Video: ನೈವೇದ್ಯ ಕದ್ದ ಎಂದು 11 ವರ್ಷದ ಬಾಲಕನನ್ನು ಮರಕ್ಕೆ ಕಟ್ಟಿ ಥಳಿಸಿದ ಅರ್ಚಕ..!

ದೇವರ ನೈವೇದ್ಯೆಕ್ಕೆಂದು ಇಟ್ಟಿದ್ದ ಬಾದಾಯಿಯನ್ನು ಕದ್ದು ತಿಂದ ಎಂಬ ಕ್ಷುಲ್ಲಕ ಕಾರಣಕ್ಕೆ 11 ವರ್ಷದ ಬಾಲಕನನ್ನು ಮರಕ್ಕೆ ಕಟ್ಟಿ ಥಳಿಸಿರುವ ಘಟನೆ ಮಧ್ಯಪ್ರದೇಶದ ಸಾಗರ ಜಿಲ್ಲೆಯ ಜೈನ ಮಂದಿರವೊಂದರಲ್ಲಿ ಜರುಗಿದೆ.

Written by - Krishna N K | Last Updated : Sep 11, 2022, 03:22 PM IST
  • ಬಾದಾಯಿ ಕದ್ದು ತಿಂದ ಎಂಬ ಕ್ಷುಲ್ಲಕ ಕಾರಣಕ್ಕೆ 11 ವರ್ಷದ ಬಾಲಕನ ಮೇಲೆ ಅರ್ಚಕನಿಂದ ಹಲ್ಲೆ
  • ಮಧ್ಯಪ್ರದೇಶದ ಸಾಗರ ಜಿಲ್ಲೆಯ ಜೈನ ಮಂದಿರವೊಂದರಲ್ಲಿ ನಡೆದ ಘಟನೆ
  • ಹಲ್ಲೆಗೊಳಗಾದ ಬಾಲಕನ ತಂದೆಯ ದೂರಿನ ಮೇಲೆ ಅರ್ಚನನ್ನು ವಶಕ್ಕೆ ಪಡೆದ ಪೊಲೀಸರು
Video: ನೈವೇದ್ಯ ಕದ್ದ ಎಂದು 11 ವರ್ಷದ ಬಾಲಕನನ್ನು ಮರಕ್ಕೆ ಕಟ್ಟಿ ಥಳಿಸಿದ ಅರ್ಚಕ..! title=

ಸಾಗರ್ : ‌ದೇವರ ನೈವೇದ್ಯೆಕ್ಕೆಂದು ಇಟ್ಟಿದ್ದ ಬಾದಾಯಿಯನ್ನು ಕದ್ದು ತಿಂದ ಎಂಬ ಕ್ಷುಲ್ಲಕ ಕಾರಣಕ್ಕೆ 11 ವರ್ಷದ ಬಾಲಕನನ್ನು ಮರಕ್ಕೆ ಕಟ್ಟಿ ಥಳಿಸಿರುವ ಘಟನೆ ಮಧ್ಯಪ್ರದೇಶದ ಸಾಗರ ಜಿಲ್ಲೆಯ ಜೈನ ಮಂದಿರವೊಂದರಲ್ಲಿ ಜರುಗಿದೆ.

ಬಾಲಕನನ್ನು ಅರ್ಚಕ ಇನ್ನೊಬ್ಬ ವ್ಯಕ್ತಿಯ ಸಹಾಯದಿಂದ ಮರಕ್ಕೆ ಕಟ್ಟಿ ಥಳಿಸುತ್ತಿರುವುದು ಮತ್ತು ಬಾಲಕ ಸಹಾಯಕ್ಕಾಗಿ ಅಂಗಲಾಚುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹಲ್ಲೆಗೊಳಗಾದ ಬಾಲಕನ ತಂದೆಯ ದೂರಿನ ಮೇರೆಗೆ ಅರ್ಚಕ ರಾಕೇಶ್‌ ಜೈನ್‌ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.

ಬಾಲಕನನ್ನು ಥಳಿಸಲು ಅರ್ಚಕನಿಗೆ ಸಹಾಯ ಮಾಡಿದ ವ್ಯಕ್ತಿಯ ವಿರುದ್ದವು ಪೊಲೀಸರು ಪ್ರಕರಣವನ್ನ ದಾಖಲಾಗಿದೆ. ಸದ್ಯ ಅರ್ಚಕ ಹಾಗೂ ಬಾಲಕನನ್ನು ಥಳಿಸಲು ಸಹಾಯ ಮಾಡಿದ ಇಬ್ಬರ ವಿರುದ್ದ ಜಾತಿ ನಿಂದನೆ ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದಿ: ಇದೆಂತಾ ಆಶ್ಚರ್ಯ! ಇದ್ದಕ್ಕಿದ್ದಂತೆ ಮೋಡದಲ್ಲಿ ಕಾಣಿಸಿಕೊಂಡ ಕ್ವೀನ್ ಎಲಿಜಬೆತ್ ಚಿತ್ರ

ಉಪ್ಪಿನರಾಶಿಯಲ್ಲಿ ಯುವತಿಯ ಶವ ಇಟ್ಟು ಬದುಕಿಸಲು ಯತ್ನ

ಕೆರೆಯಲ್ಲಿ ಸೆಲ್ಫೀ ತೆಗೆದುಕೊಳ್ಳಲು ಹೋಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದ ಯುವತಿಯನ್ನು ಬದುಕಿಸಲು ಉಪ್ಪಿನ ರಾಶಿಯಲ್ಲಿ ಮೃತದೇಹ ಮುಚ್ಚಿಟ್ಟ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಜಂಬಿಗೆಮರದಹಳ್ಳಿ ಗ್ರಾಮದಲ್ಲಿ ನಡೆದಿದೆ. ಶಿಡ್ಲಘಟ್ಟ ತಾಲ್ಲೂಕಿನ ಗಾಜುಲವಾರಪಲ್ಲಿ ಮೂಲದ ಅಮೃತ ಮೃತ ದುರ್ದೈವಿ. ಅಮೃತ ಜಂಬಿಗೆಮರದಹಳ್ಳಿಯಲ್ಲಿರುವ ತನ್ನ ಚಿಕ್ಕಮ್ಮನ್ನ ಮನೆಗೆ ಬಂದಿದ್ದಳು. ಗ್ರಾಮದ ಕೆರೆಯಲ್ಲಿ ಸೆಲ್ಫೀ ತೆಗೆದುಕೊಳ್ಳಲು ಹೋಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಳು.

ಯುವತಿಯನ್ನ ತಕ್ಷಣ ನೀರಿನಿಂದ ಮೇಲೆತ್ತಿ ದೇಹದ ತುಂಬೆಲ್ಲಾ ಉಪ್ಪು ಸುರಿದು ಬದುಕಿಸಲು ಯತ್ನಿಸಿಲಾಯಿತು. ಉಪ್ಪಿನರಾಶಿಯಲ್ಲಿ ದೇಹ ಇಟ್ಟರೆ ಬದುಕುತ್ತಾರೆ ಎನ್ನುವುದು ಗ್ರಾಮಸ್ಥರ ನಂಬಿಕೆಯಾಗಿತ್ತು. ಗುಡಿಬಂಡೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News