Indian Railways: ರೈಲು ಪ್ರಯಾಣದ ವೇಳೆ ಈ ತಪ್ಪುಗಳನ್ನು ಮಾಡಿದರೆ ಹುಷಾರ್

Indian Railways: ರೈಲು ಪ್ರಯಾಣದ ವೇಳೆ ಪ್ರಯಾಣಿಕರು ಬಹಳ ಎಚ್ಚರದಿಂದಿರುವುದು ಅತ್ಯಗತ್ಯ. ಒಂದು ವೇಳೆ ನೀವು ರೈಲಿನಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ರೈಲ್ವೆ ನಿಷೇಧಿಸಿದ ವಸ್ತುಗಳೊಂದಿಗೆ ಪ್ರಯಾಣಿಕನು ಪ್ರಯಾಣಿಸುತ್ತಿರುವುದು ಕಂಡುಬಂದರೆ ಭಾರೀ  ಬೆಲೆ ತೆರಬೇಕಾಗಬಹುದು. ಇದರೊಂದಿಗೆ ಮೂರು ವರ್ಷಗಳವರೆಗೆ ಸೆರೆವಾಸವನ್ನೂ ಅನುಭವಿಸಬೇಕಾಗುತ್ತದೆ.

Written by - Yashaswini V | Last Updated : Apr 2, 2021, 01:10 PM IST
  • ಪ್ರಯಾಣಿಕರು ರೈಲು ವಿಭಾಗದಲ್ಲಿ ಬೆಂಕಿಯನ್ನು ಹರಡುವ ಯಾವುದೇ ಸುಡುವ ವಸ್ತುಗಳೊಂದಿಗೆ ಪ್ರಯಾಣಿಸಬಾರದು
  • ಇದು ಶಿಕ್ಷಾರ್ಹ ಅಪರಾಧ
  • ಇದು ಕಾನೂನು ಕ್ರಮ ಮತ್ತು ಜೈಲು ಶಿಕ್ಷೆಗೂ ಕಾರಣವಾಗಬಹುದು
Indian Railways: ರೈಲು ಪ್ರಯಾಣದ ವೇಳೆ ಈ ತಪ್ಪುಗಳನ್ನು ಮಾಡಿದರೆ ಹುಷಾರ್ title=
Indian Railways ban flammable goods

ನವದೆಹಲಿ : ಈ ದಿನಗಳಲ್ಲಿ ರೈಲಿನಲ್ಲಿ ಬೆಂಕಿ ಅವಘಡದಂತಹ ಘಟನೆಗಳು ಹಲವು ಬಾರಿ ಕಂಡುಬಂದಿವೆ. ಇತ್ತೀಚೆಗೆ ನವದೆಹಲಿ-ಡೆಹ್ರಾಡೂನ್ ಶತಾಬ್ದಿ ಎಕ್ಸ್‌ಪ್ರೆಸ್ (Delhi-Dehradun Shatabdi Express) ನ ಕೋಚ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅದೇ ಸಮಯದಲ್ಲಿ, ಗಾಜಿಯಾಬಾದ್ ನಿಲ್ದಾಣದಲ್ಲಿ ಹಲವಾರು ಬಾರಿ ರೈಲಿನಲ್ಲಿ ಅಗ್ನಿ ಅವಘಡದ ಘಟನೆಗಳು ವರದಿಯಾಗಿವೆ. ಈ ಘಟನೆಗಳ ದೃಷ್ಟಿಯಿಂದ ಭಾರತೀಯ ರೈಲ್ವೆ ಪ್ರಯಾಣಿಕರಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದೆ.

ಟ್ವೀಟ್ ಮೂಲಕ ಮಾಹಿತಿ ನೀಡಿದ ರೈಲ್ವೆ:
ರೈಲಿನಲ್ಲಿ ಪ್ರಯಾಣದ ಸಮಯದಲ್ಲಿ ಪ್ರಯಾಣಿಕರು ಭಾರತೀಯ ರೈಲ್ವೆ (Indian Railways) ನಿಷೇಧಿಸುವ ಸುಡುವ ಸರಕುಗಳು ಒಯ್ಯಬಾರದು ಅಥವಾ ಅದನ್ನು ಸಾಗಿಸಲು ಯಾರಿಗೂ ಅವಕಾಶ ನೀಡಬಾರದು. ಇದು ಶಿಕ್ಷಾರ್ಹ ಅಪರಾಧ. ಇಂತಹ ತಪ್ಪಿಗೆ ಕಾನೂನು ಕ್ರಮ ಮತ್ತು ಜೈಲು ಶಿಕ್ಷೆ ಅನುಭವಿಸಬೇಕಾಗಬಹುದು  ಎಂದು ರೈಲ್ವೆ ಟ್ವೀಟ್ ಮಾಡಿದೆ. 

