ನವದೆಹಲಿ: ಖ್ಯಾತ ಅರ್ಥಶಾಸ್ತ್ರಜ್ಞ ಹಾಗೂ ಮಾಜಿ ಪ್ರಧಾನಮಂತ್ರಿ ಡಾ. ಮನಮೋಹನ್ ಸಿಂಗ್ ಅವರಿಗೆ ನೀಡಲಾಗಿದ್ದ ಉನ್ನತ ವಿಶೇಷ ಭದ್ರತಾ ದಳ(ಎಸ್‌ಪಿಜಿ) ಭದ್ರತೆಯನ್ನು ಕೇಂದ್ರ ಸರ್ಕಾರ ಹಿಂಪಡೆದಿದೆ. ಆದಾಗ್ಯೂ, ಈಗ ಅವರಿಗೆ Z ಪ್ಲಸ್ ರಕ್ಷಣೆ ಸಿಕ್ಕಿದೆ. ಕಾಲಕಾಲಕ್ಕೆ ಇದು ಸಾಮಾನ್ಯ ಪ್ರಕ್ರಿಯೆ ಎಂದು ಗೃಹ ಸಚಿವಾಲಯದ ಪರವಾಗಿ ಹೇಳಲಾಗಿದೆ.
ಇದು ವೃತ್ತಿಪರ ಮೌಲ್ಯಮಾಪನ ಮತ್ತು ಭದ್ರತಾ ಸಂಸ್ಥೆಗಳ ಬೆದರಿಕೆಯನ್ನು ಆಧರಿಸಿದ ಪ್ರಕ್ರಿಯೆಯಾಗಿದೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ Z ಪ್ಲಸ್ ಭದ್ರತೆ ಮುಂದುವರಿಯಲಿದೆ ಎಂದು ಗೃಹ ಸಚಿವಾಲಯ ಹೇಳಿದೆ.
ಇದಕ್ಕೂ ಮೊದಲು ಮಾಜಿ ಪ್ರಧಾನಮಂತ್ರಿಗಳಾದ ಹೆಚ್.ಡಿ. ದೇವೇಗೌಡ ಮತ್ತು ವಿ.ಪಿ. ಸಿಂಗ್ ಅವರ ಎಸ್‌ಪಿಜಿ ಭದ್ರತೆಯನ್ನು ಕೇಂದ್ರ ಸರ್ಕಾರ ಹಿಂಪಡೆದಿತ್ತು.
ಎಸ್‌ಪಿಜಿ ಭದ್ರತೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತವರ ಮಕ್ಕಳು ಹಾಗೂ ದೇಶದ ಅತ್ಯಂತ ಸಂರಕ್ಷಿತ ರಾಜಕಾರಣಿಗಳಿಗೆ ನೀಡಲಾಗುತ್ತದೆ.
ಬೆದರಿಕೆಯ ಗ್ರಹಿಕೆಯಲ್ಲಿ ಮಾಜಿ ಪ್ರಧಾನಮಂತ್ರಿಗಳು ಹಾಗೂ ಅವರ ಕುಟುಂಬದವರಿಗೆ ಎಸ್‌ಪಿಜಿ ಭದ್ರತೆ ನೀಡಲಾಗುತ್ತದೆ.