ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣಗಳಲ್ಲಿ ಮತ್ತೆ ಹೆಚ್ಚಳ

 ಕೋವಿಡ್ ಸುರಕ್ಷತಾ ಮಾನದಂಡಗಳು ಉಲ್ಲಂಘನೆಯಾಗುತ್ತಿರುವ ಬಗ್ಗೆ ತಜ್ಞರು ಈಗಾಗಲೇ ಎಚ್ಚರಿಕೆ ನೀಡಿರುವ ಬೆನ್ನಲೇ ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣಗಳಲ್ಲಿ ಮತ್ತೆ ಹೆಚ್ಚಳ ಕಂಡು ಬಂದಿದೆ.

Written by - ZH Kannada Desk | Last Updated : Jun 23, 2021, 10:29 PM IST
  • ಕೋವಿಡ್ ಸುರಕ್ಷತಾ ಮಾನದಂಡಗಳು ಉಲ್ಲಂಘನೆಯಾಗುತ್ತಿರುವ ಬಗ್ಗೆ ತಜ್ಞರು ಈಗಾಗಲೇ ಎಚ್ಚರಿಕೆ ನೀಡಿರುವ ಬೆನ್ನಲೇ ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣಗಳಲ್ಲಿ ಮತ್ತೆ ಹೆಚ್ಚಳ ಕಂಡು ಬಂದಿದೆ.
  • ಮಂಗಳವಾರರಂದು ಮಹಾರಾಷ್ಟ್ರದಲ್ಲಿ 8,470 ಪ್ರಕರಣಗಳಿದ್ದರೆ, ಸೋಮವಾರದಂದು 6,270 ಪ್ರಕರಣಗಳು ವರದಿಯಾಗಿದ್ದವು, ಹೊಸದಾಗಿ ಇಂದು 10,066 ಹೊಸ ಪ್ರಕರಣಗಳು ವರದಿಯಾಗಿವೆ.
ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣಗಳಲ್ಲಿ ಮತ್ತೆ ಹೆಚ್ಚಳ

ನವದೆಹಲಿ: ಕೋವಿಡ್ ಸುರಕ್ಷತಾ ಮಾನದಂಡಗಳು ಉಲ್ಲಂಘನೆಯಾಗುತ್ತಿರುವ ಬಗ್ಗೆ ತಜ್ಞರು ಈಗಾಗಲೇ ಎಚ್ಚರಿಕೆ ನೀಡಿರುವ ಬೆನ್ನಲೇ ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣಗಳಲ್ಲಿ ಮತ್ತೆ ಹೆಚ್ಚಳ ಕಂಡು ಬಂದಿದೆ.

ಮಂಗಳವಾರರಂದು ಮಹಾರಾಷ್ಟ್ರದಲ್ಲಿ 8,470 ಪ್ರಕರಣಗಳಿದ್ದರೆ, ಸೋಮವಾರದಂದು 6,270 ಪ್ರಕರಣಗಳು ವರದಿಯಾಗಿದ್ದವು, ಹೊಸದಾಗಿ ಇಂದು 10,066 ಹೊಸ ಪ್ರಕರಣಗಳು ವರದಿಯಾಗಿವೆ.ಕೋವಿಡ್ ಸುರಕ್ಷತಾ ಮಾನದಂಡಗಳ ಉಲ್ಲಂಘನೆಯ ಜೊತೆಗೆ, ಡೆಲ್ಟಾ ಸ್ಟ್ರೈನ್‌ನ ಹೊಸ ರೂಪಾಂತರವು ದೇಶದಲ್ಲಿಯೂ ಹೊರಹೊಮ್ಮಿದ್ದು, ಸರ್ಕಾರಕ್ಕೆ ಕಳವಳ ಉಂಟುಮಾಡಿದೆ.

ಇದನ್ನೂ ಓದಿ- Covid-19 Symptoms In Kids: ಮಕ್ಕಳಲ್ಲಿ ಈ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣ ಪರೀಕ್ಷೆಗೊಳಪಡಿಸಿ..!

