Corona Pandemic ಕಾಲದಲ್ಲಿ ನೌಕರಿ ಕಳೆದುಕೊಂಡವರಿಗೆ Modi ಸರ್ಕಾರ ಪ್ರಕಟಿಸಿದೆ ಸಂತಸದ ಸುದ್ದಿ

Corona Pandemic - ಕರೋನಾ ಕಾಲದಲ್ಲಿ (Corona Pandemic) ಉದ್ಯೋಗ ಕಳೆದುಕೊಂಡ ನೌಕರರ ರಾಜ್ಯ ವಿಮಾ ನಿಗಮದ (ಇಸಿಎಸ್‌ಐ) ಸದಸ್ಯರಿಗೆ ಸಂತಸದ ಸುದ್ದಿಯೊಂದು ಪ್ರಕಟವಾಗಿದೆ. ಹೌದು, ಉದ್ಯೋಗ ಕಳೆದುಕೊಂಡ ಈ ಸದಸ್ಯರಿಗೆ ಕೇಂದ್ರ ಸರ್ಕಾರವು (Modi Government) ಮೂರು ತಿಂಗಳ ವೇತನವನ್ನು ನೀಡಲಿದೆ.

Written by - Nitin Tabib | Last Updated : Oct 2, 2021, 08:47 PM IST
  • ಕೊರೊನಾ ಕಾಲದಲ್ಲಿ ನೌಕರಿ ಕಳೆದುಕೊಂಡವರಿಗೆ ಸಂತಸದ ಸುದ್ದಿ.
  • ಉದ್ಯೋಗ ಕಳೆದುಕೊಂಡ ಈ ಸದಸ್ಯರಿಗೆ ಕೇಂದ್ರ ಸರ್ಕಾರವು ಮೂರು ತಿಂಗಳ ವೇತನವನ್ನು ನೀಡಲಿದೆ.
  • ಕರೋನಾದಿಂದ ಜೀವ ಕಳೆದುಕೊಂಡ ECSI ಸದಸ್ಯರ ಸಂಬಂಧಿಕರಿಗೆ ಅವರ ಸಚಿವಾಲಯವು ಆಜೀವ ಆರ್ಥಿಕ ಸಹಾಯವನ್ನು ನೀಡಲಿದೆ
Corona Pandemic ಕಾಲದಲ್ಲಿ ನೌಕರಿ ಕಳೆದುಕೊಂಡವರಿಗೆ Modi ಸರ್ಕಾರ ಪ್ರಕಟಿಸಿದೆ ಸಂತಸದ ಸುದ್ದಿ title=
Job Loss Due To Corona (Representational Image)

Corona Pandemic - ಕರೋನಾ ಕಾಲದಲ್ಲಿ (Corona Pandemic) ಉದ್ಯೋಗ ಕಳೆದುಕೊಂಡ ನೌಕರರ ರಾಜ್ಯ ವಿಮಾ ನಿಗಮದ (ಇಸಿಎಸ್‌ಐ) ಸದಸ್ಯರಿಗೆ ಸಂತಸದ ಸುದ್ದಿಯೊಂದು ಪ್ರಕಟವಾಗಿದೆ. ಹೌದು, ಉದ್ಯೋಗ ಕಳೆದುಕೊಂಡ ಈ ಸದಸ್ಯರಿಗೆ ಕೇಂದ್ರ ಸರ್ಕಾರವು (Modi Government) ಮೂರು ತಿಂಗಳ ವೇತನವನ್ನು ನೀಡಲಿದೆ.

ಸುದ್ದಿ ಸಂಸ್ಥೆ ANI ನಲ್ಲಿ ಪ್ರಕಟಗೊಂಡ ವರದಿಯಲ್ಲಿ ಈ ಮಾಹಿತಿಯನ್ನು ನೀಡಲಾಗಿದೆ.  ANI ಪ್ರಕಾರ, ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ (Union Labour Minister) ಭೂಪೇಂದ್ರ ಯಾದವ್ (Bhupendra Yadav) ಇದನ್ನು ಹೇಳಿದ್ದಾರೆ. ಕರೋನಾದಿಂದ ಜೀವ ಕಳೆದುಕೊಂಡ ESIC ಸದಸ್ಯರ ಸಂಬಂಧಿಕರಿಗೆ ಅವರ ಸಚಿವಾಲಯವು ಆಜೀವ ಆರ್ಥಿಕ ಸಹಾಯವನ್ನು ನೀಡಲಿದೆ ಎಂದು ಭೂಪೇಂದ್ರ ಯಾದವ್ ಹೇಳಿದ್ದಾರೆ. ಆದರೆ, ಕಾರ್ಮಿಕ ಸಚಿವ ಭೂಪೇಂದ್ರ ಯಾದವ್ ಈ ಕುರಿತು ಹೆಚ್ಚಿನ ವಿವರಗಳನ್ನು ನೀಡಿಲ್ಲ.

