BUDGET 2020: ಕೇಂದ್ರ ಬಜೆಟ್‌ ಮೇಲಿನ ನಿರೀಕ್ಷೆಗಳಿವು!

ಮುಂಬರುವ ಆರ್ಥಿಕ ವರ್ಷದ ಕೇಂದ್ರ ಬಜೆಟ್ ಅನ್ನು ಫೆಬ್ರವರಿ 1 ಮಂಡಿಸಲಾಗುವುದು. ಪ್ರತಿಯೊಂದು ಕ್ಷೇತ್ರಕ್ಕೂ ಸಂಬಂಧಿಸಿದಂತೆ ಜನರಿಗೆ ಈ ಬಜೆಟ್‌ನಲ್ಲಿ ಹಣಕಾಸು ಸಚಿವರಿಂದ ಸಾಕಷ್ಟು ಭರವಸೆ ಇದೆ.   

Last Updated : Jan 15, 2020, 01:54 PM IST
BUDGET 2020: ಕೇಂದ್ರ ಬಜೆಟ್‌ ಮೇಲಿನ ನಿರೀಕ್ಷೆಗಳಿವು! title=

ನವದೆಹಲಿ: ಮುಂಬರುವ ಆರ್ಥಿಕ ವರ್ಷದ ಕೇಂದ್ರ ಬಜೆಟ್ ಅನ್ನು ಫೆಬ್ರವರಿ 1 ಮಂಡಿಸಲಾಗುವುದು. ಪ್ರತಿಯೊಂದು ಕ್ಷೇತ್ರಕ್ಕೂ ಸಂಬಂಧಿಸಿದಂತೆ ಜನರಿಗೆ ಈ ಬಜೆಟ್‌ನಲ್ಲಿ ಹಣಕಾಸು ಸಚಿವರಿಂದ ಸಾಕಷ್ಟು ನಿರೀಕ್ಷೆಗಳಿವೆ. ಇಂದು ನಾವು ನಿಮಗೆ ದೇಶದ ಜನತೆಯ ನಿರೀಕ್ಷೆಗಳ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ. ನಮ್ಮ  ಸಹೋದ್ಯೋಗಿ ವೆಬ್ಸೈಟ್ ಝೀ ಬಿಜ್ ಅವರ ಪ್ರಕಾರ ದೇಶದಲ್ಲಿ ಬಜೆಟ್‌ಗೆ ಸಂಬಂಧಿಸಿದಂತೆ ವಿವಿಧ ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಅವುಗಳ ಆಧಾರದ ಮೇಲೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಂದ ದೇಶದ ನಾಗರಿಕರು ಏನು ಬಯಸುತ್ತಾರೆಂಬುದರ ಒಂದು ನೋಟ...

ಮಧ್ಯಮ ವರ್ಗದ ನಿರೀಕ್ಷೆಗಳು:
- 10 ಲಕ್ಷ ರೂ.ವರೆಗಿನ ಆದಾಯದ ಮೇಲೆ 10% ತೆರಿಗೆ ಸ್ಲ್ಯಾಬ್ ಸಾಧ್ಯ.
- 80 ಸಿ ಅಡಿಯಲ್ಲಿ ತೆರಿಗೆ ವಿನಾಯಿತಿ 1.5 ಲಕ್ಷದಿಂದ 2.5 ಲಕ್ಷ ರೂಪಾಯಿಗೆ ಹೆಚ್ಚಿಸುವ ನಿರೀಕ್ಷೆ.
ಗಮನಿಸಿ: ಪ್ರಸ್ತುತ, 5 ಲಕ್ಷದವರೆಗೆ ಆದಾಯದ ಮೇಲೆ ಯಾವುದೇ ತೆರಿಗೆ ವಿಧಿಸುವುದಿಲ್ಲ.

ಮಹಿಳೆಯರ ನಿರೀಕ್ಷೆಗಳು:
- ಸೆಕ್ಷನ್ 64 ರ ಅಡಿಯಲ್ಲಿ ಕ್ಲಬ್ಬಿಂಗ್ ನಿಬಂಧನೆಯಿಂದ ವಿನಾಯಿತಿ ಪಡೆಯುವುದು.
- ಸೆಕ್ಷನ್ 80 ಟಿಟಿಬಿಯಲ್ಲಿ ಮಹಿಳೆಯರನ್ನು ಕೂಡ ಸೇರಿಸಬೇಕು.
- 80 ಟಿಟಿಬಿಯಲ್ಲಿ ಹಿರಿಯ ನಾಗರಿಕರಿಗೆ 50 ಸಾವಿರ ರೂಪಾಯಿ ಹೆಚ್ಚುವರಿ ರಿಯಾಯಿತಿ.
- ಸುಕನ್ಯಾ ಸಮೃದ್ಧಿ ಯೋಜನೆ ಖಾತೆ ತೆರೆಯುವ ಮಿತಿ 10 ರಿಂದ 15 ವರ್ಷಗಳು.