ಪಶ್ಚಿಮ ಮಧ್ಯ ರೈಲ್ವೆಯ ಪ್ರಕಾರ, ರೈಲಿನಲ್ಲಿ ಬೆಂಕಿ ಅಥವಾ ಸುಡುವ ವಸ್ತುಗಳನ್ನು ಹರಡುವುದು 1989 ರ ರೈಲ್ವೆ ಕಾಯ್ದೆಯ ಸೆಕ್ಷನ್ 164 ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿದೆ.  ರೈಲ್ವೆ (Railways) ನಿಷೇಧಿಸಿದ ವಸ್ತುಗಳೊಂದಿಗೆ ಪ್ರಯಾಣಿಕನು ಪ್ರಯಾಣಿಸುತ್ತಿರುವುದು ಕಂಡುಬಂದರೆ ಭಾರೀ  ಬೆಲೆ ತೆರಬೇಕಾಗಬಹುದು. ಇದಕ್ಕಾಗಿ ಸಾವಿರ ರೂಪಾಯಿವರೆಗೆ ದಂಡ ಮತ್ತು ಜೊತೆಗೆ ಮೂರು ವರ್ಷಗಳವರೆಗೆ ಸೆರೆವಾಸವನ್ನೂ ಅನುಭವಿಸಬೇಕಾಗುತ್ತದೆ.

ಇದನ್ನೂ ಓದಿ - Indian Railways: ರೈಲಿನಲ್ಲಿ ನಿಮ್ಮ ಸಾಮಾನು ಕಳುವಾದರೆ, ಹೀಗೆ ಮಾಡಿ

ರೈಲಿನಲ್ಲಿ ಇವುಗಳನ್ನು ನಿಷೇಧಿಸಲಾಗಿದೆ :
ಭಾರತೀಯ ರೈಲ್ವೆಯ (Indian Railways) ಟ್ವೀಟ್‌ನ ಪ್ರಕಾರ, ಸೀಮೆಎಣ್ಣೆ, ಒಣಹುಲ್ಲು, ಒಲೆ, ಪೆಟ್ರೋಲ್, ಗ್ಯಾಸ್ ಸಿಲಿಂಡರ್‌ಗಳು, ಬೆಂಕಿಕಡ್ಡಿಗಳು, ಪಟಾಕಿಗಳು ಅಥವಾ ರೈಲು ವಿಭಾಗದಲ್ಲಿ ಬೆಂಕಿಯನ್ನು ಹರಡುವ ಯಾವುದೇ ಸುಡುವ ವಸ್ತುಗಳೊಂದಿಗೆ ಪ್ರಯಾಣಿಸಬಾರದು ಎಂಬ ಕಟ್ಟುನಿಟ್ಟಿನ ಎಚ್ಚರಿಕೆ ಇದೆ. ರೈಲಿನಲ್ಲಿ ಪ್ರಯಾಣಿಸುವ ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿ ಪ್ರಯಾಣಿಸಲು ಈ ನಿಯಮಗಳನ್ನು ಜಾರಿಗೆ ತರಲಾಗಿದೆ.

ಇದನ್ನೂ ಓದಿ - Indian Railway Recruitment 2021: 10ನೇ ತರಗತಿ ಪಾಸ್ ಆದವರಿಗೆ ಬಂಪರ್ ಉದ್ಯೋಗಾವಕಾಶ

ರೈಲ್ವೆ ಆವರಣದಲ್ಲಿ ಧೂಮಪಾನ ಮಾಡುವುದು ಅಪರಾಧ :
ಅಷ್ಟೇ ಅಲ್ಲ, ಬೆಂಕಿಯ ಘಟನೆಗಳನ್ನು ನಿಯಂತ್ರಿಸಲು ರೈಲ್ವೆ ಜಾರಿಗೊಳಿಸಿರುವ ನಿಯಮಗಳ ಪ್ರಕಾರ ಯಾವುದೇ ವ್ಯಕ್ತಿ ರೈಲಿನಲ್ಲಿ ಅಥವಾ ರೈಲ್ವೆ ಆವರಣದಲ್ಲಿ ಧೂಮಪಾನ ಮಾಡುತ್ತಿದ್ದರೆ, ಆತನಿಗೆ ದಂಡ ವಿಧಿಸಲಾಗುವುದು. ಇದರೊಂದಿಗೆ ಜೈಲಿಗೆ ಹಾಕಬಹುದು. ರೈಲ್ವೆ ಆವರಣದಲ್ಲಿ ಧೂಮಪಾನ ಮಾಡುವುದು ಶಿಕ್ಷಾರ್ಹ ಅಪರಾಧ. ಹಾಗೆ ಕಂಡುಬಂದರೆ, ಪ್ರಯಾಣಿಕರಿಗೆ 200 ರೂಪಾಯಿಗಳವರೆಗೆ ದಂಡ ವಿಧಿಸಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News