ನವದೆಹಲಿ: ಮಹಾರಾಷ್ಟ್ರದಲ್ಲಿ ಲಾಕ್ ಡೌನ್ ವಿಧಿಸುವ ವಿಚಾರವಾಗಿ ಮಾತನಾಡಿದ ಶಿವಸೇನಾ ವಕ್ತಾರ ಸಂಜಯ ರೌತ್ ಕೋವಿಡ್ ವಿರುದ್ಧದ ಈ ಯುದ್ಧವನ್ನು ಯಾರೂ ರಾಜಕೀಯಗೊಳಿಸಬಾರದು ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಮುಂದಿನ 25 ವರ್ಷಗಳವರೆಗೆ ಸಿಎಂ ಹುದ್ದೆಯನ್ನು ಹೊಂದಲು ಶಿವಸೇನಾ ಬಯಸುತ್ತದೆ- ಸಂಜಯ್ ರೌತ್
'ಮಹಾರಾಷ್ಟ್ರದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಈಗ ಲಾಕ್ ಡೌನ್ ವಿಧಿಸುವ ಅನಿವಾರ್ಯ ಮಾರ್ಗಕ್ಕೆ ಮಹಾರಾಷ್ಟ್ರ ಸರ್ಕಾರ ಅಂಟಿಕೊಳ್ಳುತ್ತಿದೆ.ಇದೆ ವೇಳೆ ಈ ಕ್ರಮಕ್ಕೆ ವಿರುದ್ಧವಾಗಿರುವ ಬಿಜೆಪಿ ನಾಯಕರಾದ ಪ್ರಕಾಶ್ ಜಾವ್ದೇಕರ್ ಮತ್ತು ದೇವೇಂದ್ರ ಫಡ್ನವೀಸ್ ಅವರ ವಿರುದ್ಧ ವಾಗ್ದಾಳಿ ನಡೆಸಿದ ಅವರು, 'ಕರೋನಾ ಯುದ್ಧವು ಇಂಡೋ-ಪಾಕ್ ಯುದ್ಧವಲ್ಲ. ಕೋವಿಡ್ ವಿರುದ್ಧದ ಈ ಯುದ್ಧವನ್ನು ಯಾರೂ ರಾಜಕೀಯಗೊಳಿಸಬಾರದು" ಎಂದು ರೌತ್ (Sanjay Raut) ಹೇಳಿದರು.
ಇದನ್ನೂ ಓದಿ: Yamuna Expresswayನಲ್ಲಿ ಭೀಕರ ಅಪಘಾತ, ಕಾರಿನ ಮೇಲೆ ಟ್ಯಾಂಕರ್ ಪಲ್ಟಿ, 7 ಮಂದಿ ಮೃತ
'ದೇವೇಂದ್ರ ಫಡ್ನವಿಸ್ ಮಾಜಿ ಮುಖ್ಯಮಂತ್ರಿ. ಜನರು ಲಾಕ್ ಡೌನ್ ಬಯಸುವುದಿಲ್ಲ ಎಂದು ಅವರು ಹೇಳಿದ್ದಾರೆ. ಹೌದು ನಮಗೆ ಅದು ತಿಳಿದಿದೆ. ಆದರೆ ಜನರ ಪ್ರಾಣ ಉಳಿಸಲು ಪರಿಹಾರವಾದರೂ ಏನು?" ರೌತ್ ಸುದ್ದಿಗಾರರಿಗೆ ತಿಳಿಸಿದರು."ದೆಹಲಿಯಲ್ಲಿ ಕುಳಿತಿರುವ ಪ್ರಕಾಶ್ ಜಾವ್ದೇಕರ್ ಅವರು ನಮಗೆ ಉಪನ್ಯಾಸಗಳನ್ನು ನೀಡಬಾರದು. ಅವರು ಇಲ್ಲಿಗೆ ಬಂದು ನೋಡಬೇಕು. ಅವರಿಗೆ ರಾಜ್ಯಕ್ಕೂ ಸಂಬಂಧವಿದೆ...ಇದನ್ನು ರಾಜಕೀಯಗೊಳಿಸಬಾರದು' ಎಂದು ಅವರು ಹೇಳಿದರು.
