ನಾಳೆಯಿಂದ ಬ್ಯಾಂಕಿನಲ್ಲಿ ಹಣದ ಠೇವಣಿ, ಡ್ರಾ ದುಬಾರಿ; ಇಲ್ಲಿದೆ ಮುಖ್ಯ ಮಾಹಿತಿ

ಐಸಿಐಸಿಐ ಬ್ಯಾಂಕ್ ತನ್ನ ಉಳಿತಾಯ ಖಾತೆಯಲ್ಲಿ ಹಣವನ್ನು ಠೇವಣಿ ಮತ್ತು ಹಿಂಪಡೆಯುವ ಶುಲ್ಕವನ್ನು ಡಿಸೆಂಬರ್ 15 ರಿಂದ ಹೆಚ್ಚಿಸಲಿದೆ. ಡಿಸೆಂಬರ್ 15 ರಿಂದ, ಬ್ಯಾಂಕಿನ ಗ್ರಾಹಕರು ನಿಗದಿತ ಮಿತಿಗಿಂತ ಹೆಚ್ಚು ನಗದು ವಹಿವಾಟು ನಡೆಸಿದರೆ ಹೆಚ್ಚಿನ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

Yashaswini V Yashaswini V | Updated: Dec 14, 2019 , 01:46 PM IST
ನಾಳೆಯಿಂದ ಬ್ಯಾಂಕಿನಲ್ಲಿ ಹಣದ ಠೇವಣಿ, ಡ್ರಾ ದುಬಾರಿ;  ಇಲ್ಲಿದೆ ಮುಖ್ಯ ಮಾಹಿತಿ

ನವದೆಹಲಿ: ಐಸಿಐಸಿಐ ಬ್ಯಾಂಕ್(ICICI Bank) ತನ್ನ ಉಳಿತಾಯ ಖಾತೆಯಲ್ಲಿ ಹಣವನ್ನು ಠೇವಣಿ ಮತ್ತು ಹಿಂಪಡೆಯುವ ಶುಲ್ಕವನ್ನು ಡಿಸೆಂಬರ್ 15 ರಿಂದ ಹೆಚ್ಚಿಸಲಿದೆ. ಡಿಸೆಂಬರ್ 15 ರಿಂದ, ಬ್ಯಾಂಕಿನ ಗ್ರಾಹಕರು ನಿಗದಿತ ಮಿತಿಗಿಂತ ಹೆಚ್ಚಿನ ನಗದು ವಹಿವಾಟು ನಡೆಸಿದರೆ ಹೆಚ್ಚಿನ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

ಇದನ್ನು ನೆನಪಿನಲ್ಲಿಡಿ:
ಐಸಿಐಸಿಐ ಬ್ಯಾಂಕ್ ನೀಡಿದ ಮಾಹಿತಿಯ ಪ್ರಕಾರ, ಡಿಸೆಂಬರ್ 15 ರಿಂದ ನಗದು ಠೇವಣಿ ಮತ್ತು ಡ್ರಾ ಎರಡರ ಮೇಲಿನ ಶುಲ್ಕವನ್ನು ಬದಲಾಯಿಸಲು ನಿರ್ಧರಿಸಲಾಗಿದೆ. ನಿಯಮಿತ ಉಳಿತಾಯ ಖಾತೆದಾರರಿಗೆ ಬ್ಯಾಂಕ್ ತನ್ನ ಶಾಖೆಯಲ್ಲಿ ನಿರ್ದಿಷ್ಟ ಸಂಖ್ಯೆಯವರೆಗೆ ಉಚಿತ ನಗದು ವಹಿವಾಟಿನ ಸೌಲಭ್ಯವನ್ನು ನೀಡುತ್ತದೆ. ಬ್ಯಾಂಕ್ ವಿವಿಧ ಬ್ಯಾಂಕ್ ಖಾತೆಗಳಲ್ಲಿ ಉಚಿತ ನಗದು ವಹಿವಾಟು ಮಿತಿಗಳನ್ನು ನಿಗದಿಪಡಿಸಿದೆ. ಈ ಮಿತಿ ಮೀರಿದ್ದೇ ಆದಲ್ಲಿ ಬ್ಯಾಂಕ್ ಖಾತೆದಾರರಿಗೆ ಶುಲ್ಕ ವಿಧಿಸುತ್ತದೆ.