ಇದನ್ನೂ ಓದಿ-Xpulse 200 4V Teaser: ಶೀಘ್ರದಲ್ಲಿಯೇ Hero ಬಿಡುಗಡೆ ಮಾಡಲಿದೆ Adventure Touring Motorcycle

ಕಾರ್ಮಿಕ ಸಂಹಿತೆಯ ಕುರಿತು ಅವರು ಹೇಳಿದ್ದೇನು?: ಭೂಪೇಂದ್ರ ಯಾದವ್ ಪ್ರತಿ ರಾಜ್ಯದಲ್ಲಿ 'ಕಾರ್ಮಿಕ ಸಂಹಿತೆ' ಸಿದ್ಧಪಡಿಸುವ ಕೆಲಸ ನಡೆಯುತ್ತಿದೆ ಎಂದು ಹೇಳಿದ್ದಾರೆ. ಹೊಸ ಕಾರ್ಮಿಕ ಸಂಹಿತೆಯ ಅನುಷ್ಠಾನದ ಪ್ರಕ್ರಿಯೆ ಪ್ರಗತಿಯಲ್ಲಿದೆ. ಕಾರ್ಮಿಕರಿಗೆ ಸಂಬಂಧಿಸಿದ 29 ಕಾರ್ಮಿಕ ಕಾನೂನುಗಳನ್ನು 4 ಸಂಹಿತೆಗಳಲ್ಲಿ ಬದಲಾಯಿಸಲಾಗಿದೆ ಎಂಬುದು ಇಲ್ಲಿ ಗಮನಾರ್ಹ. ಅದರ ಅನುಷ್ಠಾನದ ನಂತರ, ಕಂಪನಿಗಳಲ್ಲಿನ ವ್ಯವಹಾರಕ್ಕೆ ಸಂಬಂಧಿಸಿದ ನಿಯಮಗಳಲ್ಲಿ ದೊಡ್ಡ ಬದಲಾವಣೆಯಾಗಲಿದೆ. ಈ ಕೋಡ್ ಅನ್ನು ಅಕ್ಟೋಬರ್ 1 ರಿಂದ ಜಾರಿಗೆ ತರಲಾಗುವುದು ಎಂದು ಹೇಳಲಾಗಿತ್ತು. ಆದರೆ, ನಿರೀಕ್ಷೆ ಹೆಚ್ಚಾಗುತ್ತಲೇ ಇದೆ.

ಇದನ್ನೂ ಓದಿ-Plantain Benefits:ಕಚ್ಚಾ ಬಾಳೆಕಾಯಿಯ ಈ ಲಾಭಗಳು ನಿಮಗೆ ತಿಳಿದಿವೆಯೇ? ಇಂದೇ ನಿಮ್ಮ ಡಯಟ್ ನಲ್ಲಿ ಶಾಮೀಲುಗೊಳಿಸಿ

ಇ-ಕಾರ್ಮಿಕ ಪೋರ್ಟಲ್ (e-Labour Portal) ಕುರಿತು ಅವರು ಹೇಳಿದ್ದೇನು?: ಇ-ಕಾರ್ಮಿಕ  ಪೋರ್ಟಲ್‌ನಲ್ಲಿ ಕಟ್ಟಡ ಕಾರ್ಮಿಕರು, ವಲಸೆ ಕಾರ್ಮಿಕರು, ಬೀದಿ ವ್ಯಾಪಾರಿಗಳು ಮತ್ತು ಗೃಹ ಕಾರ್ಮಿಕರಂತಹ 38 ಕೋಟಿ ಅಸಂಘಟಿತ ಕಾರ್ಮಿಕರನ್ನು ನೋಂದಾಯಿಸುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಭೂಪೇಂದ್ರ ಯಾದವ್ ಹೇಳಿದ್ದಾರೆ. ಇದಕ್ಕಾಗಿ ಪ್ರಯತ್ನಗಳು ನಡೆಯುತ್ತಿವೆ. ಪೋರ್ಟಲ್‌ನಲ್ಲಿ ನೋಂದಾಯಿತ ಕೆಲಸಗಾರರಿಗೆ ಇ-ಕಾರ್ಮಿಕ  ಕಾರ್ಡ್ (e-Labour Card) ನೀಡಲಾಗುತ್ತಿದೆ. ಈ ಕಾರ್ಡ್ 12 ಅಂಕಿಯ ವಿಶಿಷ್ಟ ಸಂಖ್ಯೆಯನ್ನು ಹೊಂದಿರುತ್ತದೆ, ಇದು ಭವಿಷ್ಯದಲ್ಲಿ ಸಾಮಾಜಿಕ ಭದ್ರತಾ ಯೋಜನೆಗಳಿಗೆ ಸೇರಲು ಸಹಾಯ ಮಾಡಲಿದೆ. 

ಇದನ್ನೂ ಓದಿ-Ladakh ನಲ್ಲಿ ಅನಾವರಣಗೊಂಡ ವಿಶ್ವದ ಅತಿ ದೊಡ್ಡ ತ್ರಿವರ್ಣ ಧ್ವಜ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News