UGC Alert! Ed-Tech ಕಂಪನಿಗಳ ಜೊತೆಗೆ ಫ್ರಂಚೈಸಿ ಒಪ್ಪಂದ ಮಾಡಿಕೊಳ್ಳದಂತೆ ಶಿಕ್ಷಣ ಸಂಸ್ಥೆಗಳಿಗೆ UGC, AICTE ಎಚ್ಚರಿಕೆ!

No Agreement With Ed-Tech Companies - ವಿಶ್ವವಿದ್ಯಾನಿಲಯ ಅನುದಾನ ಆಯೋಗ (University Grant Commission) ಮತ್ತು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (AICTE) ತಮ್ಮ ಸಂಯೋಜಿತ ವಿಶ್ವವಿದ್ಯಾಲಯಗಳು ಮತ್ತು ಸಂಸ್ಥೆಗಳಿಗೆ ದೂರ ಶಿಕ್ಷಣ ಮತ್ತು ಆನ್‌ಲೈನ್ ಮೋಡ್ ಬೋಧನಾ ಕೋರ್ಸ್‌ಗಳನ್ನು ಎಡ್-ಟೆಕ್ ಕಂಪನಿಗಳ ಸಹಭಾಗಿತ್ವದಲ್ಲಿ ನಡೆಸದಂತೆ ಎಚ್ಚರಿಕೆ ನೀಡಿದೆ. 

Written by - Nitin Tabib | Last Updated : Jan 17, 2022, 06:45 PM IST
  • ಎಡ್-ಟೆಕ್ ಕಂಪನಿಗಳ ಜೊತೆಗೆ ಒಪ್ಪಂದದ ಕುರಿತು UGC ಖಡಕ್ ತಾಕೀತು.
  • ಈ ರೀತಿಯ ಫ್ರಂಚೈಸಿ ಒಪ್ಪಂದ ನಿಯಮಾವಳಿಗಳ ವಿರುದ್ಧ.
  • ವಿದ್ಯಾರ್ಥಿಗಳು ಹಾಗೂ ಪೋಷಕರೂ ಕೂಡ ಈ ಕುರಿತು ಎಚ್ಚರಿಕೆ ವಹಿಸಬೇಕೆಂದ ಆಯೋಗ
UGC Alert! Ed-Tech ಕಂಪನಿಗಳ ಜೊತೆಗೆ ಫ್ರಂಚೈಸಿ ಒಪ್ಪಂದ ಮಾಡಿಕೊಳ್ಳದಂತೆ ಶಿಕ್ಷಣ ಸಂಸ್ಥೆಗಳಿಗೆ UGC, AICTE ಎಚ್ಚರಿಕೆ! title=
No Agreement With Ed-Tech Companies (File Photo)

No Agreement With Ed-Tech Companies - ವಿಶ್ವವಿದ್ಯಾನಿಲಯ ಅನುದಾನ ಆಯೋಗ (University Grant Commission) ಮತ್ತು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (AICTE) ತಮ್ಮ ಸಂಯೋಜಿತ ವಿಶ್ವವಿದ್ಯಾಲಯಗಳು ಮತ್ತು ಸಂಸ್ಥೆಗಳಿಗೆ ದೂರ ಶಿಕ್ಷಣ ಮತ್ತು ಆನ್‌ಲೈನ್ ಮೋಡ್ ಬೋಧನಾ ಕೋರ್ಸ್‌ಗಳನ್ನು ಎಡ್-ಟೆಕ್ ಕಂಪನಿಗಳ ಸಹಭಾಗಿತ್ವದಲ್ಲಿ ನಡೆಸದಂತೆ ಎಚ್ಚರಿಕೆ ನೀಡಿದೆ. ನಿಯಮಾನುಸಾರ ಯಾವುದೇ ‘ಫ್ರಾಂಚೈಸಿ’ ಒಪ್ಪಂದಕ್ಕೆ ಅವಕಾಶವಿಲ್ಲ ಎಂದರು. ಯುಜಿಸಿ ಮತ್ತು ಎಐಸಿಟಿಇ (All India Council For Technical Education) ಯಾವುದೇ ಕೋರ್ಸ್‌ಗೆ ಪ್ರವೇಶ ಪಡೆಯುವ ಮೊದಲು ತಮ್ಮ ವೆಬ್‌ಸೈಟ್‌ಗಳಲ್ಲಿ ಆ ಕಾರ್ಯಕ್ರಮದ ಮಾನ್ಯತೆಯ ಸ್ಥಿತಿಯನ್ನು ಪರಿಶೀಲಿಸಲು ವಿದ್ಯಾರ್ಥಿಗಳು ಮತ್ತು ಪೋಷಕರಿಗೂ ಕೂಡ UGC-AICTE ಸೂಚನೆ ನೀಡಿವೆ.

ಇದನ್ನೂ ಓದಿ-Punjab Election 2022 : ಪಂಜಾಬ್ ಚುನಾವಣಾ ಮತದಾನದ ದಿನಾಂಕ ಬದಲಿಸಿದ ಚುನಾವಣಾ ಆಯೋಗ!