ಎವೈ 1 ಅಥವಾ ದೆಹಲಿ ಪ್ಲಸ್ ಸ್ಟ್ರೈನ್ ಡೆಲ್ಟಾ ಸ್ಟ್ರೈನ್‌ನ ರೂಪಾಂತರವಾಗಿದ್ದು, ಇದು ದೇಶದಲ್ಲಿ ವೈರಸ್‌ನ ಎರಡನೇ ಅಲೆಗೆ ಕಾರಣವಾಗಿತ್ತು. ಇಲ್ಲಿಯವರೆಗೆ, ಕೇರಳ ಮತ್ತು ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರ (Maharashtra) ದ ರತ್ನಾಗಿರಿ ಮತ್ತು ಜಲ್ಗಾಂವ್ ಭಾಗಗಳಲ್ಲಿ ಈ ತಳಿ ಕಂಡುಬಂದಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯಗಳು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಕೇಂದ್ರ ಸರ್ಕಾರ ಸೂಚಿಸಿದೆ.ಕಳೆದ ವಾರ, ಮಹಾರಾಷ್ಟ್ರದ ತಜ್ಞರು ರಾಜ್ಯದಲ್ಲಿ ಮೂರನೇ ಅಲೆಯು ನಿರೀಕ್ಷೆಗಿಂತ ಮುಂಚೆಯೇ ಬರಬಹುದು ಎಂದು ಹೇಳಿದರು.

'ಗಣಿತದ ಮಾದರಿಯು ಎರಡು ಅಲೆಗಳ ನಡುವೆ 100 ರಿಂದ 120 ದಿನಗಳ ಅಂತರವಿರುವುದನ್ನು ತೋರಿಸುತ್ತದೆ ಎಂದು ಮಹಾರಾಷ್ಟ್ರ ಕೋವಿಡ್ ಕಾರ್ಯಪಡೆಯ ಸದಸ್ಯ ಡಾ.ರಾಹುಲ್ ಪಂಡಿತ್ ಹೇಳಿದ್ದಾರೆ.ಕೆಲವು ರಾಷ್ಟ್ರಗಳು 14 ರಿಂದ 15 ವಾರಗಳ ಅಂತರವನ್ನು ಹೊಂದಿವೆ ಎಂದು ಅವರು ಹೇಳಿದರು. "ಆದರೂ, ಕೆಲವರಿಗೆ ಎಂಟು ವಾರಗಳಿಗಿಂತ ಕಡಿಮೆ ಅಂತರವಿತ್ತು" ಎಂದು ಅವರು ಹೇಳಿದರು.

ಇದನ್ನೂ ಓದಿ- Printing Currency Notes: Corona ಸಂಕಟ, ನಾಸಿಕ್ ಪ್ರೆಸ್ ನಲ್ಲಿ ನೋಟುಗಳ ಮುದ್ರಣ ಏಪ್ರಿಲ್ 30ರವರೆಗೆ ಸ್ಥಗಿತ

ವೈರಸ್‌ನ ಮೂರನೇ ಅಲೆಯು ರಾಜ್ಯದಲ್ಲಿ 8 ಲಕ್ಷ ಸಕ್ರಿಯ ಪ್ರಕರಣಗಳಿಗೆ ಕಾರಣವಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ, ಇದರಲ್ಲಿ ಮೊದಲ ಎರಡು ಅಲೆಗಳಲ್ಲಿ 19 ಲಕ್ಷ ಪ್ರಕರಣಗಳು ಮತ್ತು 40 ಲಕ್ಷ ಪ್ರಕರಣಗಳಿವೆ.ವ್ಯಾಕ್ಸಿನೇಷನ್ ಮತ್ತು ಸುರಕ್ಷತಾ ಮಾನದಂಡಗಳನ್ನು ಕಟ್ಟುನಿಟ್ಟಾಗಿ ನಿರ್ವಹಿಸುವುದು ಮೂರನೇ ಅಲೆಯನ್ನು ತಪ್ಪಿಸುವ ಏಕೈಕ ಮಾರ್ಗವಾಗಿದೆ ಎಂದು ತಜ್ಞರು ಎಚ್ಚರಿಸಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

More Stories

Trending News