣ ಸಂಗತಿ ಎಂದು ಹೇಳಿದ್ದಾರೆ. ಇದನ್ನು , ಆನಾನು ಖಂಡಿಸುತ್ತೇನೆ" ಎಂದು ಅವರು ತಿಳಿಸಿದ್ದಾರೆ.

ಇತ್ತೀಚಿಗೆ ಜಮ್ಮು ಮತ್ತು ಕಾಶ್ಮೀರ ಸಚಿವ ಸಂಪುಟ  ಏಪ್ರಿಲ್ 30 ರಂದು ಪ್ರಮುಖ ಪುನರ್ ರಚನೆಗೊಂಡಿತ್ತು ಈ ಸಂದರ್ಭದಲ್ಲಿ 8 ಹೊಸಮುಖಗಳನ್ನು ಸಂಪುಟದಲ್ಲಿ ಸೇರಿಸಲಾಗಿದೆ. 

Trending News