COVID 19 ಎಫೆಕ್ಟ್ ಯಾವ ರಾಜ್ಯಗಳ ಮೇಲೆ ಎಷ್ಟೆಷ್ಟಿದೆ?

ವ್ಯಾಪಕವಾಗಿ ಹರಡುತ್ತಿರುವ  ದೇಶದ COVID 19 ವೈರಸ್ ಪೀಡಿತರ ಸಂಖ್ಯೆಯಲ್ಲಿ ಮಹಾರಾಷ್ಟ್ರ ರಾಜ್ಯವೊಂದರ ಕೊಡುಗೆಯೇ ಮೂರನೇ ಒಂದುರಷ್ಟು ಪಾಲಿದೆ. ನಂಬರ್ 1 ಸ್ಥಾನದಲ್ಲಿರುವ ಮಹಾರಾಷ್ಟ್ರ ರಾಜ್ಯವೊಂದರಲ್ಲೇ 50 ಸಾವಿರಕ್ಕೂ ಹೆಚ್ಚು COVID 19 ವೈರಸ್ ಸೋಂಕಿತರಿದ್ದಾರೆ‌. 

Updated: May 28, 2020 , 06:45 AM IST
COVID 19 ಎಫೆಕ್ಟ್ ಯಾವ ರಾಜ್ಯಗಳ ಮೇಲೆ ಎಷ್ಟೆಷ್ಟಿದೆ?

ನವದೆಹಲಿ: ‌COVID 19 ವೈರಸ್ ನಿಯಂತ್ರಿಸಲು ಜಾರಿಗೊಳಿಸಲಾಗಿದ್ದ ನಾಲ್ಕನೇ ಹಂತದ ಲಾಕ್ಡೌನ್ ಕೂಡ ಕೊನೆಯಾಗುತ್ತಿದೆ. ಆದರೆ   ಕರೋನವೈರಸ್ (Coronavirus)  ಸೋಂಕು ಹರಡುವಿಕೆ ಮಾತ್ರ ಕಡಿಮೆ ಆಗಿಲ್ಲ, ಬದಲಿಗೆ ದಿನದಿಂದ ದಿನಕ್ಕೆ ದುಪ್ಪಟ್ಟಾಗುತ್ತಿದೆ.  

ಒಂದು ವಾರದಿಂದ ಪ್ರತಿನಿತ್ಯವೂ 6 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ.  ಈ ಹಿನ್ನೆಲೆಯಲ್ಲಿ COVID 19 ವೈರಸ್ ನಿನ್ನೆ ಯಾವ ರಾಜ್ಯಗಳಲ್ಲಿ ಎಷ್ಟು ಮಂದಿಗೆ ಕಾಣಿಸಿಕೊಂಡಿದೆ, ಅಲ್ಲಿನ ಒಟ್ಟಾರೆ ಕೊರೋನಾ ಪೀಡಿತರ ಸಂಖ್ಯೆ ಎಷ್ಟು ಎಂಬ ವಿವರಗಳು ಈ ರೀತಿ ಇವೆ.

ವ್ಯಾಪಕವಾಗಿ ಹರಡುತ್ತಿರುವ  ದೇಶದ ಕೋವಿಡ್ -19 (Covid-19)  ವೈರಸ್ ಪೀಡಿತರ ಸಂಖ್ಯೆಯಲ್ಲಿ ಮಹಾರಾಷ್ಟ್ರ ರಾಜ್ಯವೊಂದರ ಕೊಡುಗೆಯೇ ಮೂರನೇ ಒಂದುರಷ್ಟು ಪಾಲಿದೆ. ನಂಬರ್ 1 ಸ್ಥಾನದಲ್ಲಿರುವ ಮಹಾರಾಷ್ಟ್ರ ರಾಜ್ಯವೊಂದರಲ್ಲೇ 50 ಸಾವಿರಕ್ಕೂ ಹೆಚ್ಚು COVID 19 ವೈರಸ್ ಸೋಂಕಿತರಿದ್ದಾರೆ‌. ನಂತರದ  ಸ್ಥಾನ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ತವರು ರಾಜ್ಯವಾಗಿರುವ ಗುಜರಾತ್ ರಾಜ್ಯದ್ದು. ತಮಿಳುನಾಡು ಮೂರನೇ ಸ್ಥಾನದಲ್ಲಿದೆ. ವಿವಿಧ ರಾಜ್ಯಗಳಲ್ಲಿ ಹೊಸದಾಗಿ ದಾಖಲಾದ COVID 19 ವೈರಸ್ ಪೀಡಿತರ ಮತ್ತು ಒಟ್ಟು ಸೋಂಕು ಪೀಡಿತರ ವಿವರ ಹೀಗಿದೆ.

