COVID-19: ಚಳಿಗಾಲದ ಅಧಿವೇಶನಕ್ಕೆ ಬ್ರೇಕ್ ಜನವರಿಯಲ್ಲಿ ಬಜೆಟ್ ಅಧಿವೇಶನ

ಸಚಿವ ಪ್ರಹ್ಲಾದ್ ಜೋಶಿ ಪ್ರಕಾರ, ಕರೋನವೈರಸ್ ಹರಡುವುದನ್ನು ತಡೆಯಲು ಸಂಸತ್ತಿನ ಚಳಿಗಾಲದ ಅಧಿವೇಶನವನ್ನು‌ ರದ್ದುಗೊಳಿಸಲಾಗುತ್ತಿದೆ. ಒಂದೇ ಸಲಕ್ಕೆ  ಜನವರಿಯಲ್ಲಿ ಬಜೆಟ್ ಅಧಿವೇಶನವನ್ನು ನಡೆಸಲಾಗುತ್ತದೆ‌.

Last Updated : Dec 15, 2020, 12:25 PM IST
  • ಈ ಬಾರಿ ಸಂಸತ್ತಿನ ಚಳಿಗಾಲದ ಅಧಿವೇಶನ ಇರುವುದಿಲ್ಲ
  • COVID-19 ಸಾಂಕ್ರಾಮಿಕ ರೋಗದಿಂದಾಗಿ ಅಧಿವೇಶನವನ್ನು ರದ್ದು
  • ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ ಅವರಿಗೆ ಪ್ರತಿಕ್ರಿಯಿಸಿದ ಪತ್ರದಲ್ಲಿ ಸಂಸದೀಯ ವ್ಯವಹಾರಗಳ ಸಚಿವರು ಇದನ್ನು ದೃಢಪಡಿಸಿದ್ದಾರೆ
COVID-19: ಚಳಿಗಾಲದ ಅಧಿವೇಶನಕ್ಕೆ ಬ್ರೇಕ್ ಜನವರಿಯಲ್ಲಿ ಬಜೆಟ್ ಅಧಿವೇಶನ title=
File Image

ನವದೆಹಲಿ: COVID-19 ರೋಗ ಹರಡುವಿಕೆಯು ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಾರದ ಹಿನ್ನಲೆಯಲ್ಲಿ ಈ ಬಾರಿ ಸಂಸತ್ತಿನ ಚಳಿಗಾಲದ ಅಧಿವೇಶನ ನಡೆಯುವುದಿಲ್ಲ. ಬದಲಿಗೆ ಜನವರಿಯಲ್ಲಿ ಬಜೆಟ್ ಅಧಿವೇಶನ ಕರೆಯಲಾಗುತ್ತದೆ.

ಚಳಿಗಾಲದ ಅಧಿವೇಶನ ರದ್ದುಗೊಳಿಸಿ ಜನವರಿಯಲ್ಲಿ ಒಂದೇ ಸಲಕ್ಕೆ ಬಜೆಟ್ ಅಧಿವೇಶನ ಕರೆಯುವ ಬಗ್ಗೆ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಮಂಗಳವಾರ ಸುಳಿವು ನೀಡಿದ್ದಾರೆ.

ಕೋವಿಡ್ 19 ಪರಿಸ್ಥಿತಿ, ರೈತರ (Farmers Protest) ಮತ್ತಿತರ ಮಹತ್ವದ ವಿಷಯಗಳ ಬಗ್ಗೆ ಚರ್ಚಿಸಲು ಚಳಿಗಾಲದ ಅಧಿವೇಶನಕ್ಕೆ ಕರೆಯುವಂತೆ ಲೋಕಸಭೆಯ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ ಪತ್ರ ಬರೆದಿದ್ದರು.  ಅಧೀರ್ ರಂಜನ್ ಚೌಧರಿ ಅವರ ಪತ್ರಕ್ಕೆ ಪ್ರತಿಕ್ರಿಯಿ ನೀಡಿ ಪತ್ರ ಬರೆದಿರುವ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಜನವರಿಯಲ್ಲಿ ಒಂದೇ ಸಲಕ್ಕೆ ಬಜೆಟ್ ಅಧಿವೇಶನ ಕರೆಯುವುದನ್ನು ದೃಢಪಡಿಸಿದ್ದಾರೆ. 