ಇದನ್ನೂ ಓದಿ: Kashi Yatre: ದೆಹಲಿ-ವಾರಣಾಸಿ ನಡುವೆ ಸಂಚರಿಸಲಿದೆ ಬುಲೆಟ್ ಟ್ರೈನ್
ಮಹಾರಾಷ್ಟ್ರವು ಈಗಾಗಲೇ ಈ ವಾರ ರಾತ್ರಿ ಕರ್ಫ್ಯೂ ಮತ್ತು ವಾರಾಂತ್ಯದ ಲಾಕ್ಡೌನ್ ಅನ್ನು ಜಾರಿಗೆ ತಂದಿದೆ. ಆದರೆ ಮೂರು ವಾರಗಳವರೆಗೆ ದೇಶದಲ್ಲಿ ಅರ್ಧದಷ್ಟು ಸೋಂಕುಗಳ ಉಲ್ಬಣವನ್ನು ರಾಜ್ಯವು ವರದಿ ಮಾಡುತ್ತಿರುವುದರಿಂದ, ಪ್ರಸರಣ ಸರಪಳಿಯನ್ನು ಮುರಿಯಲು ಬಲವಾದ ಕ್ರಮಗಳು ಅಗತ್ಯವೆಂದು ಮುಖ್ಯಮಂತ್ರಿ ಹೇಳಿದ್ದಾರೆ.
ಲಾಕ್ಡೌನ್ ಹೊರತುಪಡಿಸಿ ಬೇರೆ ಆಯ್ಕೆಗಳಿಲ್ಲ, ಇದು ಮಹಾರಾಷ್ಟ್ರದ ಪರಿಸ್ಥಿತಿ ಮಾತ್ರವಲ್ಲ, ಇಡೀ ದೇಶದಲ್ಲಿ ಕೋವಿಡ್ ಹೆಚ್ಚುತ್ತಿದೆ" ಎಂದು ಹೇಳಿದರು.ದೇಶಕ್ಕೆ ಲಾಕ್ ಡೌನ್ ಅಗತ್ಯವಿದೆಯೇ ಅಥವಾ ಇಲ್ಲವೇ ಎಂಬುದು ಪ್ರಧಾನಮಂತ್ರಿ ಮಾತ್ರ ನಿರ್ಧರಿಸಬಹುದು.ಆದರೆ ಪಶ್ಚಿಮ ಬಂಗಾಳ ಚುನಾವಣಾ ರ್ಯಾಲಿಗಳ ವೇಳಾಪಟ್ಟಿಯ ನಂತರ ಕೇಂದ್ರವು ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ನಾನು ಭಾವಿಸುತ್ತೇನೆ" ಎಂದು ಅವರು ಹೇಳಿದರು.
ಇದನ್ನೂ ಓದಿ: 'ಮಹಾ' ಅಧಿಕಾರ ಹಂಚಿಕೆ ವಿಚಾರದಲ್ಲಿ ಶಾ ಸುಳ್ಳು ಹೇಳುತ್ತಿದ್ದಾರೆ- ಶಿವಸೇನಾ ತಿರುಗೇಟು
ವ್ಯಾಕ್ಸಿನೇಷನ್ ಡ್ರೈವ್ ಅನ್ನು ಹೆಚ್ಚಿಸುವುದು ಮತ್ತು ಅದರ ಸ್ಟಾಕ್ ಅನ್ನು ಹೆಚ್ಚಿಸುವುದು ಕೇಂದ್ರದ ಜವಾಬ್ದಾರಿಯಾಗಿದೆ, ರಾಜ್ಯವು ಎದುರಿಸುತ್ತಿರುವ ಲಸಿಕೆ ಕೊರತೆಯನ್ನು ಉಲ್ಲೇಖಿಸಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