Delhi Unlock 3: ಮುಂದಿನ ವಾರದಿಂದ ಸಲೂನ್, ವಾರದ ಮಾರುಕಟ್ಟೆ ಕಾರ್ಯಾರಂಭ ?

Delhi Unlock 3: ರಾಷ್ಟ್ರ ರಾಜಧಾನಿಯಲ್ಲಿ ಕರೋನಾ ವೈರಸ್ ಪ್ರಕರಣಗಳಲ್ಲಿ ಇಳಿಮುಖ ಕಂಡು ಬರುತ್ತಿದೆ. ಇದೀಗ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು,ಮುಂದಿನ ವಾರದಿಂದ ಸಲೂನ್ ಮತ್ತು ವಾರದ ಮಾರುಕಟ್ಟೆಗಳನ್ನು ತೆರೆಯಲು ಅಧಿಕಾರಿಗಳು ಅವಕಾಶ ನೀಡಬಹುದು ಎನ್ನಲಾಗಿದೆ.

Written by - Ranjitha R K | Last Updated : Jun 13, 2021, 08:44 AM IST
  • ಅನ್ ಲಾಕ್ ನತ್ತ ರಾಷ್ಟ್ರ ರಾಜಧಾನಿ?
  • ಮುಂದಿನ ವಾರದಿಂದ ಲಾಕ್ಡೌನ್ ನಿಯಮ ಸಡಿಲ ಸಾಧ್ಯತೆ
  • ದೆಹಲಿಯಲ್ಲಿ 0.3 ಶೇಕಡಾಕ್ಕೆ ಇಳಿದ ಸೋಂಕಿನ ಪ್ರಮಾಣ
Delhi Unlock 3:  ಮುಂದಿನ ವಾರದಿಂದ ಸಲೂನ್, ವಾರದ ಮಾರುಕಟ್ಟೆ ಕಾರ್ಯಾರಂಭ ? title=
ಅನ್ ಲಾಕ್ ನತ್ತ ರಾಷ್ಟ್ರ ರಾಜಧಾನಿ? (photo zee news)

ನವದೆಹಲಿ : ರಾಷ್ಟ್ರ ರಾಜಧಾನಿಯಲ್ಲಿ ಕರೋನಾ ವೈರಸ್ (Covid-19) ಪ್ರಕರಣಗಳಲ್ಲಿ ಇಳಿಮುಖ ಕಂಡು ಬರುತ್ತಿದೆ. ಇದೀಗ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು,ಮುಂದಿನ ವಾರದಿಂದ ಸಲೂನ್ ಮತ್ತು ವಾರದ ಮಾರುಕಟ್ಟೆಗಳನ್ನು ತೆರೆಯಲು ಅಧಿಕಾರಿಗಳು ಅವಕಾಶ ನೀಡಬಹುದು ಎನ್ನಲಾಗಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) , ಇತ್ತೀಚೆಗೆ ಮಾರುಕಟ್ಟೆ, ಮಾಲ್ ಮತ್ತು ದೆಹಲಿ ಮೆಟ್ರೋ ಸೇವಾ ಕಾರ್ಯಾಚರಣೆಗಳ ಮರು ಆರಂಭಕ್ಕೆ ಹಸಿರು ಅನುಮತಿ ನೀಡಿದ್ದರು. ಕರೋನಾದ ಪರಿಸ್ಥಿತಿ ಸುಧಾರಿಸಿದರೆ ಮುಂದಿನ ದಿನಗಳಲ್ಲಿ ಇನ್ನೂ ಕೆಲವು ಚಟುವಟಿಕೆಗಳನ್ನು ಪ್ರಾರಂಭಿಸಲು ಅವಕಾಶ ನೀಡುವುದಾಗೊಯೂ ಈ ಸಂದರ್ಭದಲ್ಲಿ ಹೇಳಿದ್ದರು. 