ಕೊರೊನಾ ಲಸಿಕೆಗೆ ಹೊಸ ಮಾರ್ಗಸೂಚಿ ಹೊರಡಿಸಿದ ಸರ್ಕಾರ

ದೆಹಲಿ ಗಡಿಯ ಬಳಿ ಭಾರಿ ರೈತ ಪ್ರತಿಭಟನೆಗೆ ನಾಂದಿ ಹಾಡಿದ ಹೊಸ ಕೃಷಿ ಕಾನೂನುಗಳ ಬಗ್ಗೆ ಚರ್ಚಿಸಲು ಚೌಧರಿ ಕಿರು ಚಳಿಗಾಲದ ಅಧಿವೇಶನವನ್ನು ಒತ್ತಾಯಿಸಿದ್ದರು.

ಪ್ರಹ್ಲಾದ್ ಜೋಶಿ ಅವರ ಪ್ರಕಾರ, ಕರೋನವೈರಸ್ ಹರಡುವುದನ್ನು ತಡೆಯಲು ಸಂಸತ್ತಿನ ಚಳಿಗಾಲದ ಅಧಿವೇಶನವನ್ನು‌ ರದ್ದುಗೊಳಿಸಲಾಗುತ್ತಿದೆ. ಒಂದೇ ಸಲಕ್ಕೆ  ಜನವರಿಯಲ್ಲಿ ಬಜೆಟ್ ಅಧಿವೇಶನವನ್ನು ನಡೆಸಲಾಗುತ್ತದೆ‌. ಕೇಂದ್ರ ಸರ್ಕಾರದ ಈ ನಿರ್ಧಾರಕ್ಕೆ ಇತರೆ ಪಕ್ಷಗಳು ಬೆಂಬಲವೂ ಇದೆ.

ಬಜೆಟ್ ಅಧಿವೇಶನ ಜನವರಿ ಕೊನೆಯ ವಾರದಲ್ಲಿ ನಡೆಯಲಿದೆ ಮತ್ತು ಫೆಬ್ರವರಿ 1 ರಂದು ಬಜೆಟ್ ಮಂಡಿಸಲಾಗುವುದು ಎಂದು ನಿರೀಕ್ಷಿಸಲಾಗಿದೆ.

ಈ ರಾಜ್ಯದಲ್ಲಿ ಮದುವೆಗೆ ಮೊದಲು Online ನೊಂದಣಿ ಕಡ್ಡಾಯ!

ಲಡಾಖ್‌ನ ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ ರೈತರ ಪ್ರತಿಭಟನೆ, ಆರ್ಥಿಕತೆ ಮತ್ತು ಚೀನಾದೊಂದಿಗೆ ಗಡಿ ಉದ್ವಿಗ್ನತೆ ಸೇರಿದಂತೆ ನಿರ್ಣಾಯಕ ವಿಷಯಗಳ ಕುರಿತು ಚರ್ಚೆ ನಡೆಸಲು ಹಲವಾರು ಕಾಂಗ್ರೆಸ್ ನಾಯಕರು COVID-19 ಮುನ್ನೆಚ್ಚರಿಕೆಗಳೊಂದಿಗೆ ಚಳಿಗಾಲದ ಅಧಿವೇಶನಕ್ಕಾಗಿ ಒತ್ತಾಯಿಸಿದ್ದರು.

ಕೆಲವು ಸಂಸದರು ಕರೋನವೈರಸ್ ಧನಾತ್ಮಕತೆಯನ್ನು ಪರೀಕ್ಷಿಸಿದ ನಂತರ ಸೆಪ್ಟೆಂಬರ್‌ನಲ್ಲಿ ಸಂಸತ್ತಿನ ಮಾನ್ಸೂನ್ ಅಧಿವೇಶನವನ್ನು ಮೊಟಕುಗೊಳಿಸಲಾಯಿತು ಎಂಬುದನ್ನು ನೆನಪು ಮಾಡಿಕೊಳ್ಳಬಹುದು.

ಸಂಸತ್ತಿನ ಚಳಿಗಾಲದ ಅಧಿವೇಶನ (Winter Session) ಸಾಮಾನ್ಯವಾಗಿ ನವೆಂಬರ್ ಕೊನೆಯ ವಾರದಿಂದ ಡಿಸೆಂಬರ್ ಮಧ್ಯದವರೆಗೂ ನಡೆಯುತ್ತದೆ. ಬಜೆಟ್ ಅಧಿವೇಶನವು ಜನವರಿ ಕೊನೆಯ ವಾರದಿಂದ ಪ್ರಾರಂಭವಾಗುತ್ತದೆ. ಸಂಸದೀಯ ನಡಾವಳಿಗಳ ಪ್ರಕಾರ ಎರಡು ಅಧಿವೇಶನಗಳ ನಡುವೆ ಆರು ತಿಂಗಳು ಅಥವಾ ಅದಕ್ಕಿಂತ ಹೆಚ್ಚಿನ ಅಂತರವಿರಬಾರದು.

Trending News