ಯಾವ ವಹಿವಾಟಿಗೆ ಎಷ್ಟು ಶುಲ್ಕ:


ಬ್ಯಾಂಕಿನಿಂದ ವಿಧಿಸಲಾಗುವ ಶುಲ್ಕ:

  • ಗ್ರಾಹಕರು ಸಾಮಾನ್ಯ ಉಳಿತಾಯ ಖಾತೆಯಿಂದ ತಿಂಗಳಿಗೆ ನಾಲ್ಕು ಬಾರಿ ಮಾತ್ರ ಠೇವಣಿ ಇಡಬಹುದು ಮತ್ತು ಹಣವನ್ನು ಹಿಂಪಡೆಯಬಹುದು. ಈ ವಹಿವಾಟಿನ ನಂತರ, ಪ್ರತಿ ವಹಿವಾಟಿಗೆ 150 ರೂ. ಶುಲ್ಕ ಪಾವತಿಸಬೇಕಾಗುತ್ತದೆ.
  • ಅದೇ ಸಮಯದಲ್ಲಿ, ಗ್ರಾಹಕನು ತನ್ನ ಹೋಂ ಬ್ರಾಂಚ್ ಅಥವಾ ಖಾತೆಯಿಂದ ತನ್ನ ಶಾಖೆಯಿಂದ ಹಣವನ್ನು ಹಿಂತೆಗೆದುಕೊಂಡರೆ, ಅವನು ಒಂದು ತಿಂಗಳಲ್ಲಿ ಎರಡು ಲಕ್ಷ ರೂಪಾಯಿಗಳವರೆಗೆ ಹಣವನ್ನು ಹಿಂಪಡೆಯಬಹುದು. ಇದಕ್ಕಿಂತ ಹೆಚ್ಚಿನ ಹಣವನ್ನು ಹಿಂಪಡೆಯಲು, ಪ್ರತಿ 1000 ರೂಪಾಯಿಗೆ 05 ರೂ. ಗ್ರಾಹಕರಿಂದ ಕನಿಷ್ಠ 150 ರೂಪಾಯಿಗಳನ್ನು ವಿಧಿಸಲಾಗುತ್ತದೆ.
  • ಗ್ರಾಹಕರು ತಮ್ಮ ಹೋಂ ಬ್ರಾಂಚ್ ಅಲ್ಲದೆ ಇತರ ಶಾಖೆಯಿಂದ ಹಣವನ್ನು ಹಿಂತೆಗೆದುಕೊಂಡರೆ, ಅವರು ಯಾವುದೇ ಶುಲ್ಕವಿಲ್ಲದೆ 25000 ರೂ.ಗಳವರೆಗೆ ನಗದು ವಹಿವಾಟು ನಡೆಸಬಹುದು. 25 ಸಾವಿರ ರೂ.ಗಿಂತ ಹೆಚ್ಚಿನ ನಗದು ವಹಿವಾಟಿಗೆ, ಪ್ರತಿ 1000 ರೂಪಾಯಿಗೆ 5 ರೂಪಾಯಿ ದರದಲ್ಲಿ, ಕನಿಷ್ಠ 150 ರೂಪಾಯಿಗಳ ಶುಲ್ಕ ವಿಧಿಸಲಾಗುತ್ತದೆ.
  • ಗ್ರಾಹಕರು ಬೇರೊಬ್ಬರ ಖಾತೆಯಲ್ಲಿ 25,000 ರೂ.ಗಳವರೆಗೆ ಹಣವನ್ನು ಠೇವಣಿ ಇಟ್ಟರೆ, ನಂತರ ಅವರು ಪ್ರತಿ ವಹಿವಾಟಿನಲ್ಲೂ 150 ರೂ.ಗಳ ಶುಲ್ಕವನ್ನು ಪಾವತಿಸಬೇಕಾಗುತ್ತದೆ.