ಇದಕ್ಕೆ ಸಂಬಂಧಿಸಿದಂತೆ ಅಧಿಕೃತ ಆದೇಶ ಹೊರಡಿಸಿರುವ ಆಯೋಗದ ಕಾರ್ಯದರ್ಶಿ ರಜನೀಶ್ ಜೈನ್, "ನಿಯಮಗಳ ಪ್ರಕಾರ, ಉನ್ನತ ಶಿಕ್ಷಣ ಸಂಸ್ಥೆಗಳು ಯಾವುದೇ ಫ್ರ್ಯಾಂಚೈಸ್ ಒಪ್ಪಂದದ ಅಡಿಯಲ್ಲಿ ಮುಕ್ತ ಮತ್ತು ದೂರಶಿಕ್ಷಣ (ODL) ಅಥವಾ ಆನ್‌ಲೈನ್ ಕಾರ್ಯಕ್ರಮಗಳನ್ನು ನಡೆಸಲು ಸಾಧ್ಯವಿಲ್ಲ ಮತ್ತು ಆ ಸಂಸ್ಥೆಗಳು ಕಾರ್ಯಕ್ರಮಗಳಿಗೆ ಸಂಪೂರ್ಣವಾಗಿ ಜವಾಬ್ದಾರರಾಗುತ್ತವೆ. ಆದರೂ ಕೂಡ ಕೆಲವು ಎಡ್-ಟೆಕ್ ಕಂಪನಿಗಳು, ಯುಜಿಸಿ ಮಾನ್ಯತೆ ಪಡೆದ ಕೆಲ ವಿಶ್ವವಿದ್ಯಾಲಯಗಳು ಮತ್ತು ಸಂಸ್ಥೆಗಳ ಸಹಯೋಗದಲ್ಲಿ ODL ಮತ್ತು ಆನ್‌ಲೈನ್ ಮೋಡ್‌ನಲ್ಲಿ ಪದವಿ ಮತ್ತು ಡಿಪ್ಲೊಮಾ ಕಾರ್ಯಕ್ರಮಗಳನ್ನು ನಡೆಸುತ್ತಿವೆ ಮತ್ತು ಎಡ್-ಟೆಕ್ ಕಂಪನಿಗಳು ಈ ಕುರಿತು ಪತ್ರಿಕೆಗಳು, ಸಾಮಾಜಿಕ ಮಾಧ್ಯಮ ಮತ್ತು ದೂರದರ್ಶನದಲ್ಲಿ ಜಾಹೀರಾತು ನೀಡುತ್ತಿರುವುದು ಇತ್ತೀಚೆಗೆ ಯುಜಿಸಿ ಗಮನಕ್ಕೆ ಬಂದಿದೆ'' ಎಂದಿದ್ದಾರೆ.

ಇದನ್ನೂ ಓದಿ-Trending News: Twitter ನಲ್ಲಿ #CancelBoardExam2022 ಟ್ರೆಂಡಾಗುತ್ತಿರುವುದೇಕೆ? ತಪ್ಪದೆ ಓದಿ

ಇಂತಹ ಎಡ್-ಟೆಕ್ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ. ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಶಿಕ್ಷಣವನ್ನು ಒದಗಿಸಲು ಎಡ್-ಟೆಕ್ ಕಂಪನಿಗಳು ತಂತ್ರಜ್ಞಾನವನ್ನು ಬಳಸುತ್ತವೆ. ಇದೇ ರೀತಿಯ ಸೂಚನೆಯಲ್ಲಿ, ಶಿಕ್ಷಣ ಸಂಸ್ಥೆಗಳು ಮತ್ತು ಎಡ್-ಟೆಕ್ ಕಂಪನಿಗಳ ನಡುವೆ ಯಾವುದೇ ರೀತಿಯ 'ಫ್ರಾಂಚೈಸಿ' ಒಪ್ಪಂದದ ವಿರುದ್ಧ AICTE ಎಚ್ಚರಿಕೆ ನೀಡಿದೆ. ಈ ತಿಂಗಳ ಆರಂಭದಲ್ಲಿ, ಶಿಕ್ಷಣ ಸಚಿವಾಲಯವು ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ಎಡ್-ಟೆಕ್ ಕೋರ್ಸ್‌ಗಳಿಗೆ ಪ್ರವೇಶವನ್ನು ತೆಗೆದುಕೊಳ್ಳುವ ಮೊದಲು ಮತ್ತು ಅದಕ್ಕೆ ಶುಲ್ಕ ಪಾವತಿಸುವ ಮೊದಲು ಸರಿಯಾದ ರೀತಿಯಲ್ಲಿ ತಪಾಸಣೆ ನಡೆಸುವಂತೆ ಸಲಹೆಯನ್ನು ನೀಡಿತ್ತು.

ಇದನ್ನೂ ಓದಿ-ಸಂಪುಟ ವಿಸ್ತರಣೆ: ರಮೇಶ್ ಜಾರಕಿಹೊಳಿಗೆ ಮತ್ತೆ ಒಲಿಯುತ್ತಾ ಮಂತ್ರಿಗಿರಿ!?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News