ಚಂದ್ರಗ್ರಹಣದಂದು ಶಿಶುಬಲಿ? ಮನೆ ಮೇಲ್ಚಾವಣಿಯಲ್ಲಿ ಕತ್ತರಿಸಿದ ಸ್ಥಿತಿಯಲ್ಲಿ ಶಿಶು ತಲೆ ಪತ್ತೆ!

 ಚಂದ್ರ ಗ್ರಹಣದ ಹಿನ್ನೆಲೆಯಲ್ಲಿ ಶಿಶುಬಲಿ ನಡೆದಿರುವ ಶಂಕೆಯಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. 

Last Updated : Feb 3, 2018, 01:21 PM IST
ಚಂದ್ರಗ್ರಹಣದಂದು ಶಿಶುಬಲಿ? ಮನೆ ಮೇಲ್ಚಾವಣಿಯಲ್ಲಿ ಕತ್ತರಿಸಿದ ಸ್ಥಿತಿಯಲ್ಲಿ ಶಿಶು ತಲೆ ಪತ್ತೆ!

ಹೈದರಾಬಾದ್: ಇಲ್ಲಿನ ಚಿಲುಕಾ ನಗರದ ಮನೆಯ ಟೆರೇಸ್ನಲ್ಲಿ ಮಗುವಿನ ತಲೆ ಕತ್ತರಿಸಿದ ಸ್ಥಿತಿಯಲ್ಲಿ ಗುರುವಾರ ಪತ್ತೆಯಾಗಿದ್ದು, ಚಂದ್ರ ಗ್ರಹಣದ ಹಿನ್ನೆಲೆಯಲ್ಲಿ ಶಿಶುಬಲಿ ನಡೆದಿರುವ ಶಂಕೆಯಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. 

ಗುರುವಾರ ಬೆಳಿಗ್ಗೆ ಮನೆಯಲ್ಲಿ ಬಾಡಿಗೆಗೆ ಇರುವ ಮಹಿಳೆಯು ಮನೆಯ ಟೆರೇಸ್ ಮೇಲೆ ಬಟ್ಟೆ ಒಣಹಾಕಲು ತೆರಳಿದಾಗ ಮಗುವಿನ ತಲೆ ಭಾಗವನ್ನು ಕಂಡು ಚೀರಿಕೊಂಡಿದ್ದು, ಕೂಡಲೇ ಪೊಲೀಸರಿಗೆ ತಿಳಿಸಿದ್ದಾರೆ ಎನ್ನಲಾಗಿದೆ. 

ಮಗುವಿನ ವಯಸ್ಸು 2 ಅಥವಾ 3 ತಿಂಗಳಿರಬಹುದು ಎಂದು ಅಂದಾಜಿಸಲಾಗಿದ್ದು, ಈ ಕುರಿತು ಯಾವುದೇ ಸ್ಪಷ್ಟ ಮಾಹಿತಿ ಇಲ್ಲ ಎನ್ನಲಾಗಿದೆ. 

ಕ್ಯಾಬ್ ಡ್ರೈವರ್ ಆಗಿರುವ ಮಹಿಳೆಯ ಅಳಿಯ ರಾಜಶೇಖರ್ ಸೇರಿದಂತೆ ಇಬ್ಬರು ನೆರೆಹೊರೆಯವರನ್ನು ಪೊಲೀಸರು ವಿಚಾರಣೆಗಾಗಿ ಬಂಧಿಸಿದ್ದಾರೆ. 

ಮನೆಯ ಟೆರೇಸ್ನಲ್ಲಿ ಯಾವುದೇ ರಕ್ತದ ಗುರುತುಗಳು ಇಲ್ಲದ ಕಾರಣ ಶಿರಚ್ಛೇದನದ ನಂತರ ತಲೆಯನ್ನು ಇಡಲಾಗಿದೆ ಎಂಡು ಶಂಕಿಸಿರುವ ಪೊಲೀಸರು ಕಾಣೆಯಾದ ದೇಹಕ್ಕಾಗಿ ಹುಡುಕಾಟ ಆರಂಭಿಸಿದ್ದಾರೆ. 

More Stories

Trending News