ರಾಜ್ಯವಾರು ಕೊರೊನಾ ಪೀಡಿತರ ವಿವರ

 1. ಮಹಾರಾಷ್ಟ್ರ: 2,190 ಹೊಸ ಪ್ರಕರಣಗಳು, ಒಟ್ಟು 56,948 
 2. ತಮಿಳುನಾಡು: 817 ಹೊಸ ಪ್ರಕರಣಗಳು; ಒಟ್ಟು 18,545
 3.  ದೆಹಲಿ: 792 ಹೊಸ ಪ್ರಕರಣಗಳು; ಒಟ್ಟು 15,257 
 4. ಗುಜರಾತ್: 376 ಹೊಸ ಪ್ರಕರಣಗಳು; ಒಟ್ಟು 15,205 
 5. ರಾಜಸ್ಥಾನ: 280 ಹೊಸ ಪ್ರಕರಣಗಳು; ಒಟ್ಟು 7,816 
 6. ಮಧ್ಯಪ್ರದೇಶ: 237 ಹೊಸ ಪ್ರಕರಣಗಳು; ಒಟ್ಟು 7,261 
 7. ಉತ್ತರ ಪ್ರದೇಶ: 269 ಹೊಸ ಪ್ರಕರಣಗಳು; ಒಟ್ಟು 6,991
 8. ಪಶ್ಚಿಮ ಬಂಗಾಳ: 183 ಹೊಸ ಪ್ರಕರಣಗಳು; ಒಟ್ಟು 4,192 
 9. ಕರ್ನಾಟಕ: 135 ಹೊಸ ಪ್ರಕರಣಗಳು; ಒಟ್ಟು 2,418 
 10. ತೆಲಂಗಾಣ: 107 ಹೊಸ ಪ್ರಕರಣಗಳು; ಒಟ್ಟು 2,098 
 11. ಜಮ್ಮು ಮತ್ತು ಕಾಶ್ಮೀರ: 162 ಹೊಸ ಪ್ರಕರಣಗಳು; ಒಟ್ಟು 1,921
 12. ಹರಿಯಾಣ: 76 ಹೊಸ ಪ್ರಕರಣಗಳು; ಒಟ್ಟು 1,381 
 13. ಕೇರಳ: 40 ಹೊಸ ಪ್ರಕರಣಗಳು; ಒಟ್ಟು 1,004 
 14. ಅಸ್ಸಾಂ: 60 ಹೊಸ ಪ್ರಕರಣಗಳು; ಒಟ್ಟು 774 
 15. ಜಾರ್ಖಂಡ್: 263 ಸಕ್ರಿಯ ಪ್ರಕರಣಗಳು; ಒಟ್ಟು 458
 16. ಹಿಮಾಚಲ ಪ್ರದೇಶ: 177 ಸಕ್ರಿಯ ಪ್ರಕರಣಗಳು; ಒಟ್ಟು 251
 17. ಗೋವಾ: 1 ಪಾಸಿಟಿವ್; ಒಟ್ಟು 31
 18. ಲಡಾಖ್: 1 ಹೊಸ ಪ್ರಕರಣ; ಒಟ್ಟು 11