Delhi Liquor Policy : 'ಮನೀಶ್ ಸಿಸೋಡಿಯಾಗೆ ಬಿಜೆಪಿ ಸವಾಲು : ನೀವು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ'

ದೆಹಲಿಯಲ್ಲಿ ಕೋಟ್ಯಂತರ ರೂಪಾಯಿ ಹಗರಣ ನಡೆದಿದೆ. ಇದಕ್ಕೆ ದಿಲ್ಲಿಯ ಎಎಪಿ ಸರ್ಕಾರ ಉತ್ತರಿಸಬೇಕಿದೆ ಎಂದು ಎಎಪಿಗೆ ಬಿಜೆಪಿ ಹಲವು ಪ್ರಶ್ನೆಗಳನ್ನು ಕೇಳಿದೆ.

Written by - Channabasava A Kashinakunti | Last Updated : Aug 24, 2022, 03:33 PM IST
  • 'ಎಎಪಿ ಪ್ರತಿಕ್ರಿಯಿಸುತ್ತಿಲ್ಲ'
  • 'ಸಿಸೋಡಿಯಾ ವಿರುದ್ಧ ಸಾಕ್ಷ್ಯಾಧಾರಗಳಿವೆ'
  • ಬಿಜೆಪಿ ವಿರುದ್ಧ ಆರೋಪಿಸಿದ ಸಿಎಂ ಕೇಜ್ರಿವಾಲ್
Delhi Liquor Policy : 'ಮನೀಶ್ ಸಿಸೋಡಿಯಾಗೆ ಬಿಜೆಪಿ ಸವಾಲು : ನೀವು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ' title=

Delhi Liquor Policy : ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮದ್ಯ ನೀತಿಯ ವಿವಾದವು ನಿಲ್ಲುತ್ತಿಲ್ಲ. ಈಗ ಆಮ್ ಆದ್ಮಿ ಪಕ್ಷದ ಮೇಲೆ ಬಿಜೆಪಿ ಭಾರಿ ಆರೋಪ ಮಾಡಿದೆ. ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಸುದ್ದಿಗೋಷ್ಠಿ ನಡೆಸಿ, ಡಿಸಿಎಂ ಮನೀಶ್ ಸಿಸೋಡಿಯಾ ಅವರಿಗೆ ನೀವು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ದೆಹಲಿಯಲ್ಲಿ ಕೋಟ್ಯಂತರ ರೂಪಾಯಿ ಹಗರಣ ನಡೆದಿದೆ. ಇದಕ್ಕೆ ದಿಲ್ಲಿಯ ಎಎಪಿ ಸರ್ಕಾರ ಉತ್ತರಿಸಬೇಕಿದೆ ಎಂದು ಎಎಪಿಗೆ ಬಿಜೆಪಿ ಹಲವು ಪ್ರಶ್ನೆಗಳನ್ನು ಕೇಳಿದೆ.

'ಎಎಪಿ ಪ್ರತಿಕ್ರಿಯಿಸುತ್ತಿಲ್ಲ'

ಇನ್ನು ಮುಂದುವರೆದು ಮಾತನಾಡಿದ ಸಂಬಿತ್ ಪಾತ್ರ, ಆಮ್ ಆದ್ಮಿ ಪಕ್ಷ ಅಲ್ಲಿ ಇಲ್ಲಿ ಮಾತನಾಡಲು ಪ್ರಯತ್ನಿಸುತ್ತಿದೆ, ಆದರೆ ಮನೀಶ್ ಸಿಸೋಡಿಯಾ ಕೋಟ್ಯಂತರ ರೂಪಾಯಿ ವಂಚಿಸಿದ್ದಾರೆಯೇ ಎಂಬ ವಿಷಯದ ಬಗ್ಗೆ ಉತ್ತರಿಸುತ್ತಿಲ್ಲ. ಕಳೆದ ಕೆಲವು ದಿನಗಳಿಂದ ಆಮ್ ಆದ್ಮಿ ಪಕ್ಷದಲ್ಲಿ ಕಂಡುಬರುತ್ತಿರುವ ಒಂದು ರೀತಿಯ ತಲ್ಲಣ, ಆಮ್ ಆದ್ಮಿ ಪಕ್ಷವನ್ನು ಮನೀಶ್ ಸಿಸೋಡಿಯಾ ಸುತ್ತುವರೆದಿರುವಂತೆ ಕಾಣುವುದರಲ್ಲಿ ಸಂಶಯವಿಲ್ಲ ಎಂದು ಹೇಳಿದರು.

ಇದನ್ನೂ ಓದಿ : ಪಕ್ಷ ಬದಲಾಯಿಸಲು 4 ಶಾಸಕರಿಗೆ ಬಿಜೆಪಿ ತಲಾ 20 ಕೋಟಿ ರೂ. ಆಫರ್!: AAP ಸಂಸದ ಸಂಜಯ್ ಸಿಂಗ್ ಆರೋಪ

'ಸಿಸೋಡಿಯಾ ವಿರುದ್ಧ ಸಾಕ್ಷ್ಯಾಧಾರಗಳಿವೆ'

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮನೀಶ್ ಸಿಸೋಡಿಯಾ ಅವರೆ ನೀವು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ಭ್ರಷ್ಟಾಚಾರದ ವಿರುದ್ಧ ಹೋರಾಡುವುದು ಮತ್ತು ಭ್ರಷ್ಟರನ್ನು ಅಂತ್ಯಕ್ಕೆ ತರುವುದು ದೇಶದ ಸಂವಿಧಾನದ ವ್ಯಾಪ್ತಿ. ಸಿಸೋಡಿಯಾ ಅವರೆ, ನೀವು ಭ್ರಷ್ಟಾಚಾರ ಮಾಡಿದ್ದೀರಿ, ಸಾಕ್ಷ್ಯಾಧಾರಗಳಿವೆ, ತನಿಖೆ ನಡೆಯುತ್ತಿದೆ ಎಂದು ಹೇಳಿದರು.

ಬಿಜೆಪಿ ವಿರುದ್ಧ ಆರೋಪಿಸಿದ ಸಿಎಂ ಕೇಜ್ರಿವಾಲ್ 

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಕಳೆದ 2-3 ದಿನಗಳಲ್ಲಿ ಕೆಲವು ಎಎಪಿ ಶಾಸಕರು ತಮಗೆ ಸಿಬಿಐ ಮತ್ತು ಇಡಿ ಬೆದರಿಕೆ ಹಾಕುತ್ತಿದ್ದಾರೆ, ಎಎಪಿ ತೊರೆಯುವಂತೆ ಹಣದ ಆಮಿಷ ಒಡ್ಡುತ್ತಿದ್ದಾರೆ ಎಂದು ಹೇಳಿದ್ದಾರೆ. ಇದು ಬಹಳ ಗಂಭೀರವಾದ ಸಮಸ್ಯೆಯಾಗಿದೆ. ಈ ಬಗ್ಗೆ ಚರ್ಚಿಸಲು ಸಂಜೆ 4 ಗಂಟೆಗೆ ನಮ್ಮ ರಾಜಕೀಯ ವ್ಯವಹಾರಗಳ ಸಭೆ ಕರೆದಿದ್ದೇವೆ ಎಂದು ಹೇಳಿದ್ದರು.

ಇದನ್ನೂ ಓದಿ : Airtel - BSNL ಬೆವರಿಳಿಸಿದ Jio ಆಫರ್‌! ಅತಿ ಕಡಿಮೆ ವೆಚ್ಚದಲ್ಲಿ ಸೂಪರ್ಫಾಸ್ಟ್ ಇಂಟರ್ನೆಟ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News