ಸಣ್ಣ ವ್ಯಾಪಾರಿಗಳ ನಿರೀಕ್ಷೆಗಳು:
- ಸೆಕ್ಷನ್ 44 ಎಡಿ ಯಲ್ಲಿ 2 ಕೋಟಿ ರೂ. ವರೆಗೆ ತೆರಿಗೆ ವ್ಯಾಪ್ತಿ 
- ವಹಿವಾಟು ತೆರಿಗೆ ಮಿತಿ 5 ಕೋಟಿ ರೂ. (ಪ್ರಸ್ತುತ 2 ಕೋಟಿ ರೂ.ವರೆಗಿನ ವ್ಯವಹಾರಕ್ಕಾಗಿ ತೆರಿಗೆ ನಿಯಮಗಳ ಪ್ರಕಾರ 6% ತೆರಿಗೆ ವಿಧಿಸಲಾಗುತ್ತಿದೆ.)
- 1 ಕೋಟಿ ರೂಪಾಯಿಗಳ ವಹಿವಾಟಿನ ಮೇಲೆ ಟಿಡಿಎಸ್ ನಿಯಮದಲ್ಲಿ ವಿನಾಯಿತಿ
- ಸಣ್ಣ ವ್ಯಾಪಾರಿಗಳ ನಗದು ವಹಿವಾಟು ನಿಯಮಗಳು ಇನ್ನಷ್ಟು ಸುಲಭವಾಗುವ ನಿರೀಕ್ಷೆ.

ವಿನಾಯಿತಿಯಲ್ಲಿ ಪರಿಹಾರ?
- ಸೆಪ್ಟೆಂಬರ್ 20 ರಂದು ಕಂಪನಿಯ ತೆರಿಗೆಯಲ್ಲಿ ಎರಡು ರೀತಿಯ ಸ್ಲಾಬ್ ಗಳನ್ನು ಪರಿಚಯಿಸಲಾಯಿತು.
- ಕಂಪನಿಯು ಕಡಿತವನ್ನು ತೆಗೆದುಕೊಳ್ಳದಿದ್ದರೆ, ಸ್ಲಾಬ್ 22 ಪ್ರತಿಶತ.
- ಕಂಪನಿಯು ಕಡಿತವನ್ನು ತೆಗೆದುಕೊಂಡರೆ ಸ್ಲಾಬ್ 30 ಪ್ರತಿಶತ.
- ನೀವು ಯಾವುದೇ ವಿನಾಯಿತಿ, ಕಡಿತವನ್ನು ಪಡೆಯದಿದ್ದರೆ, ಕಡಿಮೆ ತೆರಿಗೆ ದರ.
- ವಿನಾಯಿತಿ, ಕಡಿತದ ಹಕ್ಕಿನ ಮೇಲೆ ಹೆಚ್ಚಿನ ತೆರಿಗೆ ದರ ಸಾಧ್ಯ.

ನಿರೀಕ್ಷೆಗಳು ಮತ್ತು ಸವಾಲುಗಳು:
- ಈ ವರ್ಷ ಕ್ರಾಂತಿಕಾರಿ ಬಜೆಟ್ ನಿರೀಕ್ಷೆ.
- ಜಿಡಿಪಿಗೆ ಹೊಸ ಆವೇಗವನ್ನು ನೀಡುವ ಬಜೆಟ್ ನಿರೀಕ್ಷೆ.
- ನಿಧಾನಗತಿಯ ಆರ್ಥಿಕತೆಯನ್ನು ಮರಳಿ ತರಲು ಬಜೆಟ್ನಲ್ಲಿ ಯಾವ ರೀತಿ ಕ್ರಮ ಕೈಗೊಳ್ಳಬಹುದು.
- ಸರ್ಕಾರದ ಮುಂದೆ ಎರಡು ದೊಡ್ಡ ಸವಾಲುಗಳಿವೆ. ನಿಧಾನ ತೆರಿಗೆ ಸಂಗ್ರಹ ಮತ್ತು ನಿಧಾನಗತಿಯ ಆರ್ಥಿಕತೆಯು ಪ್ರಮುಖ ಸವಾಲುಗಳಾಗಿವೆ.
- ತೆರಿಗೆ, ಕಾರ್ಮಿಕ ಮತ್ತು ಭೂ ಸುಧಾರಣೆಯ ಬಗ್ಗೆ ಬಜೆಟ್‌ನಲ್ಲಿ ಪ್ರಕಟಣೆ ಸಾಧ್ಯತೆ.

Trending News