ಲಾಕ್ ಡೌನ್  ನಿಯಮ ಸಡಿಲಗೊಳಿಸುವ ಸಾಧ್ಯತೆ : 
ಮೂಲಗಳ ಪ್ರಕಾರ, ದೆಹಲಿ ಸರ್ಕಾರವು (Delhi government) ಮುಂದಿನ ವಾರದಿಂದ ಲಾಕ್ ಡೌನ್ ನಿಯಮಗಳನ್ನು (Lockdown guidelines) ಸಡಿಲಗೊಳಿಸುವ ಸಾಧ್ಯತೆ ಇದೆ. ಸಲೋನ್ (Saloon), ವಾರದ ಮಾರುಕಟ್ಟೆಗಳನ್ನು ತೆರೆಯಲು ಅವಕಾಶ ನೀಡುವ ಸಂಭವ ಹೆಚ್ಚಿದೆ. ಇದಲ್ಲದೆ, ಜಿಮ್‌ಗಳು, ಚಿತ್ರಮಂದಿರಗಳು ಮತ್ತು ರೆಸ್ಟೋರೆಂಟ್‌ಗಳನ್ನು ತೆರೆಯಲು ಕೂಡಾ ಅವಕಾಶ ನೀಡಬಹುದು ಎನ್ನಲಾಗಿದೆ. ಈ ಹಿಂದೆ, ಲಾಕ್‌ಡೌನ್ (lockdown) ಅಡಿಯಲ್ಲಿ ವಿಧಿಸಲಾಗಿದ್ದ ನಿರ್ಬಂಧಗಳನ್ನು ತೆಗೆದುಹಾಕಿ, ಮೇ 31 ರಿಂದ ಹಂತ ಹಂತವಾಗಿ ನಿರ್ಮಾಣ ಕಾರ್ಯಗಳು ಮತ್ತು ಕಾರ್ಖಾನೆಗಳನ್ನು ತೆರೆಯಲು ಸರ್ಕಾರ ಅನುಮತಿ ನೀಡಿತ್ತು.

ಇದನ್ನೂ ಓದಿ : ಮನೆ ಮನೆಗೆ ಕೊರೊನಾ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಈ ನಗರಿ

ದೆಹಲಿಯ ಕರೋನಾ ಬುಲೆಟಿನ್ : 
ದೆಹಲಿ ಸರ್ಕಾರದ ಆರೋಗ್ಯ ಬುಲೆಟಿನ್ ಪ್ರಕಾರ, ಕಳೆದ 24 ಗಂಟೆಗಳಲ್ಲಿ,  213 ಪ್ರಕರಣಗಳು ಹೊಸ ಕರೋನಾ ಪ್ರಕರಣಗಳು (COVID-19) ವರದಿಯಾಗಿವೆ. 25 ರೋಗಿಗಳು ಸಾವನ್ನಪ್ಪಿದ್ದಾರೆ. ಅದರಂತೆ, ಸೋಂಕಿನ ಪ್ರಮಾಣವು ಶೇಕಡಾ 0.3 ಕ್ಕೆ ಇಳಿದಿದೆ. ಚೇಂಬರ್ ಆಫ್ ಟ್ರೇಡ್ ಅಂಡ್ ಇಂಡಸ್ಟ್ರಿ (CTI)  ಜೂನ್ 14 ರಿಂದ ಸಲೊನ್ಸ್ ಮತ್ತು ಜಿಮ್‌ಗಳನ್ನು ಮತ್ತೆ ತೆರೆಯುವಂತೆ ಒತ್ತಾಯಿಸಿದೆ. ಸಲೂನ್‌ಗಳು ಮತ್ತು ಜಿಮ್‌ಗಳನ್ನು ತೆರೆಯುವಂತೆ ಒತ್ತಾಯಿಸಿ ಸಿಟಿಐ ದೆಹಲಿ ಸರ್ಕಾರ ಮತ್ತು ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ (DDMC) ಪತ್ರ ಬರೆದಿದೆ ಎಂದು ಸಿಟಿಐ ಅಧ್ಯಕ್ಷ ಬ್ರಿಜೇಶ್ ಗೋಯಲ್ ಹೇಳಿದ್ದಾರೆ. 

ಇದನ್ನೂ ಓದಿ : Nicotine Selling License: 'ಇನ್ಮುಂದೆ ತಂಬಾಕು, ಸಿಗರೇಟ್ ಮಾರಾಟ ಮಾಡಲೂ ಕೂಡ ಲೈಸನ್ಸ್ ಪಡೆಯಬೇಕು'

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News